SUDDILIVE || SHIVAMOGGA
ವಸಂತ್ ಕುಮಾರ್ ಮತ್ತು ಅವರ ಮಗನ ವಿರುದ್ಧ ದಾಖಲಾದ ಜಾತಿನಿಂದನೆ ಪ್ರಕರಣ ಸತ್ಯಕ್ಕೆ ದೂರವಾದುದ್ದು-ನಾ.ಹಿ.ವೇ.ಒಕ್ಕೂಟ ಆರೋಪ-The caste abuse case filed against Vasanth Kumar and his son is far from the truth - alleges the Civil Rights Forum Union
ನಾಗರೀಕ ಹಿತರಕ್ಷಣ ವೇದಿಕೆ ಒಕ್ಕೂಟದ ಕೆವಿ ವಸಂತ್ ಕುಮಾರ್ ಮತ್ತು ಅವರ ಮಗನ ವಿರುದ್ಧ ಎಸ್ ಸಿ ಎಸ್ಟಿ ಅಡಿಯಲ್ಲಿ ದೂರು ದಾಖಲಾಗಿರುವುದು ಸತ್ಯಕ್ಕೆ ದೂರವಾಗಿದೆ ಎಂದು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಕುಮಾರ್ ಶೆಟ್ಟಿ ನ.14 ರಂದು ವಸಂತ್ ಕುಮಾರ್ ಮತ್ತು ಅವರ ಮಗ ಭಾರ್ಗವ್ ವಿರುಧ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಹಿಯರಿಂಗ್ ಆಗಿದೆ. ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಇಬ್ಬರೂ ಅಲ್ಲಿ ಇಲ್ಲ. ಬಿ ರಿಪೋರ್ಟ್ ಆಗಬಹುದು ಆದರೆ ಸಾಮಾಜಿಕ ಹೋರಾಟಗಾರರಿಗೆ ಅವಮಾನ ಆಗಬಾರದು. ದುರ್ಬಲರ ರಕ್ಷಣೆಗೆ ಇರಬೇಕಿದ್ದ ಕಾನೂನು ಬಲಿಷ್ಠರ ಪಾಲಾಗುತ್ತಿದೆ ಎಂದು ದೂರಿದರು.
ಎಫ್ ಐಆರ್ ಮಾಡುವ ಮೊದಲು ಸಾಧಕಬಾಧಕ ಯೋಚಿಸಿ ದಾಖಲಿಸಬೇಕಿತ್ತು. ಈ ಮಾನಸಿಕ ಹಿಂಸೆಯಿಂದ ಹೊರಬರಲು ಸಾಧ್ಯನಾ? ಸಭ್ಯ ನಾಗರೀಕ ಸಮಾಜ ಪ್ರಬಲವಾದ ವಿರೋಧ ವ್ಯಕ್ತಪಡಿಸುವುದಾಗಿ ಆಗ್ರಹಿಸಿದರು.
ಆಗಿದ್ದೇನು?
ಮಂದಾರ ಶಾಲೆ ಖರೀದಿ ವಿಚಾರದಲ್ಲಿ ಎಂಒಯು ಆಗದೆ ವ್ಯವಹಾರ ನಡೆದಿದೆ. ಶಾಲೆಗೆ ಫರ್ನಿಚರ್ ವಿಚಾರದಲ್ಲಿ ಇಬ್ಬರಿಗೂ ಆಡಿಟರ್ ಆದವರು ವಸಂತ್ ಕುಮಾರ್ ಆಗಿದ್ದರು. ಮಾತುಕತೆ ಬಿದ್ದಾಗ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಕಾನೂನು ಪ್ರಕಾರ ಏನಬೇಕಾದರೂ ಮಾಡಿ ಆದರೆ ನ್ಯಾಯಯುತವಾಗಿ ದೂರು ನೀಡಬೇಕು ಎಂದು ಆಗ್ರಹಿಸಿದರು.
The caste abuse case filed against Vasanth Kumar and his son
