ಕೆಪಿಸಿಎಲ್ ಅಧಿಕಾರಿಗಳು ಸತ್ಯವನ್ನ ಮುಚ್ಚಿಟ್ಟು ಸುದ್ದಿಗೋಷ್ಠಿ ನಡೆಸಿದ್ದಾರೆ-ಪರಿಸರವಾದಿಗಳಿಂದ ಗಂಭೀರ ಆರೋಪ-KPCL officials held a press conference to hide the truth - serious allegations from environmentalists

 SUDDILIVE || SHIVAMOGGA

ಕೆಪಿಸಿಎಲ್ ಅಧಿಕಾರಿಗಳು ಸತ್ಯವನ್ನ ಮುಚ್ಚಿಟ್ಟು ಸುದ್ದಿಗೋಷ್ಠಿ ನಡೆಸಿದ್ದಾರೆ-ಪರಿಸರವಾದಿಗಳಿಂದ ಗಂಭೀರ ಆರೋಪ-KPCL officials held a press conference to hide the truth - serious allegations from environmentalists

KPCL, Sharavathi

ಕಳೆದ ತಿಂಗಳು ನ. 28 ಕ್ಕೆ ಕಾರವಾರ ಮತ್ತು ನ.27 ಕ್ಕೆ ನಡೆದ  ಇತರೆಡೆ ಕೆಪಿಸಿಎಲ್ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಜನಜಾಗೃತಿ ಕುರಿತು ಹೇಳುವಾಗ ಪರಿಸರವಾದಿಗಳು ಜನರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಸುಳ್ಳುಗಳನ್ನ ಹೇಳಿಕೆ ನೀಡಿರುವುದಾಗಿ ಶರಾವತಿ ಉಳಿಸಿ ಹೋರಾಟ ಸಮಿತಿ ದೂರಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಖಿಲೇಶ್ ಚಿಪ್ಳಿ, ಕನಿಷ್ಟ ಅರಣ್ಯ ಬಳಕೆ 54 ಹೆಕ್ಟೇರ್ ಬಳಕೆ ಎಂದು ಹೇಳುತ್ತಿದ್ದಾರೆ. ಅರಣ್ಯೇತರ ಬಳಕೆ ನಿಷೇಧವಾದರೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆ ಕಾನೂನು ಪಾಲಿಸುತ್ತಿಲ್ಲ. ಅರಣ್ಯ ಇಲಾಖೆಯ  ಧೋರಣೆಯೇ  ಇದಕ್ಕೆಲ್ಲಾ ಕಾರಣವೆನ್ನಲಾಗಿದೆ. ಉಳಿದಿರುವ 4% ಅರಣ್ಯ ಪ್ರದೇಶ ನಮ್ಮ‌ಮತ್ತು ವನ್ಯ ಜೀವಿ ರಕ್ಷಣೆಗೆ ಇರುವ ಅರಣ್ಯಗಳಾಗಿವೆ. ಅದನ್ನೂ ಅಭಿವೃದ್ಧಿಗೆ ಬಳಸಿಕೊಳ್ಳಲು ಮುಂದಾಗಿದೆ ಎಂದು ದೂರಿದರು.

ಯಾವುದೇ ಕೃಷಿ ಭೂಮಿ ಬಳಕೆ ಮಾಡಲಾಗುತ್ತಿಲ್ಲ ಎಂದು ಕೆಪಿಸಿಎಲ್ ಹೇಳುತ್ತಿದ್ದಾರೆ.ಹೊನ್ನಾವರ ಮತ್ತು ಸಾಗರದಲ್ಲಿ 46 ಜನರಿಗೆ ಕೃಷಿ ಜಮೀನನ್ನ ಖಾಲಿ ಮಾಡಬೇಕು ಸಭೆಗೆ ಬನ್ನಿ ಎನ್ನುತ್ತಿದ್ದಾರೆ. 9-10 ಡಯಮೀಟರ್ 21 ಕಿಮಿ ಉದ್ದದ ಸುರಂಗ ಮಾರ್ಗ ಮಾಡಲಾಗುತ್ತಿದೆ . 18 ಟನ್ ಸ್ಪೋಟಕವನ್ನ ಬಳಕೆ ಮಾಡಿಕೊಂಡು ಸುರಂಗ ಕೊರೆಯಲಾಗುತ್ತದೆ ಎಂದು ಮಾಹಿತಿ ನೀಡಿ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಈ  ಜಾಗದಲ್ಲಿ 1800 ಟನ್ ಕೈಗಾರಿಕ ಸ್ಪೋಟಕವಸ್ತುಗಳನ್ನ ಬಳಕೆ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದು ದೂರಿದರು. 

