SUDDILIVE || SHIVAMOGGA
ಶಿವಮೊಗ್ಗ ರೌಂಡ್ ಟೇಬಲ್ ವತಿಯಿಂದ ಸರ್ಜಿ ಫೌಂಡೇಶನ್ ಗೆ ಆಂಬ್ಯುಲೆನ್ಸ್ ಕೊಡುಗೆ-Ambulance donated by Shimoga Round Table to Surgery Foundation
ಆರೋಗ್ಯ, ಶಿಕ್ಷಣ ಮತ್ತು ಸಮುದಾಯದ ಸೇವೆಗೆ ಒತ್ತು ನೀಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ರೌಂಡ್ ಟೇಬಲ್ ಇಂಡಿಯಾ ನವೆಂಬರ್ ತಿಂಗಳ 9 ರಿಂದ 15ರವರೆಗೆ ದೇಶದಾದ್ಯಂತ ಆರ್.ಟಿ.ಐ ಸಪ್ತಾಹ ವನ್ನು ಆಯೋಜಿಸಿದೆ, ಇದರ ಭಾಗವಾಗಿ ಶಿವಮೊಗ್ಗ ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗದಲ್ಲಿಯೂ ಪರಿಸರ ಜಾಗೃತಿ, ರಕ್ತದಾನ ಶಿಬಿರ, ಶಿಕ್ಷಣ ಜಾಗೃತಿಯಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆರ್.ಟಿ.ಐ ಸಪ್ತಾಹದ ಅಂಗವಾಗಿ ಗುರುವಾರ ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತೆಯಲ್ಲಿ ರೌಂಡ್ ಟೇಬಲ್ ಇಂಡಿಯಾ ಮತ್ತು ಶಿವಮೊಗ್ಗ ರೌಂಡ್ ಟೇಬಲ್ 166 ಇವರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ, ಸಂಸ್ಥೆಯ ರಾಷ್ಟ್ರೀಯ ಆರೋಗ್ಯ ಯೋಜನೆ 'ಪ್ರಾಜೆಕ್ಟ್ ಹೀಲ್' ಯೋಜನೆಯಡಿ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸುಧಾರಿಸುವ ಗುರಿಯೊಂದಿಗೆ, ಸರ್ಜಿ ಫೌಂಡೇಶನ್ ಗೆ ಸುಸಜ್ಜಿತ ಸೌಲಭ್ಯವುಳ್ಳ ಆಂಬ್ಯುಲೆನ್ಸ್ ವಾಹನವನ್ನು ಶಿವಮೊಗ್ಗ ರೌಂಡ್ ಟೇಬಲ್ 166 ಪದಾಧಿಕಾರಿಗಳು ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಮನುಷ್ಯನ ಜೀವನದಲ್ಲಿ ಚಿಂತೆ ಅನ್ನುವುದು ಬೆಂಬಿಡದೆ ಕಾಡುತ್ತಿರುತ್ತದೆ. ಆ ಚಿಂತೆಯಿಂದ ಹೊರಬರಬೇಕು ಎಂದರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ರೌಂಡ್ ಟೇಬಲ್‌ನಂತಹ ಸಂಸ್ಥೆಗಳು ಸಮಾಜದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ. ಶಿವಮೊಗ್ಗದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಬಡವರಿಗೆ ತ್ವರಿತವಾಗಿ ತಲುಪಿಸುವಲ್ಲಿ ಈ ಆಂಬ್ಯುಲೆನ್ಸ್ ಪ್ರಮುಖ ಪಾತ್ರ ವಹಿಸಲಿದ್ದು, ಸಾರ್ವಜನಿಕರಿಗೆ ದೊಡ್ಡ ಪ್ರಯೋಜನವನ್ನು ಒದಗಿಸಲಿದೆ. ಸಾಮಾನ್ಯವಾಗಿ ಆಂಬ್ಯುಲೆನ್ಸ್ ಸೇವೆಗೆ ಶಿವಮೊಗ್ಗ ನಗರದ 10 ಕಿಲೋ ಮೀಟರ್ ಒಳಗೆ 1,500 ಚಾರ್ಜ್ ಮಾಡಲಾಗುತ್ತದೆ ಆದರೆ ಸರ್ಜಿ ಫೌಂಡೇಶನ್ ಆಂಬ್ಯುಲೆನ್ಸ್ 500 ರೂ ಗೆ , 20ರಿಂದ 30 ಕಿಲೋಮೀಟರ್ ಗೆ 2,200 ಇದ್ದರೆ 750ಕ್ಕೆ, ಬೆಂಗಳೂರಿಗೆ ಹೋಗಲು 10,500 ಇದ್ದಾರೆ ನಾವು 7,500 ರೂ ಗೆ ಸೇವೆಯನ್ನು ಒದಗಿಸುತ್ತೇವೆ, ಈ ಆಂಬ್ಯುಲೆನ್ಸ್‌ನಿಂದ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗುವಂತಾಗಿ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ," ಎಂದು ಹೇಳಿದರು.
