SUDDILIVE || SHIVAMOGGA
ದೆಹಲಿಯಲ್ಲಿ ಕಾರು ಸ್ಪೋಟ-ಬಿಎಸ್ ವೈ ಖಂಡನೆ- Car blast in Delhi- BSY condemns
ದೆಹಲಿಯಲ್ಲಿ ನಡೆದ ಕಾರು ಸ್ಪೋಟವನ್ನ ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. 24 ಗಂಟೆಯಲ್ಲಿ ಕೇಂದ್ರ ಸರ್ಕಾರ ಆರೋಪಿಗಳನ್ನು ಬಂಧಿಸಿದ್ದು ಇದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಸಾಧನೆಯಿಂದಾಗಿ ಎಂದು ಬಣ್ಣಿಸಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೆಹಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪಿಗಳು ವೈದ್ಯರೆಂಬುದೇ ಕಳವಳ ಮತ್ತು ಆತಂಕ ತಂದಿರೋ ವಿಚಾರವಾಗಿದೆ ಬಹುತೇಕ ಎಲ್ಲರೂ ಈ ಪ್ರಕರಣದಲ್ಲಿ ಬಂದಿತರಾಗಿದ್ದಾರೆ ಇದಕ್ಕೆ ಬೆಂಬಲಿಸಿದವರನ್ನು ಸಹ ಪ್ರಧಾನ ಮೋದಿಯವರು ಬಿಡುವುದಿಲ್ಲ ಎಂದು ಹೇಳಿರುವುದು ನಿಟ್ಟಿಸಿರು ಬಿಡುವಂತಾಗಿದೆ ಎಂದು ತಿಳಿಸಿದರು.
ನವಂಬರ್ ಕ್ರಾಂತಿ ಹಾಗೂ ಬಿಜೆಪಿಯಲ್ಲಿನ ಅಧ್ಯಕ್ಷರ ಬದಲಾವಣೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಬಿಎಸ್ವೈ ನಿರಾಕರಿಸಿದ್ದಾರೆ.
Car blast in Delhi- BSY condemns
