SUDDILIVE || SHIVAMOGGA
ಅಡ್ರೆಸ್ ಕೇಳುವ ನೆಪದಲ್ಲಿ ಕೈಚಳಕ ತೋರಿದ ಅಪರಿಚಿತರು-Strangers tricked old woman under the pretext of asking for my address
ವೃದ್ದೆ ಮಹಿಳೆಯರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನ ಕಿತ್ತುಕೊಂಡು ಹೋದ ಘಟನೆ ವಿನೋಬನಗರದ ಲಕ್ಷ್ಮೀಪುರದಲ್ಲಿ ನಡೆದಿದೆ. ಅಡ್ಏಸ್ ಕೇಳುವ ನೆಪದಲ್ಲಿ ಬಂದ ಬೈಕ್ ಸವಾರರು ಕೈಚಳಕತೋರಿಸಿ ಪರಾರಿಯಾಗಿದ್ದಾರೆ.
ಮಹಾಲಕ್ಷ್ಮಿ ಹಾಗೂ ಬಲಮುರಿ ದೇವಸ್ಥಾನಕ್ಕೆ ತೆರಳಿದ ಮಹಿಳೆ ರತ್ನಮ್ಮ ಎಂಬುವರು ಸಂಜೆ ವಾಪಾಸ್ ಆಗುವಾಗ ಮನೆಯ ಬಳಿ ಬಂದು ಮನೆಯ ಗೇಟು ಮುಚ್ಚುವಾಗ ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ಇಳಿದು ಬಂದು ಶಿವಣ್ಣನ ಮನೆ ಎಲ್ಲಿ ಎಂದು ಕೇಳಿದ್ದಾನೆ.
ಶಿವಣ್ಣನ ಮನೆಗೊತ್ತಿಲ್ಲ ಮುಂದೆ ಕೇಳಿ ಎಂದು ಹೇಳುತ್ತಿದ್ದಂತೆ ಅಪರಿಚಿತ ವ್ಯಕ್ತಿ ಮಹಿಳೆಯ ಮೈಮೇಲಿದ್ದ ಬಂಗಾರದ ಸರಕ್ಕೆ ಕೈಹಾಕಿ ಕೀಳಲು ಯತ್ನಿಸಿದ್ದಾನೆ. ಮಹಿಳೆ ಕೈಹಿಡಿದು ಆತನಿಂದ ಬಿಡಿಸಿಕೊಳ್ಳು ಯತ್ನಿಸಿ ಕಿರುಚಿದ್ದಾರೆ. ಕಿರುಚುತ್ತಿದ್ದಂತೆ ಮಹಿಳೆಯನ್ನ ತಳ್ಳಿ 70 ಗ್ರಾಂ ಚಿನ್ನದ ಸರವನ್ನಕಿತ್ತುಕೊಂಡು ಹೋಗಿದ್ದಾನೆ.
ಮನೆಯ ಮುಂದೆ ಕತ್ತಲು ಇದ್ದ ಕಾರಣ ಅಪಚಿತನ ಬೈಕ್ ಮತ್ತು ಇತರೆಯ ಬಗ್ಗೆ ಸರಿಯಾಗಿ ಕಾಣಿಸಲಿಲ್ಲ ಎಂದು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ವೃದ್ದೆ ಮಹಿಳೆ ದೂಕೊಟ್ಟಿದ್ದಾಳೆ. ಅವರ ಅತ್ತೆಯ ಕಾಸಿನ ಸರವನ್ನ ಕರಗಿಸಿ ಬಂಗಾರದ ಸರವನ್ನಮಾಡಿಕೊಂಡುಕಳೆದ 6 ವರ್ಷದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು.
Strangers tricked old woman under the pretext of asking for my address