ಕೆಪಿಸಿಎಲ್ ಪ್ರಸರಣ ಮಾರ್ಗಕ್ಕೆ 58 ಹೆಕ್ಟೇರ್ ಪ್ರದೇಶ ಬಳಕೆ ಬೇಕು ಎಂದು ಕೇಂದ್ರಕ್ಕೆ ಅನುಮತಿ ಪತ್ರ ಬರೆದಿದ್ದಾರೆ. ಆದರೆ ನಮಗೆ ಪ್ರಸರಣಕ್ಕೆ ಅನುಮತಿ ಬೇಡ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಪರಿಸರವಾದಿಗಳು ವಿಜ್ಞಾನಿಗಳಾ ಎಂದು ಕಾಂಗ್ರೆಸ್ ಪಕ್ಷ ದ ಶಾಸಕರು ಹೇಳುತ್ತಾರೆ. ಸುದ್ದಿಗೋಷ್ಠಿಯಲ್ಲಿರುವ ಶ್ರೀಪತಿ ಮತ್ತು ಅಜೇಯ್ ಶರ್ಮ ಇಂಜಿನಿಯರ್ ಎಂದು ಸ್ಪಷ್ಟಪಡಿಸಿದರು. 

ಕೆಪಿಸಿಎಲ್ ಅವರು ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿದ್ದಾರೆ. ನದಿಕಣಿವೆ ಉಳಿಸಿ ಹೋರಾಟ ಸಮಿತಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪರ್ಯಾಯ ಅರಣ್ಯ ಬಗ್ಗೆ ಮಾತನಾಡಿದ ಶ್ರೀಪತಿಗಳು ನಾನು ಐಐಐಟಿ ಧಾರವಾಡದಲ್ಲಿ ಕೆಲಸ ಮಾಡಿದವನು. ಪರಿಸರ ತಾಪನಾನ ತಡೆಯಲು ಪಶ್ಚಿಮಘಟ್ಟ ಅನಿವಾರ್ಯವಾಗಿದೆ. ನೀರು ಆಹಾರ ವಾತಾವರಣ ಇಲ್ಲವೆಂದರೆ ಬದಕುವುದೇ ಕಷ್ಟವಾಗಲಿದೆ ಎಂದರು. 

