ಗಾಂಧಿಪಾರ್ಕ್ ನ ಪ್ರವೇಶ ದ್ವಾರದ ಬಳಿ ಯುವಕನ ಶವಪತ್ತೆ- Body of a young man found near the entrance of Gandhi Park

 SUDDILIVE || SHIVAMOGGA

ಗಾಂಧಿಪಾರ್ಕ್ ನ ಪ್ರವೇಶ ದ್ವಾರದ ಬಳಿ ಯುವಕನ ಶವಪತ್ತೆ-Body of a young man found near the entrance of Gandhi Park

Gandhi, park


ಅನಾಮಧೇಯ ಯುವಕನ ಶವವೊಂದು ಬಾಲರಾಜ ಅರಸ್ ರಸ್ತೆಯಲ್ಲಿರುವ ಗಾಂಧಿ ಪಾರ್ಕ್ ನ ಹಾಪ್ ಕಾಮ್ಸ್ ನ ಅಂಗಡಿಯ ಬಳಿ ನಿನ್ನೆ ಪತ್ತೆಯಾಗಿದೆ. ಮೃತನ ವಯಸ್ಸು 25 ರಿಂದ 30 ವರ್ಷದ ಇರಬಹುದು ಎಂದು ಗುರುತಿಸಲಾಗಿದೆ. 


ಸ್ಥಳೀಯರ ಮಾಹಿತಿ ಪ್ರಕಾರ ನಿನ್ನೆ ಮಧ್ಯಾಹ್ನ ಈ ಯುವಕ ಬಂದು ಒಂದು ಕಡೆ ವಾಲಿ ಹಾಗೆ ಮಲಗಿದವನು ಅಲುಗಾಡಿಲ್ಲ. ಸಂಜೆಯಾದರೂ ಈ ಯುವಕ ಎದ್ದೇಳದ ಹಿನ್ನಲೆಯಲ್ಲಿ ಕೋಲಿನಿಂದ ದಬ್ಬಿದ್ದಾರೆ. ಯಾವ ಕಡೆ ದಬ್ಬಿದರು ಆ ಕಡೆ ವಾಲುತ್ತಿದ್ದ ಈತನ ದೇಹವನ್ನ ಸ್ಥಳೀಯರೇ ಪರಿಶೀಲಿಸಿದಾಗ ದೇಹ ತಣ್ಣಗಾಗಿರೋದು ಗೊತ್ತಾಗಿದೆ. 

ಈ ಯುವಕನ ಬಳಿ ಯಾವುದೇ ಗುರಿನ ಚೀಟಿಯಾಗಲಿ ಏನೂ ಪತ್ತೆಯಾಗಿಲ್ಲ. ನಂತರ ಸ್ಥಳೀಯರು ಅಂಬ್ಯುಲೆನ್ಸ್ ಅವರಿಗೆ ಕರೆ ಮಾಡಿ ಆತನ ಹೆಣವನ್ನ ಸಾಗಿಸಿದ್ದಾರೆ. ಈತನ ಗುರುತು, ಈತನ ಸಾವು ಸಹ ಸಧ್ಯದ ವರೆಗೆ ನಿಗೂಢವಾಗಿದೆ.

Body of a young man found near the entrance of Gandhi Park

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close