alt="ad" />

ಶಾಸಕರ ಮಗನೆ ಎಂಬ ಉಲ್ಲೇಖಕ್ಕೆ ಕಾಂಗ್ರೆಸ್ ಗರಂ-Congress slams reference to MLA's son

 SUDDILIVE || SHIVAMOGGA

ಶಾಸಕರ ಮಗನೆ ಎಂಬ ಉಲ್ಲೇಖಕ್ಕೆ ಕಾಂಗ್ರೆಸ್ ಗರಂ-Congress slams reference to MLA's son


Congress, slams

ಮಾಧ್ಯಮಗಳ ಜೊತೆ ಮಾತನಾಡುವಾಗ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ ಕಾಂಗ್ರೆಸ್ ನ ಅಧಿನಾಯಕ ರಾಹುಲ್ ಗಾಂಧಿಯವರಿಗೆ ಮಗನೆ ಎಂದು ಬೋಧಿಸಿರುವುದು ಕಾಂಗ್ರೆಸ್ ನ ಕಣ್ಣಿಗೆ ಕೆಂಪಾಗಿದೆ.   ಏಕ ವಚನದಲ್ಲಿ ನಿಂಧಿಸಿರುವ ಬಗ್ಗೆ ಶಿವಮೊಗ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. 

ಶಿವಮೊಗ್ಗ ನಗರದ ಶಾಸಕ ಎಸ್  ಎನ್ ಚನ್ನಬಸಪ್ಪ (ಚನ್ನಿ) ಇವರು ಮಾನ್ಯ ಲೋಕಸಭಾ ವಿರೋಧಪಕ್ಷದ ನಾಯಕರಾದ ಶ್ರೀಯುತ ರಾಹುಲ್ ಗಾಂಧಿಯವರಿಗೆ ಮತ ಕಳ್ಳತನದ ವಿಚಾರವಾಗಿ ಚುಣಾವನೆ ಆಯೋಗಕ್ಕೆ ದೂರು ನೀಡಲು ನೀವು ಹೇಳಿದ್ದಿರಿ, ಕರ್ನಾಟಕ ಮತ್ತು ದೇಶಾದ್ಯಂತ ಅಂದೋಲನ ನಡೆದಿದ್ದು, ಚುಣಾವನೆ ಆಯೋಗದ ವಿರುದ್ಧ ಸಹಿ ಸಂಗ್ರಹ ನಡೆದಿದ್ದು ಕರ್ನಾಟಕ ರಾಜ್ಯ ಒಂದರಲ್ಲೆ ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತು ಸಾವಿರ (1.12.40000) ಸಹಿ ಹಾಕಿದ್ದಾರೆ. 

ಮೇಲ್ನೊಟಕ್ಕೆ ನೋಡಿದರೆ ಚುಣಾವನೆ ಆಯೋಗವು ಬಿ.ಜೆ.ಪಿ. ಪಕ್ಷದ ಏಜೆಂಟ್ ರೀತಿಯಲ್ಲಿ ಕೆಲಸಮಾಡುತ್ತಿದೆ. ಇದನ್ನು ಬಿಟ್ಟು ರಸ್ತೆ ಬದಿಯಲ್ಲಿ ನಿಂತು ಬಾಯಿಗೆ ಬಂದಂತೆ ನಾಲಿಗೆ ಹರಿ ಬೀಡಬೇಡಿ. ನಿಮ್ಮ ಭಾಷೆ ನಿಮ್ಮ ಪಕ್ಷದ ಸುಂಸ್ಕೃತಿಯನ್ನು ತೋರುತ್ತದೆ. ಶಿವಮೊಗ್ಗ ನಗರದ ಜನರು ಸುಸಂಸ್ಕೃತರು, ಶಿವಮೊಗ್ಗ ನಗರದ ಜನತೆ ಇಂತಹ ಅಸಂಸ್ಕೃತ ವ್ಯಕ್ತಿಯನ್ನ ಏಕೆ ಶಾಸಕರನ್ನಾಗಿ ಮಾಡಿದೆವು ಎಂದು ಯೋಚಿಸುತ್ತಿದ್ದಾರೆ. 

ಲೋ ಚನ್ನಿ, ಲೋ ಚನ್ನಬಸಪ್ಪ, ಮಗನೆ ಚನ್ನಬಸಪ್ಪ, ಇನ್ನು ಹಲವಾರು ಕೆಟ್ಟ ಶಬ್ದದಲ್ಲಿ ನಮಗೂ ಮಾತನಾಡಲು ಬರುತ್ತದೆ. ನಮ್ಮ ಕಾಂಗ್ರೇಸ್ ಪಕ್ಷದ ಸಂಸ್ಕೃತಿ ಈ ರೀತಿಯಾಗಿ ಮಾತನಾಡಲು ಹೇಳಿ ಮಾತು ಕಲಿಸಿಕೊಟ್ಟಿಲ್ಲ. ಹಿರಿಯರಿಗೆ ಗೌರವ ಕೊಟ್ಟು ಮಾತನಾಡಲು ನಮ್ಮ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರು ಹೇಳಿ ಮತ್ತು ಕಲಿಸಿಕೊಟ್ಟಿರುತ್ತಾರೆ. ಮುಂದೆ ಇದೆ ರೀತಿ ನಿಮ್ಮ ನಾಲಿಗೆ ಹರಿ ಬಿಟ್ಟರೆ ಮುಂದಿನ ದಿನಗಳಲ್ಲಿ ನಾವು ಸಹ ನಿಮ್ಮ ಭಾಷೆಯಲ್ಲಿ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

Congress slams reference to MLA's son

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close