SUDDILIVE || SAGARA
ಎಲ್ಲೆ ಮೀರಿ ಮಾತನಾಡುದ್ರಾ ಸಾಗರದ ನಗರ ಸಭೆ ಆಯುಕ್ತರು? Is Sagar's commissioner speaking beyond limits?
ಸಾಗರದ ನಗರಸಭೆ ಆಯುಕ್ತರಾದ ನಾಗಪ್ಪರವರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸೂ***ಮಕ್ಕಳು ಬ*** ಮಕ್ಕಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ಸಾಗರದ ಆಯುಕ್ತರು ನಾಗಪ್ಪನವರು ನಿನ್ನೆ ರಾತ್ರಿ ರಾಣಿಚೆನ್ನಮ್ಮನ ವೃತ್ತದ ಬಳಿ ಇದ್ದ ಬೀದಿಬದಿ ವ್ಯಾಪಾರಿಗಳನ್ನ ಕಾರ್ಯಕ್ರಮ ನಿಮಿತ್ತ ಜಾಗ ಖಾಲಿ ಮಾಡಿಸುವ ವೇಳೆ ಸ್ಥಳಕ್ಕೆ ಬಂದು ಜಾಗಖಾಲಿ ಮಾಡಲು ತಿಳಿಸುವಾಗ ಈ ಅವ್ಯಾಚ್ಯ ಶಬ್ದಗಳನ್ನ ಬಳಸಿ ಬೈದಿರುವುದಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಗರದ ನಗರ ಸಭೆ ಆಯುಕ್ತರಾಗಿ 17 ವರ್ಷದಿಂದ ಪ್ರಭಾರಿಯಾಗಿ ಮುಂದುವರೆಯುತ್ತಿರುವ ನಾಗಪ್ಪನವರಿಗೆ ಎಲ್ಲಾ ಪಕ್ಷದ ಕೃಪಕಟಾಕ್ಷಗಳಿರಿರುವುದು ತಿಳಿದು ಬಂದಿದೆ.
ನಗರಸಭೆ AEE ಕಾರ್ಯನಿರ್ವಹಿಸ್ತಾ ಇದ್ದ ನಾಗಪ್ಪನವರು ಪ್ರಭಾರ ನಗರಸಭೆ ಆಯುಕ್ತರಾಗಿ 17 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ನಿನ್ನೆ ಸಾಗರದ ರಾಣಿ ಚೆನ್ನಮ್ಮ ಸರ್ಕಲ್ ಬಳಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅಲ್ಲಿರುವಂತ ಸುತ್ತಮುತ್ತಲಿನ ಅಂಗಡಿಗಳನ್ನು ತೆರುಗೊಳಿಸುವ ಸಮಯದಲ್ಲಿ ಅಲ್ಲಿದ್ದ ಅಂಗಡಿ ಮಾಲೀಕರು ಒಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಇದಾಗಿದೆ. ಬಡಪಾಯಿಗಳೆ ಈ ತಹಶೀಲ್ದಾರ್ ಅವರ ಟಾರ್ಗೆಟಾ ಎಂಬ ಚರ್ಚೆ ಸಹ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗುತ್ತಿದೆ.
ಸಾರ್ವಜನಿಕ ಬದುಕಿನಲ್ಲಿ ಅಧಿಕಾರಿಗಳು ಬಾಯಿಹರುಕ ಮತ್ತೊಂದು ಮಗದೊಂದು ಹರುಕರಾದರೆ ಅದರ ಪರಿಣಾಮ ಇದೇ ಎಂಬುದು ಅರಿತುಕೊಳ್ಳಬೇಕಿದೆ.
Sagar's Tahsildar speaking beyond limits
