ನಗರದಲ್ಲಿ ರೌಡಿಜಂ ಮತ್ತು ರಸ್ತೆ ಗುಂಡಿಗಳದ್ದೇ ದರ್ಬಾರ್-ಕೆ.ಬಿ.ಪ್ರಸನ್ನ ಕುಮಾರ್- Rowdyism and potholes are the order of the day in the city - K.B. Prasanna Kumar

 SUDDILIVE || SHIVAMOGGA

ನಗರದಲ್ಲಿ ರೌಡಿಜಂ ಮತ್ತು ರಸ್ತೆ ಗುಂಡಿಗಳದ್ದೇ ದರ್ಬಾರ್-ಕೆ.ಬಿ.ಪ್ರಸನ್ನ ಕುಮಾರ್-Rowdyism and potholes are the order of the day in the city - K.B. Prasanna Kumar

Rowdyism, patholes


ನಗರದಲ್ಲಿ ರೌಡಿಜಂ, ರಸ್ತೆ ಗುಂಡಿಗಳು ಶಿವಮೊಗ್ಗದಲ್ಲಿ ಹೆಚ್ಚಾಗಿದೆ. ಗುಂಡಿ ಭಾಗ್ಯದಿಂದ ಸಾಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ ಪ್ರಸನ್ನ ಕುಮಾರ್ ವ್ಯಂಗ್ಯವಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಷಾನರ್ಸಿಂಗ್ ಹೋಮ್ ಬಳಿ ಗುಂಡಿ ಹೆಚ್ಚಾಗಿದೆ. ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಅಧಿಕಾರಿಗಳು ಯಾರ ಎಗ್ಗಿಲ್ಲದೆ ಅಧಿಕಾರ ನಡೆಸುತ್ತಿದ್ದಾರೆ. ಎಲ್ಲ ಬಡಾವಣೆಗಳಲ್ಲಿ ಒಂದು ವಿದ್ಯುತ್ ಕಂಬದಲ್ಲಿ ದೀಪುರಿದರೆ ಮತ್ತೊಂದು ಉರಿಯಲ್ಲ. ಸಹ್ಯಾದ್ರಿ ಕಾಲೇಜಿನ ಭಾಗದಲ್ಲಿ ಕಂಬದಲ್ಲಿ ದೀಪನೇ ಇಲ್ಲ.

ಕತ್ತಲೆಯಲ್ಲಿ ನಡೆಯುವ ವ್ಯವಹಾರಗಳು ಹೆಚ್ಚಾಗಿದೆಉಅ್ತುವಾರಿ ಸಚಿವರು ಎಡಗಣ್ಣನಲ್ಲೂ ಶಿವಮೊಗ್ಗನ್ನ ಗಮನಿಸುತ್ತಿಲ್ಲ. ಬಂಗಾರಪ್ಪನವರ ಬಗ್ಗೆ ಅಭಿಮಾನವಿದೆಅವರ ಮಗನಾದ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ. 

ಶಿವಮೊಗ್ಗ ನಗರ ಡೌನ್ ಫಾಲ್ ಆಗುತ್ತಿದೆ. 24 ಗಂಟೆಯಹೆಸರಿನನಲ್ಲಿ ನೀರನ್ನ ಅರ್ಧ ಗಂಟೆ ನೀರು ಬರುತ್ತಿಲ್ಲ. ಬಿಲ್ ಪಡೆಯಲು 24 ಗಂಟೆ ನೀರು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ತೊಟ್ಟಿನೇ ಬೇಡ ಮೊದಲನೆ ಮಹಡಿಯಲ್ಲಿ ತೊಟ್ಟಿಯಿದ್ದರೆ ನೇರವಾಗಿ ನೀರು ಬೀಳುತ್ತದೆ ಎನ್ನಲಾಗುತ್ತಿತ್ತು. ಈಗ ನಳದಲ್ಲಿ  ಮೊದಲು ಗಾಳಿ ಬರುತ್ತೆ. ಟ್ರಾಫಿಕ್ ಪೊಲೀಸರ ದಂಡ ವಸೂಲಿಯಲ್ಲಿ ಶಿವಮೊಗ್ಗ ನಂ‌1 ಕಳ್ಳಕಾಕರನ್ನ ಬಂಧಿಸುವ ರೀತಿಯಲ್ಲಿ ದಂಡವಸೂಲಿ ಮಾಡುತ್ತಾರೆ ಎಂದು ಹರಿಹಾಯ್ದರು. 

ಚೆನ್ನಾಗಿರುವ ಬಡಾವಣೆಗಳ ರಸ್ತೆಗಳು ಹಾಳಾಗುತ್ತಿವೆ. ಎಸಿ ಆದ ಅಧಿಕಾರಿಗಳು ವಿಎ ಇಂದ ತಮ್ಮ ಸರ್ಕಾರಿ ಸೇವೆಯಿಂದ ಆರಂಭಿಸಿದ್ದಾರೆ. ಆದರೆ ಎಸಿ ಕಚೇರಿಯಿಂದ ಡಿಸಿ ಕಚೇರಿಗೆ  ಫೈಲು ಕಳುಹಿಸಲು ತಿಂಗಳು ಗಟ್ಟಲೆ ಸಾಧ್ಯವಿಲ್ಲದಂತಾಗಿದೆ. ರೌಡಿಸಂ, ಓಸಿ, ಗಾಂಜಾ ಹಾವಳಿ ಹೆಚ್ಚಾಗಿದೆ. ಎಸ್ಪಿ ಅವರು ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು. 

ಗುಂಡಿ ಮುಚ್ಚಿದ ತಕ್ಷಣ ಒಂದು ಲೇಯರ್ ಡಾಂಬರೀಕರಣ ಆಗಬೇಕು. ಇದು ನಿರಂತರವಾದ ಕೆಲಸವಾಗಬೇಕು. ಅಭಿವೃದ್ಧಿಯನ್ನ ನಿರ್ವಹಣೆ ಮಾಡಬೇಕು ಇಲ್ಲವಾದಲ್ಲಿ ನಗರ ಹಿಂದೆ ಸರಿಯಲಿದೆ. ಶಿವಮೊಗ್ಗ ನಗರ ಎಂದರೆ ಮಂತ್ರಿಗಳಿಗೆ ಬೇಸರವಾಗಿದೆಯಾ ಎಂದು ಪ್ರಶ್ನಿಸಿದರು.

ಪಾಲಿಕೆಯಲ್ಲಿರುವ ಡಾಂಬರೀಕರಣ ಇದ್ದಾಗ ಚೆನ್ನಾಗಿತ್ತು. ಈಗ ಡಾಂಬರೀಕರಣವನ್ನ ತೆಗೆದು ಚಪ್ಪಡಿಕಲ್ಲು ಹಾಕಲಾಗಿದೆ ಅದು ಕೊಯ್ಯುವಂತಾಗಿದೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲವೆಂದರೆ ಡಿಸಿ ಗಮನಸಬೇಕು. ಇದನ್ನ ಗಮನಿಸುತ್ತಿಲ್ಲ ಎಂದು ದೂರಿದರು. ಒಂದು ವೇಳೆ ಸರಿಯಾಗದಿದ್ದರೆ ಪಕ್ಷ ಬೀದಿಗಿಳಿದು ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.

Rowdyism and potholes are the order of the day in the city - K.B. Prasanna Kumar


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close