SUDDILIVE || SHIVAMOGGA
ಕುಡಿದು ವಾಹನ ಚಲಾಯಿಸುತ್ತಿದ್ದೀರಾ? ಎಚ್ಚರ..!Are you driving drunk? Be careful..!
ಕುಡಿದು ವಾಹನ ಚಲಾಯಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ಖಡಕ್ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಸಂಚಾರಿ ವೃತ್ತ ಪೊಲೀಸ್ ನಿರೀಕ್ಷಕ ದೇವರಾಜ್ ನೇತೃತ್ವದಲ್ಲಿ ನಡೆದ ಪೂರ್ವ ಮತ್ತು ಪಶ್ಚಿಮ ಸಂಚಾರಿಪೊಲೀಸ್ ಠಾಣೆಯಲ್ಲಿ ಒಟ್ಟು 23 ಪ್ರಕರಣ ದಾಖಲಾಗಿದ್ದು, ಇದರಲ್ಲಿ ಲಕ್ಷಾಂತರ ರೂ ಗಳನ್ನ ವಾಹನ ಸವಾರರು ನ್ಯಾಯಾಲಯದಲ್ಲಿ ಹಣಕಟ್ಟುವಂತಾಗಿದೆ.
ಶಿವಮೊಗ್ಗ ಸಂಚಾರ ವೃತ್ತ ಕಛೇರಿ ಮತ್ತು ಪೂರ್ವ ಸಂಚಾರ ಠಾಣೆ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳಲ್ಲಿ ಶನಿವಾರ ಮತ್ತು ಭಾನುವಾರ ರಂದು ಕುಡಿದು ವಾಹನ ಚಾಲನೆ ಮಾಡುವ ವಾಹನ ಚಾಲಕ/ ಸವಾರರ ವಿರುದ್ಧ ಒಟ್ಟು 12 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈ ದಿನ 11 ಜನ ವಾಹನ ಚಾಲಕ/ ಸವಾರರು ಮಾನ್ಯ ನ್ಯಾಯಾಲಯದಲ್ಲಿ ಒಟ್ಟು ₹ 1,16,500/- ದಂಡವನ್ನು ಪಾವತಿಸಿರುತ್ತಾರೆ ಮತ್ತು 04 ಜನ ಸವಾರ D.L ಗಳನ್ನು ಅಮಾನತು ಪಡಿಸಲು RTO ಕಛೇರಿಗೆ ಕಳುಹಿಸಲಾಗಿದೆ. ಕುಡಿದು ವಾಹನ ಚಲಾಯಿಸುವವರು ಇದನ್ನ ಗಮನದಲ್ಲಿಟ್ಟುಕೊಂಡು ಚಲಾಯಿಸಬೇಕಿದೆ.
Are you driving drunk? Be careful..!
