ಬೈರಾಪುರದಲ್ಲಿ ಬಾಲಕನ ಮೇಲೆ ಚಿರತೆದಾಳಿ- Leopard attacks boy in Byrapur

 SUDDILIVE || TARIKERE

ಬೈರಾಪುರದಲ್ಲಿ ಬಾಲಕನ ಮೇಲೆ ಚಿರತೆದಾಳಿ- Leopard attacks boy in Byrapur   

Leopard, byrapur
ಸಾಂಧರ್ಭಿಕ ಚಿತ್ರ

ಪಕ್ಕದ ಜಿಲ್ಲೆ ಚಿಕ್ಕಮಗಳೂರಿನ ತರೀಕೆರೆಯ ಬಳಿ ಮತ್ತೊಂದು ಚಿರತೆಯೊಂದು ಬಾಲಕನೋರ್ವನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಯುವಕನನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊನ್ನೆ ತರೀಕೆರೆ ತಾಲೂಕು ಬೈರಾಪುರದಲ್ಲಿ ಕರಡಿಯೊಂದು ತಂದೆಯೊಂದಿಗೆ ಐದು ವರ್ಷದ ಮಗು ನಡೆದುಕೊಂಡು ಹೋಗುವಾಗ ದಿಡೀರ್ ಎಂದು ಬಂದ ಕರಡಿಯೊಂದು ಮಗುವನ್ನ ಕಿತ್ತುಕೊಂಡು ಹೋಗಿ ಸಾವಿಗೆ ಕಾರಣವಾಗಿತ್ತು. ಈ ಘಟನೆ ಮರೆಯುವ ಮುಂಚೆಯೇ ಮತ್ತೊಂದು ಕಾಡುಪ್ರಾಣಿಯ ದಾಳಿ ದಿಗಿಲು ಮೂಡಿಸಿದೆ.

 

ಬೈರಾಪುರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆದಾಳಿಯಿಂದ ಕಿರುಚಿದ ಬಾಲಕನನ್ನ ಸ್ಥಳೀಯರೆ ಕಾಪಾಡಿದ್ದಾರೆ. ತಕ್ಷಣವೇ ಆತನನ್ನ ಶಿವಮೊಗ್ಗದ ಮೆಗ್ಗಾನ್ ಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

ಬೈರಾಪುರದಲ್ಲಿ ಚಿರತೆ ಹಿಡಿಯಲು ಐದು ಬೋನುಗಳನ್ನ ಹಾಕಲಾದರೂ ಚಿರತೆ ಬೋನಿಗೆ ಬಿದ್ದಿಲ್ಲ.  ಈ ನಡುವೆ ಚಿರತೆ ಮಗುವಿನ ಮೇಲೆ ದಾಳಿ ನಡೆಸಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ. ಬಾಲಕನ ತಲೆಗೆ ತೀವ್ರಗಾಯವಾಗಿದೆ. ತಲೆಯ ಬುರುಡೆಯಲ್ಲಿ ಗಾಯವಾದುದರಿಂದ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Leopard attacks boy in Byrapur

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close