SUDDILIVE || SHIVAMOGGA
ಗಾಂಧಿ ಪಾರ್ಕ್ ನ ಆಟಿಕೆ ರೈಲು ಸಂಪೂರ್ಣ ಬಂದ್- Gandhi Park Children train closed
ಗಾಂಧಿ ಪಾರ್ಕ್ ನಲ್ಲಿರುವ ಮಕ್ಕಳ ಆಟಿಕೆ ರೈಲನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆಯುಕ್ತ ಮಾಯಣ್ಣಗೌಡ ಅವರ ಸೂಕ್ತ ನಿರ್ದೇಶನದ ಮೇರೆಗೆ ಸಹಾಯ ಕಾರ್ಯಪಾಕ ಅಭಿಯಂತರರಾದ ಜ್ಯೋತಿ ಅವರು ಈ ಆದೇಶ ಹೊರಡಿಸಿದ್ದಾರೆ.
ಗಾಂಧಿಪಾರ್ಕ್ ನಲ್ಲಿ ಮಕ್ಕಳ ಆಟಿಕೆ ರೈಲಿನ ಇಂಜಿನ್ ನಲ್ಲಿ ನ.08 ರಂದು ದಟ್ಟ ಹೊಗೆ ಕಾಣಿಸಿಕೊಂಡು ಹಿಮ್ಮುಖ ಚಲಿಸಿತ್ತು. ಇದೇ ವೇಳೆ ಚಾಲಕ ಪ್ರಜ್ವಲ್ ಇಂಜಿನ್ ಬಿಟ್ಟು ಪರಾರಿಯಾಗಿದ್ದ. ಈ ಬಗ್ಗೆ ಸಾರ್ವಜನಿಕರು ಆಯುಕ್ತರಿಗೆ ದೂರು ನೀಡಿದ್ದರು. ಈ ಸುದ್ದಿಯನ್ನ ಸುದ್ದಿಲೈವ್ ಸಹ ಪ್ರಕಟಿಸಿತ್ತು.
ತಕ್ಷಣವೇ ಆಯುಕ್ತರ ನಿರ್ದೇಶನದ ಮೇರೆಗೆ ಮೌಖಿಕವಾಗಿ ಮಕ್ಕಳ ರೈಲನ್ನ ಬಂದ್ ಮಾಡಲು ಆದೇಶ ಹೊರಡಿಸಿದ್ದರು. ಈಗ ಮುಂದಿನ ಆದೇಶದವರೆಗೂ ಆಟಿಕೆ ರೈಲನ್ನ ಬಂದ್ ಮಾಡುವಂತೆ ಗುತ್ತಿಗೆ ಹಿಡಿದಿರುವ ಆರ್ ಆರ್ ಎಂಟರ್ ಪ್ರೈಸಸ್ ನ ಮಂಜುನಾಥ್ ಅವರಿಗೆ ಅಭಿಯಂತರರು ನೋಟೀಸ್ ನೀಡಿದ್ದಾರೆ.
ಒಂದು ವೇಳೆ ರೈಲ್ ನ್ನ ಚಲಾಯಿಸಿದಲ್ಲಿ ಕರಾರು ಉಲ್ಲಂಘನೆಯ ಆಧಾರದ ಮೇರೆಗೆ ಮುಂದಿನ ಕ್ರಮಜರುಗಿಸುವುದಾಗಿ ತಿಳುವಳಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Gandhi Park Children train closed
