ad

ಎಸ್ ಎನ್ ಪ್ರತಿಮೆ ಬಳಿ ಪಾರ್ಕಿಂಗ್ ನಿಷೇಧ, ನಗರದ ಒಳಗೆ ಭಾರಿ ವಾಹನಗಳ ಸಂಚಾರ ನಿಷೇಧ-Parking banned near SN statue

SUDDILIVE || SHIVAMOGGA

ಎಸ್ ಎನ್ ಪ್ರತಿಮೆ ಬಳಿ ಪಾರ್ಕಿಂಗ್ ನಿಷೇಧ, ನಗರದ ಒಳಗೆ ಭಾರಿ ವಾಹನಗಳ ಸಂಚಾರ ನಿಷೇಧ-Parking banned near SN statue, heavy vehicle movement banned within the city

Parking, ban

ಶಿವಮೊಗ್ಗದಲ್ಲಿ ವಾಹನ ದಟ್ಟಣೆಗೆ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದೆ. ಭಾರಿ ವಾಹನಗಳನ್ನ ನಿಷೇಧಿಸಿದರೆ, ದ್ವಿಚಕ್ರವಾಹನ ಮತ್ತು ನಾಲ್ಕು ಚಕ್ರವಾಹನವನ್ನ ಗಾಂಧಿ ಬಜಾರ್ ನ ಎಸ್ ಎನ್ ಪ್ರತಿಮೆಯ ಸುತ್ತಮುತ್ತ ಪಾರ್ಕಿಂಗ್ ನಿಷೇಧ ಮಾಡಿ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ಗೆ ಆದೇಶಿಸಿ ಎಲ್ಲೋ ಬಹುಮಹಡಿ ಕಟ್ಟಡಕ್ಕೆ ಅನುಕೂಲ ಮಾಡಿಕೊಟ್ಟುಬಿಟ್ರಾ ಎಂಬ ಅನುಮಾನಕ್ಕೂ ಈ ಆದೇಶ ಎಡೆಮಾಡಿಕೊಟ್ಟಿದೆ. 

ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಗೋಪಿವೃತ್ತದಿಂದ ಜೆಪಿಎನ್ ರಸ್ತೆ, ಜ್ಯೂವೆಲ್ ರಾಕ್ ಹೋಟೆಲ್ ರಸ್ತೆ, ಕುವೆಂಪು ರಸ್ತೆ ಜೈಲ್ ವೃತ್ತದಿಂದ ಲಕ್ಷ್ಮೀ ಚಲನಚಿತ್ರ ಮಂದಿರದ ಕಡೆಗೆ ಹೋಗಲು ಈ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರವನ್ನ‌ನಿಷೇಧಿಸಲಾಗಿದೆ. 

ಅಚ್ಚರಿ ಎಂದರೆ ಈ ರಸ್ತೆಗಳಲ್ಲಿ ಬೆಳಿಗ್ಗೆ 7 ರಿಂದ  ರಾತ್ರಿ 9 ಗಂಟೆಯ ವರೆಗೆ ಬಹುತೇಕ ಭಾರಿ ವಾಹನಗಳು ಓಡಾಡೋದೆ ಇಲ್ಲ. ಆದರೆ ಸಿಟಿ ಬಸ್ ಗಳು ಓಡಾಡಲಿದೆ ಅವುಗಳನ್ನ ಏನು ಮಾಡ್ತೀರಿ? ಸಿಟಿ ಬಸ್ ಗಳ ಮತ್ತು ಕೆಲ ಆಟೋಗಳ ಆಟಾಟೋಪಗಳು ನಗರದಲ್ಲಿ ವಾಹನ ಸಂಚಾರಕ್ಕೆ ಅಡತಡೆಗಳನ್ನ ಉಂಟಾಗುತ್ತಿವೆ. 

ಇನ್ನೂ ಕೆಲ KSRTC ಬಸ್ ಗಳು ನಗರದಲ್ಲಿ ಓಡಾಡಬಾರದು ಎಂದು ಆದೇಶವಿದ್ದರೂ ನಗರದ ಒಳಗೆ ಬರುತ್ತಿವೆ. ಈ ಸರ್ಕಾರಿ ವಾಹನಗಳನ್ನೇ ನಿಯಂತ್ರಿಸಲು ಆಗುತ್ತಿಲ್ಲ. ಇನ್ನು ಈ ಆದೇಶಗಳು ಕಾನೂನು ಉಲ್ಲಂಘನೆಯಾದಾಗ ಬಗ್ಗುಬಡಿಯಲು ಬಳಸಲು ಆದೇಶಿಸಲಾಗಿದೆಯಾ ಎಂಬ ಅನುಮಾನಕ್ಕೆ ಈಡಾಗಿದೆ. 

ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ? 

ಇಷ್ಟು ದಿನ ಉಚಿತವಾಗಿ ಬಿಟ್ಟು ಇನ್ನೂ ಶಿವಪ್ಪ ನಾಯಕನ ವೃತ್ತದ ಸುತ್ತಮುತ್ತ ಕಾರು ಮತ್ತು ದ್ವಿಚಕ್ರವಾಹನಗಳ ಪಾರ್ಕಿಂಗ್ ನಿಷೇಧಿಸಿ ಆದೇಶ ಮಾಡಲಾಗಿದೆಯಾ ಎಂಬ ಅನುಮಾನವನ್ನೂ ಹುಟ್ಟಿಹಾಕಿದೆ. ಎನಿವೇ! ಮಹಾನಗರ ಪಾಲಿಕೆಯ ಕಾಂಪ್ಲೆಕ್ಸ್ ನಿಂದ ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್, ಸಂಗಮ್ ಟೈಲರ್ ಶಾಪ್ ನಿಂದ ಡಯಟ್ ಕಾಲೇಜಿನ ಜ್ರಾಸ್ ವರೆಗೆ ಬಲಬದಿಯ ಪಾರ್ಕಿಂಗ್ ನಿಷೇಧಿಸಲಾಗಿದೆ. 

ಅಮೀರ್ ಅಹಮದ್ ವೃತ್ತದಿಂದ  ವೆಂಕಟೇಶ ಸ್ವೀಟ್ ಹೌಸ್ ನಿಂದ ಕರ್ನಾಟಕ ಸಂಘ ಸರ್ಕಲ್ ವರೆಗೆ ಎಡಬಲ ಬದಿಯಲ್ಲಿ, ಶಿವಪ್ಪ ನಾಯಕ ವೃತ್ತದಿಂದ ಗಾಂಧಿ ಬಜಾರ್ 2 ನೇ ವೃತ್ತದ ವರೆಗೆ ಎರಡೂ ಬದಿಯಲ್ಲಿರುವ ಕಾರು ಪಾರ್ಕಿಂಗ್ ಗೆ ನಿಷೇಧಿಸಲಾಗಿದೆ. ಇಲ್ಲಿನವರೆಲ್ಲಾ ಬಹುಮಹಡಿ ಕಟ್ಡದಲ್ಲಿ ಮಲ್ಟಿ ಪಾರ್ಕಿಂಗ್ ಕಟ್ಟಡದಲ್ಲಿ ಪಾರ್ಕ್ ಮಾಡಲು ಸೂಚಿಸಲಾಗಿದೆ. 

Parking banned near SN statue, heavy vehicle movement banned within the city

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close