SUDDILIVE || SHIVAMOGGA
ಬಿಜೆಪಿ ಕಚೇರಿ ಎದುರು ಸಂಭ್ರಮಾಚರಣೆ, ಹಿಂದುತ್ವದ ಯುಗ ಎಂದ್ರು ಚೆನ್ನಿ, ಸುವರ್ಣಯುಗ ಎಂದ್ರು ಡಾ.ಸರ್ಜಿ -Celebration in front of BJP office, Chennai calls it the era of Hindutva, Dr. Sarji calls it the golden age
ನಗರದ ಬಿಜೆಪಿ ಕಚೇರಿಯ ಮುಂದೆ ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಭಾರಿ ಮುನ್ನಡೆ ಹಿನ್ನಲೆಯಲ್ಲಿ ಸಂಭ್ರಮಾಚರಣೆ ನಡೆದಿದೆ.ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಈ ವೇಳೆ ಎಂ ಎಲ್ ಸಿ ಡಾ.ಧನಂಜಯ ಸರ್ಜಿ ಮಾತನಾಡಿ, ದೇಶಲ್ಲಿ ಬಿಜೆಪಿ ಬಿಜಾರ್ ಗೆಲ್ಲುವಮೂಲಕ 19 ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಆಡಳಿತ ನಡೆಸುತ್ತಿದೆ. ಒನ್ ನೇಷನ್ ಒನ್ ಎಲೆಕ್ಷನ್ ಎಂಬಂತೆ ಮುಂದಿನ ದಿನಗಳಲ್ಲಿ ಒನ್ ನೇಷನ್ ಒನ್ ಬಿಜೆಪಿ ಪಾರ್ಟಿಎಂವಂತಾಗಲಿದೆ ಎಂದರು.
ದೇಶದಲ್ಲಿ INDIA ಮಾಹ ಘಟಬಂದನ್ ಮುಂದಿನದಿನಗಳಲ್ಲಿ ನಡೆಯಲ್ಲ. ಮೋದಿ ಸರ್ಕಾರದ ಬಿಜೆಪಿಯ ಸುವರ್ಣ ಯುಗ ನಡೆಯಲಿದೆ ಎಂದರು.
ಶಾಸಕ ಚೆನ್ನಪಬಸಪ್ಪ ಮಾತನಾಡಿ ಕಮಲದ ಯುಗ ಆರಂಭವಾಗಿ ಬಹಳದಿನವೇ ಕಳೆದಿದೆ. ಬಿಹಾರದ ಜನ ಮುಂದುವರೆಸಿದ್ದಾರೆ. ನಾವೆಲ್ಲ ಪಂಚಾಗದಲ್ಲಿ ನಂಬಿಕೆ ಇಟ್ಟವರು. ಇದು ಹಿಂದೂ ಯುಗ ಈ ಹಿಂದೂ ಯುಗಕ್ಕೆ ಶಕ್ತಿಕೊಟ್ಟಿದ್ದು ಬಿಹಾರದ ಜನ. ದೇಶದಲ್ಲಿ ಭಾರತದ ಕೇಸರಿ ಯುಗವಾಗಿದೆ. ಜಂಗಲ್ ರಾಜ್ ಇವತ್ತು ಕಮಲ್ ರಾಜ್ಆಗಿದೆ. 20 ವರ್ಷದ ನಂತರ ಕಮಲದ ಯುಗ ಇತ್ತು. ಅದು ಮುಂದುವರೆದಿದೆ. ಆರಂಭವಾಗಿದೆ.
ಲಲ್ಲೂ ಪ್ರಸಾದ್ ಯಾದವ್ ಬಿಹಾರದ ಆಲಿನಗರ ಮೈಥಿಲಿ ಠಾಕೂರ್ ಸೀತಾನಗರವಾಗಿಸಿದ್ದಾರೆ. ಸೀತಾಮಾತೆಯ ಆಶೀರ್ವಾದ ಸಿಕ್ಕಿದೆ. ಅಟಲ್ ಜಿ ಅವರ ಕನಸು ಸುಶಾಸನ ಅದನ್ನಬಿಹಾರದ ಜನ ನನಸಾಗಿಸಿದ್ದಾರೆ. ಮತದಾರರಗೆ ಅಪಮಾನ ಮಾಡಿದವರಿಗೆ ಮತದಾರ ಏನು ಮಾಡಲಿದ್ದಾರೆ ಎಂದರೆ ಹಸ್ತಕ್ಕೆ ಇದ್ದ ಒಂದು ಕಟ್ ಮಾಡಿದ್ದಾರೆ. ಕಾಙಗ್ರೆಸ್ ನ ನಾಯಕ ರಾಹುಲ್ ಅಪಮಾನ ಮಾಡಿದ್ದರ ಪರಿಣಾಮ ಎಂದರು.