ಉತ್ಪಾದನಾ ವಿದ್ಯುತ್ ಪ್ರಸರಣಕ್ಕೆ ಕಾರಿಡಾರ್ ಬಳಕೆ ಹೆಚ್ಚಿಸಬೇಕಿದೆ ಅದನ್ನ ಕೆಪಿಸಿಎಲ್ ಸ್ಪಷ್ಟಪಡಿಸಿಲ್ಲ. 2000 ಮೆಗಾವ್ಯಾಟ್ ಸರಬರಾಜಿಗೆ ಹೊಸ ಲೈನ್ ಬಗ್ಗೆ ಮಾತನಾಡಿಲ್ಲ.  ಗುಡ್ಡಕುಸಿತದ ಬಗ್ಗೆ ಯಾರೂ ವರದಿ ಮಾಡಿಲ್ಲ. ಪ್ರಕೃತಿ ವಿಕೋಪದ ಬಗ್ಗೆ ಕರ್ನಾಟಕ ಡಿಸಾಸ್ಟರ್ ವೆಬ್ ಸೈಟ್ ನಲ್ಲಿದೆ.   ಉ.ಕ, ಶಿವಮೊಗ್ಗ, ಉಡುಪಿ ಕೊಡಗು ಭೂಕುಸಿತದ ಬಗ್ಗೆ ಎಚ್ಚರಿಕೆ ಕೊಟ್ಟಿದೆ. ಅದೇ ಜಾಗದಲ್ಲಿ ಪಂಪ್ಡ್ ಸ್ಟೋರೇಜ್ ಬಗ್ಗೆ ಸ್ಪಷ್ಟೀಕರಣವಿಲ್ಲ. ಪರ್ಯಾಯವಾಗಿ ಬ್ಯಾಟರಿ ಎನೆರ್ಜಿ ಸ್ಟೋರೇಜ್ ಇದಕ್ಕೆ ಪರ್ಯಾವಾಗಿದೆ. ಇದನ್ನ 6 ತಿಂಗಳಲ್ಲಿ ಅಳವಡಿಸಬಹುದು. 10 ವರ್ಷ ಮೈಂಟೇನ್ಸ್ ಆಗಿದೆ. ಒಂದು ಮೆಗಾವ್ಯಾಟ್ ಪಿಎಸ್ಪಿಗೆ 8-12 ಕೋಟಿ ಆದರೆ ಬ್ಯಾಟರಿ ಎನೆರ್ಜಿ ಸ್ಟೋರೇಜ್ ಸಿಸ್ಟಮ್ ಗೆ ಒಂದು ಮೆಗಾವ್ಯಾಟ್ ಗೆ 2 ಕೋಟಿ ಆಗಲಿದೆ ಎಂದು ವಿವರಿಸಿದರು. 

90% ಕಾರ್ಯಕ್ಷಮತೆಯನ್ನ‌ಬ್ಯಾಟರಿ ಸಿಸ್ಟಮ್ ನಿಂದ ಪಡೆಯಬಹುದು 85% ಮಾತ್ರ ಪಂಪ್ಡ್ ಸ್ಟೋರೇಜ್ ನಲ್ಲಿ ನಿರೀಕ್ಷಿಸಬಹುದಾಗಿದೆ. ಸಬ್ ಸ್ಟೇಷನ್ ಗಳಲ್ಲಿ ಬ್ಯಾಟರಿಯನ್ನ ಅಳವಡಿಸಬಹುದಾಗಿದೆ. ಮರಳನ್ನ ಶರಾವತಿ ನದಿಯಲ್ಲೇ ಮರಳನ್ನ ತೆಗೆದು ಸುರಂಗ ಮಾರ್ಗ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಙದ ಅಜಯ್ ಶರ್ಮಾ ವರಾಹಿ ನದಿಯೋಜನೆಗೆ ಸುರಂಗ ಮಾರ್ಗ ನಿರ್ಮಾಣದಿಂದ ಅನಾನುಕೂಲ ಸಂಭವಿಸಿಲ್ಲ ಶರಾವತಿಯಲ್ಲಿ ಸಂಭವಿಸಿಲ್ಲ ಎಂಬ ಕೆಪಿಸಿಸಿಯ ಅಧಿಕಾರಿಗಳ ಹೇಳಿಕೆಯೂ ಸತ್ಯಕ್ಕೆ ದೂರವಾಗಿದೆ. 2019 ರಲ್ಲಿ ಮಾಣಿ ಯಿಂದ ಉಡುಪಿಯವರೆಗೆ ಬಂಡೆ ಜಾರಿತ್ತು. ತೀರ್ಥಹಳ್ಳಿ ಎಪಿಸೆಂಟರ್ ನಲ್ಲಿ ದಾಖಲಾಗಿದೆ ಎಂದರು. 

KPCL officials held a press conference to hide the truth - serious allegations from environmentalists

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close