ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗಿನ‌ ಬೆನ್ನಲ್ಲೇ ಕುತೂಹಲ ಮೂಡಿಸಿದ ಜಿಲ್ಲೆಯ ರಾಜಕಾರಣ-District politics sparked curiosity in the wake of the call for a CM change in the state

 SUDDILIVE || SHIVAMOGGA

ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗಿನ‌ ಬೆನ್ನಲ್ಲೇ ಕುತೂಹಲ ಮೂಡಿಸಿದ ಜಿಲ್ಲೆಯ ರಾಜಕಾರಣ-District politics sparked curiosity in the wake of the call for a CM change in the state


District, politics


ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಹೆಚ್ಚಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಎಐಸಿಸಿ ಅಧ್ಯಕ್ಷ ಖರ್ಗೆಯ ಭೇಟಿ ಮತ್ತು ಕಾಗೋಡು ಮನೆಯಲ್ಲಿ ಸಚಿವ ಮಧು ಬಂಗಾರಪ್ಪನವರ ಭೇಟಿ ಜಿಲ್ಲೆಯ ರಾಜಕಾರಣದ ಲೆಕ್ಕಾಚಾರಗಳ ಬಗ್ಗೆ ಕುತೂಹಲ ಮೂಡಿಸಿದೆ. 

ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜೋರಾಗುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದಲ್ಲಿ ಗೊಂದಲ ಮೂಡಿರುವುದು ನಿಜ, ಅದನ್ನ ಪಕ್ಷದ ಹೈಕಮಾಂಡ್ ಜೊತೆ ಕುಳಿತು ಸರಿಮಾಡುವುದಾಗಿ ಹೇಳಿದ್ದಾರೆ. 

ಇವರ ಹೇಳಿಕೆಗೂ ಮೊದಲೇ ಜಿಲ್ಲೆಯ ಮತ್ಸದ್ಧಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪ್ರತ್ಯಕ್ಷರಾಗಿರುವುದು ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾಗೋಡು ತಿಮ್ಮಪ್ಪನವರ ಮನೆಯಲ್ಲೇ ಪ್ರತ್ಯಕ್ಷರಾಗಿರುವುದು ಹಲವು ಕುತೂಹಲದ ಬೆಳವಣಿಗೆಗೆ ಕಾರಣವಾಗಿದೆ. 

ಸಚಿವ ಮಧು ಬಂಗಾರಪ್ಪನವರು ಮುತ್ಸದ್ಧಿ ಕಾಗೋಡು ತಿಮ್ಮಪ್ಪನವರ ಮೂಲಕ ಒಂದು ವೇಳೆ ಸಿಎಂ ಬದಲಾವಣೆಯಾದರೆ ಜಿಲ್ಲೆಯಲ್ಲಿ ಯಾರು ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಮಾತುಕತೆ ಇಬ್ಬರ ನಾಯಕರ ನಡುವೆ ನಡೆದಿರಬಹುದಾ? ಅಥವಾ ಸಿಎಂ ಬದಲಾವಣೆಯಾದರೆ ಸಚಿವ ಸ್ಥಾನವನ್ನ ಮಧು ಬಂಗಾರಪ್ಪನವರಿಗೆ ಉಳಿಸುವ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನ ಸಚಿವ ಸ್ಥಾನದಿಂದ ದೂರ ಇಡುವ  ಮತ್ತು ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಅವರನ್ನೂ ಜಿಲ್ಲೆಯಲ್ಲಿ ಎಂಟ್ರಿಗೆ ತಡೆಯೊಡ್ಡುವ ಲೆಕ್ಕಾಚಾರಗಳಿವೆಯ ಎಂಬ ಅನುಮಾನಗಳೂ ಹೆಚ್ಚಾಗಿವೆ. 

ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಉಸ್ತುವಾರಿಯ ಜವಬ್ದಾರಿ ವಹಿಸಿದರೆ ಪಕ್ಷ ಬಲವರ್ಧನೆಯಾಗಲಿದೆ ಎಂಬ ಕೂಗು ಈ ಹಿಂದೆ ಸಚಿವ ಸಂಪುಟ ಪುನರ್ ರಚನೆಯ ವೇಳೆ ಕೇಳಿ ಬಂದಿತ್ತು. ಈ ಎಲ್ಲಾ ಲೆಕ್ಕಾಚಾರದ ಬೆನ್ನಲ್ಲೇ ಕಾಗೋಡು ತಿಮ್ಮಪ್ಪ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಯನ್ನ ಭೇಟಿ ಮಾಡುದ್ರಾ? ಮತ್ತು ಭೇಟಿಯ ನಂತರ ಸಚಿವ ಮಧು ಬಂಗಾರಪ್ಪನವರು ಕಾಗೋಡು ಮನೆಯ ಪಡಸಾಲೆಯಲ್ಲಿ ಕಾಣಿಸಿಕೊಂಡ್ರ ಎಂಬ ಅನುಮಾನ ಆರಂಭವಾಗಿದೆ.  ಅಷ್ಟೆ ಕುತೂಹಲವನ್ನ ಹಿಡಿದಿಟ್ಟುಕೊಂಡಿದೆ. 

ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಲೆಕ್ಕಾಚಾರ ಒಂದು ಕಡೆ ನಡೆಯುತ್ತಿದ್ದರೆ ಮತ್ತೊಂದೆಡೆ ಜಿಲ್ಲೆಯ ರಾಜಕಾರಣಿಯ ಹಿಡಿತವನ್ನ ಯಾರು ನಿಬಾಯಿಸಬೇಕು. ಮತ್ತು ತಮಗೆ ಇರುವ ಸ್ಪರ್ಧಿಗಳನ್ನ ಹೇಗೆ ಬದಲಾವಣೆಯಾಗಲಿರುವ ರಾಜಕಾರಣದಲ್ಲಿ ತಡೆಯುವ ಲೆಕ್ಕಾಚಾರಗಳು ನಡೆಯುತ್ತಿರುವೆಯಾ ಎಂಬುದು ಕಾಲವೇ ಉತ್ತರಿಸಬೇಕಿದೆ. 

District politics sparked curiosity in the wake of the call for a CM change in the state

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close