SUDDILIVE || SHIVAMOGGA
ದಿವಾನ್ ಶಾ ಆಲೀಂ ದರ್ಗಾದಲ್ಲಿ, ಮೂರುದಿನ ಉರುಸ್, ಮಳಿಗೆ ಉದ್ಘಾಟನೆ, ನಾಳೆ ಸಾಮೂಹಿಕ ಲಗ್ನ-Three-day Urs at Diwan Shah Alim Dargah, shop inauguration, mass marriage tomorrow
ನಗರದ ದಿವಾನ್ ಶಾ ಆಲೀಂ ದರ್ಗಾದಲ್ಲಿ ಮೂರುದಿನ ಉರುಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಇಂದು ನಗರದಲ್ಲಿ ಮೆರವಣಿಗೆ ನಡೆದಿದೆ.
ಮಹಾವೀರ ವೃತ್ತದಲ್ಲಿರುವ ದಿವಾನ್ ಷಾ ಆಲೀಂ ದರ್ಗಾದಲ್ಲಿ ಅಧ್ಯಕ್ಷ ಕೇಬಲ್ ಫೈರೋಜ್, ಉಪಾಧ್ಯಕ್ಷ ಇಮ್ರಾನ್, ಎಂಡಿ ಷರೀಫ್ ನೇತೃತ್ವದಲ್ಲಿ ನೂರಾರು ಜನ ಭಕ್ತರು ಸೇರಿ ಪ್ರತಿವರ್ಷದಂತೆ ಈ ವರ್ಷವೂ ಸಹ ಉರುಸ್ ಅಂಗವಾಗಿ ಮೆರವಣಿಗೆ ನಡೆಸಿದ್ದಾರೆ. ನಗರದ ದಿವಾನ್ ಷಾ ಆಲೀಂ ದರ್ಗಾದಿಂದ ನೂರಾರು ಜನರು ಬಾಲರಾಜ್ ಅರಸ್ ರಸ್ತೆ ಮಾರ್ಗವಾಗಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿದ್ದಾರೆ.
ಬಾಪೂಜಿನಗರ, ಬಿ ಹೆಚ್ ರಸ್ತೆ ಪೆನ್ಷನ್ ಮೊಹಲ್ಲಾ , ಲಷ್ಕರ್ ಮೊಹಲ್ಲಾ, ಗಾಂಧಿ ಬಜಾರ್ ಎಂಕೆ ಕೆ ರಸ್ತೆ, ಕೆಆರ್ ಪುರಂ, ಅಮೀರ್ ಅಹ್ಮದ್ ವೃತ್ತ,ಗೋಪಿ ಸರ್ಕಲ್ ವಾಪಸ್ ದರ್ಗಾಕ್ಕೆ ವಾಪಸ್ ಆಗಲಿದ್ದು, ನಂತರ ಅನ್ನಸಂತರ್ಪಣೆ ನಡೆಯಲಿದೆ. ಇದೇ ವೇಳೆ ದರ್ಗಾದಲ್ಲಿರುವ 8 ಮಳಿಗೆಗಳನ್ನೂ ಸಹ ಉದ್ಘಾಟಿಸಲಾಗುವುದು.
ನಾಳೆ ನ.14 ರಂದು ಮಧ್ಯಾಹ್ನ 1.00 ಗಂಟೆಗೆ 14 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಸುಮಾರು 1,000 ಜನರು ಭಾಗವಹಿಸಲಿದ್ದಾರೆ. ನ.15 ರಂದು ಸಂಜೆ ದರ್ಗಾದ ಆವರಣದ ಒಳಭಾಗದಲ್ಲಿ ಕವ್ವಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ತುಮಕೂರಿನ ಸೈಯದ್ ತೀರ್ ಪಾಷಾ ಗುರುಗಳು ಬರಲಿದ್ದಾರೆ. 1,000 ಏನದು ಪ್ರಮುಖ ಸಂಸ್ಥೆಗಳು ಮತ್ತು ಜನರು ಸೇರುವ ನಿರೀಕ್ಷೆ ಇದೆ.
Three-day Urs at Diwan Shah Alim Dargah, shop inauguration, mass marriage tomorrow
