ad

ಲೋಕಾಯಕ್ತ ದಾಳಿ-Lokayakta attack in thirthahalli

SUDDILIVE || THIRTHAHALLI

ಲೋಕಾಯಕ್ತ ದಾಳಿ-Lokayakta attack in Thirthahalli

Lokayukta, attack


ದುರಾಡಳಿತ, ಅವ್ಯವಹಾರಗಳ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಗೆ ನಿನ್ನೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಿಢೀರ್‌ ಭೇಟಿ  ನೀಡಿ ಪರಿಶೀಲಿಸಿದರು.

ನಿವೇಶನ ಇ–ಸ್ವತ್ತು ನೋಂದಣಿಯಲ್ಲಿ ಅಕ್ರಮ, ಅವ್ಯವಹಾರ, ಸಾರ್ವಜನಿಕರ ಅರ್ಜಿ ವಿಲೇವಾರಿ ವಿಳಂಬ, ಸರ್ಕಾರಿ ಸೌಕರ್ಯ ವಿತರಣೆಯಲ್ಲಿ ಲೋಪ, ದುರಾಡಳಿತ ಕುರಿತಂತೆ ಆರೋಪಗಳು ಕೇಳಿ ಬಂದಿದ್ದರಿಂದ ದಾಳಿ ನಡೆಸಲಾಗಿದೆ ಎಂದು‌ ಹೇಳಲಾಗುತ್ತಿದೆ. ಪಟ್ಟಣಪಂಚಾಯಿತಿಯಲ್ಲಿ ಭ್ರಷ್ಠಾಚಾರದ ಆರೋಪವನ್ನ ಶಾಸಕ ಆರಗ ಜ್ಞಾನೇಂದ್ರ ಸಹ ಮಾಡಿದ್ದರು.

ಕಾಮಗಾರಿ, ಆರೋಗ್ಯ, ಕಂದಾಯ, ಇ–ನೋಂದಣಿ, ಲೆಕ್ಕ, ಆಡಳಿತ ಶಾಖೆಗಳಲ್ಲಿ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್, 8 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಡಿ.ನಾಗರಾಜ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Lokayakta attack in Thirthahalli

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close