alt="ad" />

ಮುಂದು ವರೆದ KSRTC ಬಸ್ ಚಾಲಕರ ಕಳ್ಳಾಟ, ಗೋಪಿ ವೃತ್ತದಲ್ಲಿ ಪಿಎಸ್ಐ ಖಡಕ್ ವಾರ್ನಿಂಗ್-KSRTC bus driver continues to drive in city, PSI issues warning at Gopi Circle

 SUDDILIVE || SHIVAMOGGA

ಮುಂದು ವರೆದ KSRTC ಬಸ್ ಚಾಲಕರ ಕಳ್ಳಾಟ, ಗೋಪಿ ವೃತ್ತದಲ್ಲಿ ಪಿಎಸ್ಐ ಖಡಕ್ ವಾರ್ನಿಂಗ್-KSRTC bus driver continues to drive in city, PSI issues warning at Gopi Circle

KSRTC, DRIVER

KSRTC ಬಸ್ ಗಳ ಸಂಚಾರವನ್ನ ನಗರದ ಒಳಗೆ ನಿಷೇಧಿಸಿದ್ದರೂ ಸಹ ಬಸ್ ಗಳು ನಗರದ ಒಳಗೆ ಸಂಚರಿಸುತ್ತಿರುವುದರಿಙದ ಇಂದು ಶಿವಮೊಗ್ಗದ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ KSRTC ಬಸ್ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದ ಒಳಗೆ KSRTC ಬಸ್ ಗಳ ಸಂಚಾರಕ್ಕೆ ನಿಷೇಧವಿದ್ದರೂ ಸಹ ಬಸ್ ಚಾಲಕರು ಉದ್ದೇಶ ಪೂರಕವಾಗಿ ಸಂಚರಿಸುತ್ತಿರುವುದರ ವಿರುದ್ಧ ಮಾಧ್ಯಮಗಳು ನಿರಂತರವಾಗಿ ಸುದ್ದಿಮಾಡಿಕೊಂಡು ಬಂದಿವೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಸಿಟಿ ಒಳಗೆ ಬಸ್ ಸಂಚಾರವನ್ನ ನಿಷೇಧಿಸಲಾಗಿದ್ದರೂ ಸಹ ಬಸ್ ಗಳು ನಿರಂತರವಾಗಿ ಚಲಿಸುತ್ತಿರುವುದರಿಂದ ನಗರದ ಒಳಗೆ ಟ್ರಾಫಿಕ್ ಜ್ಯಾಮ್ ನಂತಹ ಬಿಸಿ ದ್ವಿಚಕ್ರ ವಾಹನ ಮತ್ತು ಕಾರು ಚಾಲಕರಿಗೆ ತಟ್ಟುತ್ತಿತ್ತು. 


ಈ ಬಗ್ಗೆ ಟ್ರಾಫಿಕ್ ಪೊಲೀಸರು ನಿರಂತರವಾಗಿ KSRTC  ಅಧಿಕಾರಿಗಳ ಸಭೆ ನಡೆಸಿದ ಮೇಲೂ ಬಸ್ ಚಾಲಕರು ಕೇರ್ ಮಾಡದ ಹಿನ್ಬಲೆಯಲ್ಲಿ ಇಂದು ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್ಐ ಸ್ವಪ್ನ ಅವರ ನೇತೃತ್ವದಲ್ಲಿ ಕಾರ್ಯಚರಣೆಯಾಗಿದೆ. ಗೋಪಿ ವೃತ್ತದಲ್ಲಿ 7 ಬಸ್ ಗಳನ್ನು ತಡೆದು ನಿಲ್ಲಿಸಿದ್ದಾರೆ. KSRTC ಬಸ್ ಸ್ಟ್ಯಾಂಡ್ ಇನ್ಚಾರ್ಜ್ ಅವರನ್ನ ಸ್ಥಳಕ್ಕೆ ಕರೆಯಿಸಿ ಚಾಲಕ ನತ್ತು ಕಂಡಕ್ಟರ್ ಗಳಿಗೆ ವಾರ್ನ್ ಮಾಡಿದ್ದಾರೆ. 


ಆದರೂ ಡೋಂಟ್ ಕೇರ್ ಎಂದು KSRTC ಬಸ್ ಗಳು ನಗರದ ಒಳಗೆ ಸಂಚರಿಸುತ್ತಿವೆ. ಚಿತ್ರದುರ್ಗ, ಮೈಸೂರು, ಬೆಂಗಳೂರು ಚೆನ್ಬೈ ಯಿಂದ ಬರುವ ಬಸ್ ಗಳು ಬೈಪಾಸ್ ಮೂಲಕ ಬಸ್ ನಿಲ್ದಾಣ ಸೇರಬೇಕು. ಶಿಕಾರಿಪುರದಿಂದ ಬರುವ ಬಸ್ ಗಳು ಉಷಾ ನರ್ಸಿಂಗ್ ಹೋಂ ಮೂಲಕ  ಬಸ್ ನಿಲ್ದಾಣ ತಲುಪಬೇಕು. ಹೊನ್ನಾಳಿ ಹುಬ್ಬಳಿ ಕಡೆಯಿಂದ ಬರುವ ಬಸ್ ಗಳು ಸಹ ವಿದ್ಯಾನಗರದ ಮೂಲಕ‌ ಬಸ್ ನಿಲ್ದಾಣಕ್ಕೆ ತಲುಪಬೇಕೆಂದು ನಿಯಮ ಮಾಡಿದರೂ ಸಹ ಬಸ್ ಚಾಲಕರು ಕಳ್ಳಾಟ ಮುಙದುವರೆದಿದೆ. ಕೆಲ ಬಸ್ ಚಾಲಕರು ಊರಿನ ಸೂಚನೆ ಫಲಕವನ್ನ ನಗರ ದಾಡಿದ ಮೇಲೆ ಹಾಕಿಕೊಂಡು ಸಿಟಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಓಡಾಡುತ್ತಿರುವುದು ತಿಳಿದು ಬಂದಿದೆ. 

ಈ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಡಿಸಿ ಆದೇಶವಿದ್ದರೂ ಬಸ್ ಗಳು ನಿರಂತರವಾಗಿ ಸಿಟಿಯಿಂದಲೇ ಹಾದು ಹೋಗುತ್ತಿವೆ. KSRTC ಅಧಿಕಾರಿಗಳ ಸಭೆ ನಂತರವೂ ಇದೇ ರೀತಿ ನಡೆಯುತ್ತಿರುವುದು ಡಿಸಿ ಆದೇಶಕ್ಕೆ ಬೆಲೆಯಿದೆಯೋ ಇಲ್ಲವೋ ಎಂಬಂತಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close