ಶಿವಮೊಗ್ಗ ರೌಂಡ್ ಟೇಬಲ್ 166 ನ ಛೇರ್ಮನ್ ಗುರು ಹಂಜಿ ಅವರು ಮಾತನಾಡಿ ಇದು ರೌಂಡ್ ಟೇಬಲ್ ಇಂಡಿಯಾದ ಒಂದು ಪ್ರಮುಖ ಭಾಗವಾಗಿ ಇಂದು ಸರ್ಜಿ ಫೌಂಡೇಶನ್ ಗೆ ಆಂಬುಲೆನ್ಸ್ ಹಸ್ತಾಂತರ ಮಾಡಿದ್ದೇವೆ.
ಇಲ್ಲಿಯವರೆಗೂ ರೌಂಡ್ ಟೇಬಲ್ ಇಂಡಿಯಾ ದೇಶದಲ್ಲಿ ಎಲ್ಲ ಚಾಪ್ಟರ್ ಗಳು ಈ ಕೆಲಸ ಮಾಡುತ್ತಿದ್ದು ನಾವು ಕೂಡ ಶಿವಮೊಗ್ಗ ಚಾಪ್ಟರ್ ವತಿಯಿಂದ ಮಾಡುತ್ತಿದ್ದೇವೆ. ದೇಶದಾದ್ಯಂತ ದಿನಕ್ಕೆ 2 ಕ್ಲಾಸ್ ರೂಮ್ ಗಳನ್ನೂ ರೌಂಡ್ ಟೇಬಲ್ ನಿರ್ಮಿಸುತ್ತಿದೆ. ಇಲ್ಲಿಯವರೆಗೂ 10,040 ಕ್ಲಾಸ್ ರೂಮ್ ಗಳನ್ನೂ ದೇಶದಲ್ಲಿ ನಿರ್ಮಿಸಲಾಗಿದೆ. ಈಗಾಗಲೇ 3,960 ಪ್ರಾಜೆಕ್ಟ್ ಸಂಪೂರ್ಣವಾಗಿದೆ. ಇದರಂತೆ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಶಿವಮೊಗ್ಗ ರೌಂಡ್ ಟೇಬಲ್ 166 ವೈಸ್ ಛೇರ್ಮನ್ ಮತ್ತು ಸರ್ಜಿ ಸಮೂಹ ಸಂಸ್ಥೆ ನಿರ್ದೇಶಕರಾದ ಈಶ್ವರ್ ಸರ್ಜಿ, ಶಿವಮೊಗ್ಗ ರೌಂಡ್ ಟೇಬಲ್ ವಲಯ 13 ರ ಛೇರ್ಮನ್ ಶುಶ್ರುತ್, ಶಿವಮೊಗ್ಗ ರೌಂಡ್ ಟೇಬಲ್ 266 ರ ಛೇರ್ಮನ್ ಗಗನ್ ಕೋಟೆ, ಸರ್ಜಿ ಸಮೂಹ ಸಂಸ್ಥೆ ನಿರ್ದೇಶಕರಾದ ಶ್ರೀಮತಿ ನಮಿತಾ ಸರ್ಜಿ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಾದಿರಾಜ್ ಕುಲಕರ್ಣಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತೆಯ ವೈದ್ಯಕೀಯ ನಿರ್ದೇಶಕರಾದ ಪ್ರಶಾಂತ್ ಎಸ್.ವಿ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ರೋಟರಿ ರಕ್ತ ನಿಧಿ ಕೇಂದ್ರದ ಸತೀಶ್ ಕುಮಾರ್, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತೆಯ ವೈದ್ಯಕೀಯ ಅಧೀಕ್ಷಕರಾದ ವಿಜಯಕುಮಾರ ಮಾಯೆರ, ಸಹಾಯಕ ಆಡಳಿತಾಧಿಕಾರಿಗಳಾದ ಸಚಿನ್ ಸೇರಿದಂತೆ ಶಿವಮೊಗ್ಗ ರೌಂಡ್ ಟೇಬಲ್ ನ ಪಧಾಧಿಕಾರಿಗಳು ಉಪಸ್ಥಿತರಿದ್ದರು.
Ambulance donated by Shimoga Round Table to Surgery Foundation