ಸಿಎಂ ಸಿದ್ದರಾಮಯ್ಯ NDA ಗೆಲುವನ್ನ ತಿಳಿದು ನಂತರ ರಿಯಾಕ್ಷನ್ ಕೊಡುವುದಾಗಿ ಹೇಳುದ್ದಾರೆ. ಸುಳ್ಳನ್ನ ಜೋಡಿಸಿಹೇಳಲು ಅವರಿಗೆ ಸಮಯಬೇಕಿತ್ತು. ಕಾಂಗ್ರೆಸ್ ಮತಚೋರಿ ಬಗ್ಗೆಚರ್ಚೆ ಮಾಡಿದ್ದೇ ಮಾಡಿದ್ದು, ಈ ಬಗ್ಗೆ 37 ಸಾವಿರ ಯುವಕರು ಹೊಸ ಮತದಾರರಾಗಿ ಮತಹಾಕಿದ್ದಾರೆ. ಇದು ಯುವಕರ ಗೆಲವಾಗಿದೆ. 73% ಮಹಿಳೆಯರು ಮತದಾನ ಮಾಡಿದ್ದಾರೆ. ಮುಂದಿನ ಯುಗ ಎಂದರೆ ಹಿಂದುತ್ವದ ಯುಗವಾಗಿದೆ ವೈಚಾರಿಕ ಸಂಘರ್ಷವಿದು. ಭಯೋತ್ಪಾದಕರ ತಾಂಡವ ಆಡುತ್ತಿರುವ ದೇಶದಲ್ಲಿ ಅದನ್ನಹತ್ತಿಕ್ಕುವ ಪ್ರಧಾನಿ ಮೋದಿಯ ಜಯವಿದು ಎಂದರು.
ಬೆಂಗಳೂರಿನ ಮೈಸೂರ್ ಕೆಫೆ ಎದುರಿನ ಬಾಂಬ್ ಬ್ಲಾಸ್ಟ್ ಆದಾದ ಬ್ಲಾಸ್ಟ್ ಮಾಡಿದವನು ಬ್ರದರ್ಸ್ ಎಂದವರಿಗೆ ಬಿಹಾರಿ ಜನ ತಕ್ಕ ಪಾಠ ಕಲಿಸಿದ್ದಾರೆ. ನಿತಿಶ್ ಕುಮಾರ್ ಆಡಳಿತ ಉತ್ತರನೀಡಿದೆಕಮಲ ಬಿಹಾರದಲ್ಲಿ ನಗ್ತಾಯಿದೆ. ಮುಂದಿನ ದಿನಗಳಲ್ಲಿ ಕಮಲ ಅರಳಿಸೋಣ ಎಂದುಕರೆನೀಡಿದರು.
ಸಿಎಂ ಚುನಾವಣೆಗೂ ಮುನ್ನಬಾಂಬ್ ಬ್ಲಾಸ್ ನ್ನ ಬಿಹಾರಕ್ಕೆ ಹೋಲಿಸಿ ಮಾತನಾಡಿದ್ದರು. ಕಾಂಗ್ರೆಸ್ ನಾಯಕರಾದ ಇಂದಿರಾ, ರಾಜೀವ್ ಗಾಂಧಿ ಅವರನ್ನ ಕಳೆದುಕೊಂಡ ಮೇಲೂ ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು. ಇಂದುಮಕ್ಕಳ ದಿನಾಚರಣೆ. ಮಕ್ಕಳಿಗೆ ಗೌರವ ಸಿಗುವಂತೆ ನಡೆದುಕೊಳ್ಳಲಿ. ಈಗಲಾದರೂ ಜ್ಞಾನೋದಾಯ ಆಗಲಿ ಎಂದು ವ್ಯಗ್ಯವಾಡಿದರು.
Celebration in front of BJP office
