ಮುಸ್ಲೀ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳೆ ಟಾರ್ಗೆಟ್, ಹರೀಶ್ ಹಲ್ಲೆ ಆರೋಪಿಗಳನ್ನ ಬಂಧಿಸದಿದ್ದರೆ ನ.21 ರಂದು ಎಸ್ಪಿ ಕಚೇರಿ ಎದುರು ಪ್ರತಿಭಟನೆ- Hindus are targeted in Muslim

 SUDDILIVE || SHIVAMOGGA

ಮುಸ್ಲೀ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳೆ ಟಾರ್ಗೆಟ್, ಹರೀಶ್ ಹಲ್ಲೆ ಆರೋಪಿಗಳನ್ನ ಬಂಧಿಸದಿದ್ದರೆ ನ.21 ರಂದು ಎಸ್ಪಿ ಕಚೇರಿ ಎದುರು ಪ್ರತಿಭಟನೆ-ಕಾಂತೇಶ್-Hindus are targeted in Muslim area, protest in front of SP office on Nov. 21 if Harish attack accused not arrested - Kantesh

Hindu, Muslim

ಶಿವಮೊಗ್ಗದಲ್ಲಿ ಮುಸ್ಲೀಂ ಬಾಹುಳ್ಯವಿರುವ ಪ್ರದೇಶದಲ್ಲಿ ಹಿಂದೂಗಳು ಬದುಕಲು ಸಾಧ್ಯವಾಗುತ್ತಿಲ್ಲ  ಎಂದು ರಾಷ್ಟ್ರಬಳಗದ ಕೆ.ಈ.ಕಾಂತೇಶ್ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ವಸ್ತು ಗಾಂಜಾ ಪೆಟ್ಟಿಗೆ ಅಂಗಡಿಯಲ್ಲಿ ಸಿಗುವಂತಾಗಿದೆ. ನಿನ್ನೆ ಮಾಹಿತಿ ಎಸ್ಪಿಅವರಿಗೆ ಮಾಹಿತಿ ತಂದಾಗ ಎಸ್ಪಿ ಗಮನಿಸುವುದಾಗಿ ಅಷ್ಟೆ ಭರವಸೆ ನೀಡಿದ್ದಾರೆ. ಇದನ್ನ ಪೊಲೀಸ್ ಇಲಾಖೆ ನಿಯಂತ್ರಸದಿದ್ದರೆ ರಾಷ್ಟ್ರಭಕ್ತರ ಬಳಗ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ. 

ಶಿವಮೊಗ್ಗವನ್ನ ಕಾಂಗ್ರೆಸ್ ಮರೆತಿದೆ. ಅನೇಕರಿಗೆ ಹಿಂದೂ ಯುವಕರಿಗೆ ಹೊಡೆತ ಬಳುತ್ತಿವೆ. ಆರ್ ಎಂ ಎಲ್ ನಗರದಲ್ಲಿ ಸಂಜೆಯ ಮೇಲೆ ಹಿಂದೂಗಳು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ನಿನ್ನೆ ಸಂತ್ರಸ್ತ ಹರೀಶ್ ನನ್ನ ಭೇಟಿ ಮಾಡಲು ಹೋದಾಗ ಸ್ಥಳೀಯರು ಹೇಳುತ್ತಾರೆ. ನಗರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯಗೊಂಡಿದೆ ಎಂದು ಆರೋಪಿಸಿದರು. 

ಪೆಹಲ್ಗಾಮ್ ನಲ್ಲಿ 26 ಜನ ಹಿಂದೂಗಳ ಮೇಲೆ ಗುಂಡಿನ ಸುರಿಮಳೆಸುರಸಿ ಹತ್ಯೆ ಮಾಡಲಾಯಿತು. ಅದೇ ರೀತಿ ಶಿವಮೊಗ್ಗದಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡಿ ಹಲ್ಲೆ ನಡೆಸಲಾಗುತ್ತಿದೆ. ನಾಳೆಸಂಜೆಯ ಒಳಗೆ ಮೂರರಿಂದ ನಾಲ್ಕು ಜನರನ್ನ ಬಂಧಿಸದಿದ್ದರೆ ನ.21 ರಂದು ಎಸ್ಪಿ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು. 

ಸಂತ್ರಸ್ತ ಹರೀಶ್ ನನ್ನ ಎಫ್ಐಆರ್ ನಲ್ಲಿ ಸೇರಿಸೋ ಪ್ರಯತ್ನ ನಡೆಯುತ್ತಿದೆ. ಇದು ಆಗಬಾರದು. ಒಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯು ಸಹ ಚಿರಾಗ್ ಎಂದು ಹಿಂದೂ ಹುಡುಗನ ಹೆಸರು ಇದೆ. ಆ  ಯುವಕನೂ ಸಹ ಮುಸ್ಲೀಂ ಜನಾಂಗಕ್ಕೆ ಸೇರಿದ್ದವನಾಗಿದ್ದಾನೆ. ಆತನ  ಹೆಸರು ಈ ಘಟನೆಯಲ್ಲಿ ಕೇಳಿ ಬಂದಿದೆ. ಧರ್ಮ ಕೇಳಿ ಹಲ್ಲೆ ನಡೆಸಲಾಗುತ್ತಿದೆ. ಇದು ನಿಯಂತ್ರಣಗೊಳ್ಳಬೇಕು ಎಂದರು.

 Hindus are targeted in Muslim

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close