ಬೆಂಗಳೂರಿನಲ್ಲಿ ಕ್ರಿಕೆಟ್ ಕೆಟ್ಟುಹೋಗಿದೆ-ವೆಂಕಟೇಶ್ ಪ್ರಸಾದ್-Cricket has gone bad in Bengaluru - Venkatesh Prasad

SUDDILIVE || SHIVAMOGGA

ಬೆಂಗಳೂರಿನಲ್ಲಿ ಕ್ರಿಕೆಟ್ ಕೆಟ್ಟುಹೋಗಿದೆ-ವೆಂಕಟೇಶ್ ಪ್ರಸಾದ್-Cricket has gone bad in Bengaluru - Venkatesh Prasad    

Cricket, Venkteshprasad

ಬೆಂಗಳೂರಿನ ಕ್ರಿಕೆಟ್ ಈಗ ಕೆಟ್ಟು ಹೋಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಹಾಗಾಗಿ ನಾವು ಈಗ ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ತಾ ಇದೆ. ನಮ್ಮ ಜೊತೆ ಉತ್ತಮವಾದ ಟೀಂ ಇದೆ ಎನ್ನುವುದಕ್ಕೆ ನಮಗೆ ಖುಷಿಯಾಗುತ್ತಿದೆ. ನಮ್ಮ ಟೀಂ ನಲ್ಲಿ ಮಹಿಳಾ ಆಟಗಾರ್ತಿ ಕೂಡ ಇದ್ದಾರೆ ಎಂದರು.

ನಾವು ಎಲ್ಲರನ್ನು ಸಮಾನಾಗಿ ನೋಡುತ್ತೇವೆ. ಈಗಾಲೇ ಮಹಿಳೆಯರು ತಮ್ಮ ಸಾಮರ್ಥ್ಯ ತೋರಿದ್ದಾರೆ. ಕಪಿಲ್ ದೇವ್ ರೀತಿಯಲ್ಲಿ ಮಹಿಳೆಯರ ತಂಡ ವರ್ಲ್ಡ್ ಕಪ್ ಗೆದ್ದಿದೆ. ನಮ್ಮ ತಂಡದಲ್ಲಿ ಜವಾಗಲ್ ಶ್ರೀನಾಥ್ ರೀತಿಯ ದಿಗ್ಗಜರು ಇದ್ದಾರೆ. ಬೆಂಗಳೂರು ಚಿನ್ನಸ್ವಾಮಿ ಮೈದಾನ ಈಗ ಆಡುವುಕ್ಕೆ ಅನುಕೂಲವಾಗುತ್ತಿಲ್ಲ. ಹಿಂದೆ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದ ದುರಂತ ನೆನಪನ್ನ ವೆಂಕಟೇಶ್ ಪ್ರಸಾದ್ ನೆನಪು ಮಾಡಿಕೊಂಡು ನೋವಾಗುತ್ತದೆ ಎಂದರು. 

ನಮ್ಮದೇ ಆದ ಉತ್ತಮವಾದ ಸ್ಟೇಡಿಯಂ ಕಟ್ಟುವ ಕನಸು ನನಗಿದೆ. ಅವಿರೋಧ ಆಯ್ಕೆ ವಿಚಾರದಲ್ಲಿ ನನಗೆ ಯಾವದೇ ಹೋರಟವಿಲ್ಲದೇ ಗೆದ್ದಾಗ ನನಗೆ ಬೇಜಾರಾಗಿತ್ತು.ಆದರೆ ನಿವೃತ್ತ ನ್ಯಾಯಧಿಶರು ಕೊಟ್ಟ ಚುನಾವಣಾ ಫಲಿತಾಂಶಕ್ಕೆ ಅವರು ಅಪೀಲ್ ಹೋಗ್ತಾರೆ. ಅವರು ಈರೀತಿ ಹೋಗ್ತಾರೆ ಅಂತ ಅಂದುಕೊಂಡಿರಲಿಲ್ಲ. ಕೇವಲ 200 ರೂ ಗಳ ಬಗ್ಗೆ ಗೊತ್ತಿರಲಿಲ್ಲ ಎಂದರೇ ಎನು ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. 

ನಮ್ಮ ಬೈಲದಲ್ಲೇ ಇದೆ. ಅವರು ಮಾಡುತ್ತಿರುವುದು ರಾಜಕಾರಣ, ಅದಕ್ಕೆ ನಾವು ವಿರುದ್ಧವಾಗಿ ನಿಂತುಕೊಂಡಿದ್ದೇವೆ. ಕ್ರಿಕೇಟ್ ಗಮನ ಕೊಡುವುದು ಬಿಟ್ಟು ಬೇರೆಯದರ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ಆರೋಪಿಸಿದರು. 

Cricket has gone bad in Bengaluru - Venkatesh Prasad

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close