SUDDILIVE || SHIVAMOGGA
ಮೃತ್ಯು ಕೋಪಗಳಾಗುತ್ತಿರುವ ಸಮಾಜ ಕಲ್ಯಾಣದ ಹಾಸ್ಟೆಲ್ ಗಳು ಕನ್ನಡ ಕಾರ್ಮಿಕರ ಕ್ಷಣ ವೇದಿಕೆಯ ಬೇಡಿಕೆಯನ್ನು ಗೊತ್ತಾ? Do you know what the Kannada Workers' Forum demands for social welfare hostels where death sentences are being imposed
ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ವ್ಯಾಸಂಗ ಮಾಡಲು ಬಂದ ವಿದ್ಯಾರ್ಥಿನಿಯರು ಹೆಣವಾಗುತ್ತಿರುವುದನ್ನು ಖಂಡಿಸಿ ಕಾರ್ಮಿಕ ರಕ್ಷಣ ವೇದಿಕೆ ಇಂದು ಡಿಸಿ ಕಚೇರಿಯಲ್ಲಿ ಮನವಿ ಸಲ್ಲಿಸಿತು.
ಕಳೆದ ವಾರ ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಭದ್ರಾವತಿ ತಾಲೂಕಿನ ಗಂಗೂರು ಗ್ರಾಮದ ವಾಸಿ ವನಿಷ ಎಂಬ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಇವಳ ಸಾವಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.
ಈಕೆಯ ಸಾವಿಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ತಾಲೂಕು ಅಧಿಕಾರಿ ಸುರೇಶ್ ವಾರ್ಡನ್ ಸ್ವಪ್ನ ಕಾರಣರಾಗಿದ್ದಾರೆ. ಇವರನ್ನು ಸರ್ಕಾರದ ಸೇವೆಯಿಂದ ವಜಗೊಳಿಸಬೇಕು ವಿದ್ಯಾರ್ಥಿಗಳ ಭವಿಷ್ಯದ ಹಾಗೂ ಸಾವಿಗೆ ಕಾರಣರಾದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಬೇಕು ಇಲ್ಲವಾದಲ್ಲಿ ಸಾವಿಗೆ ನ್ಯಾಯ ದೊರೆಯುವುದಿಲ್ಲ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಗಳು ಅಲ್ಲಿನ ಸಿಬ್ಬಂದಿಗಳಿಗೆ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮೃತ್ಯು ಕೋಪಗಳಾಗಿ ಪರಿವರ್ತನೆಯಾಗುತ್ತಿದ್ದಾರೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಬಾಗಿಲಲ್ಲೇ ಬೃಹಧರಣಿ ನಡೆಸುವುದಾಗಿ ವೇದಿಕೆ ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್ ಪ್ರವೀಣ್ ಸತೀಶ್ ಗೌಡ್ರು ಸಂಜು ಕುಮಾರ್ ಲೋಕೇಶ್ ಮೊದಲಾದರು ಉಪಸ್ಥಿತರಿದ್ದರು.
