ಕಾರ್ ಬ್ಲಾಸ್ಟ್ ವಿಷಯದಲ್ಲಿ ರಾಹುಲ್ ಇದುವರೆಗೂ ಪ್ರತಿಕ್ರಿಯಿಸಿಲ್ಲ-ವಿಜೇಂದ್ರ ಬೇಸರ- Rahul has not responded to the car blast issue yet - Vijendra is upset

 SUDDILIVE || SHIVAMOGGA

ಕಾರ್ ಬ್ಲಾಸ್ಟ್ ವಿಷಯದಲ್ಲಿ ರಾಹುಲ್ ಇದುವರೆಗೂ ಪ್ರತಿಕ್ರಿಯಿಸಿಲ್ಲ-ವಿಜೇಂದ್ರ ಬೇಸರ-Rahul has not responded to the car blast issue yet - Vijendra is upset

Car, blast

ನವದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಬ್ಲಾಸ್ಟ್ ಭಯೋತ್ಪಾದಕರ ದಾಳಿಯಾಗಿದೆ. ಗೃಹಸಚಿವ ಅಮಿತ್ ಶಾ ಮತ್ತು ಪ್ರಧಾನಿಯವರು ಆಸ್ಪತ್ರೆಗೆ ಭೇಟಿಯಾಗಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಇಂತಹ ಸಂಧರ್ಭದಲ್ಲಿಯೂ ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಬೇಸರ ವ್ಯಕ್ತಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್, ಸೇನೆಯ ಸೇನಾಭವನ, ಪ್ರಮುಖ ಸ್ಞಳಗಳು ಉಗ್ರ ಟಾರ್ಗೆಟ್  ಲೀಸ್ಟ್ ನಲ್ಲಿ ಇತ್ತು. ಇಂತಹಸಂದಿಗ್ಧ ಸ್ಥಿತಿಯಲ್ಲಿ ಎಲ್ಲರೂ ಒಂದಾಗಬೇಕಿದೆ. ಭಾರತೀಯ ಎಂಬ ಮನೋಭಾವವದಿಂದ ಒಗ್ಗಟ್ಟು ಪ್ರದರ್ಶಿಸಬೇಕಿತ್ತು. ವಿಪಕ್ಷದ ನಾಯಕ ರಾಹುಲ್ ಗಾಂಧಿ ಘಟನೆ ಬಗ್ಗೆ ಈಕ್ಷಣದವರೆಗೂ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ನಾಯಕರು ಮನಬಂದಂತೆ ಮಾತಾಡುತ್ತಿದ್ದಾರೆ. ಘಟನೆಯನ್ನ ಬಿಹಾರ್ ಚುನಾವಣೆಯನ್ನ ಲಿಂಕ್ ಮಾಡಲಾಗುತ್ತಿದೆ. ಇದು ಮೂರ್ಖತನದ ಪರಮಾವಧಿಯಾಗಿದೆ. ದೇಶ ದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. 

ಸಂಧಿಗ್ಧ ಸ್ಥಿತಿಯಲ್ಲಿ ವಿಪಕ್ಷಗಳು ದೇಶದ ಬಗ್ಗೆ ಚಿಂತನ ಸ ಬೇಕು. ಇದು ದೇಶದ್ರೋಹದ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷದ ವರು ಅಮಿತ್ ಶಾ ರಿಗೆ ಬಳೆ ಪೋಸ್ಟ್ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷ ಎಷ್ಟು ಬಾರಿ ವಿಫವಾಗಿದೆ ಟೆರರ್ ಅಟ್ಯಾಕ್ ಆದಾಗ ಎಂಬುದನ್ನ ಆತ್ಮವಲೋಕನ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಕಾಂಗ್ರೆಸ್ ಬಳೆ ತೊಡುವುದಲ್ಲ. ಬಳೆಯ ಫ್ಯಾಕ್ಟರಿಯನ್ನೇ ಸ್ಥಾಪಿಸಬೇಕಿದೆ. ಆಡಳಿತದ ಪಕ್ಷಕ್ಕೆ ಬಲಕೊಡುವ ಕೆಲಸ ಆಗಬೇಕು ಎಂದರು. 

ಘಟನೆಯಲ್ಲಿ ಡಾಕ್ಟರ್ ಗಳಪಾಲುಗೊಳ್ಳುವಿಕೆ ಆಘಾತತಂದಿದೆ. ಕಬ್ಬುಬೆಳೆಗಾರಿಂದ ಪ್ರತಿಭಟನೆ ಕಳೆದ 20 ದಿನಗಳಿಂದ ನಡೆಯುತ್ತಿತ್ತು. ಸಿಎಂ ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಸಭೆ ನಡೆದರೂ ಬಗೆಹರಿಯುತ್ತಿಲ್ಲ. ಬೇರೆ ಬೇರೆ ಜಿಲ್ಲಿಗೆ ಉಸ್ತುವಾರಿ ಸಚಿವರನ್ನ ಕಳುಹಿಸಬೇಕು. ಪ್ರವಾಹ ಬಂದರೂ ಬೆಂಗಳೂರಿನಲ್ಲಿ ಆಯಾ ಜಿಲ್ಲಾ ಉಸ್ತುವಾರಿಗಳಿ ಬೆಂಗಳೂರಿನಲ್ಲಿ ಮಲಗಿದ್ದರು. ಅವರ ಮೂಲಕ ಪರಿಹರಿಸಬೇಕು. 

ಮೆಕ್ಕೆ ಜೋಳ ಖರೀದಿ ಕೇಂದ್ರ ಆರಙಭವಾಗಿಲ್ಲ. ತಕ್ಷಣವೇ ಸರ್ಕಾರ ಸ್ಪಂಧಿಸಬೇಕು. ಮುಂದಿನ ಬೆಳೆ ಪರಿಹಾರವನ್ನ ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದರು. ಆದರೂ ಇಲ್ಲಿಯವರೆಗೆ ಎರಡು ಮೂರು ಜಿಲ್ಲೆಗೆ ಪರಿಹಾರ ನೀಡಿದ್ದು ಬಿಟ್ಟರೆ ಉಳಿದಜಿಲ್ಲೆಗೆ ನೀಡಿಲ್ಲ. ರೈತರ ಸ್ಪಂಧಿಸದೆ ಹೋದರೆ ವಿಕೋಪಕ್ಕೆ ಹೋಗುವ ಸಾಧ್ಯವಿಲ್ಲ. ಸುಭದ್ರವಿರುವ ಸರ್ಕಾರ ಯಾವ ಸಮಯದಲ್ಲಿ ಏನಾಗಲಿದೆ ಗೊತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಯಾರು ಸಲಹೆ ನೀಡುತ್ತಾರೆ ಗೊತ್ತಿಲ್ಲ. ಅಸಂಘಟಿತ ಕಾರ್ಮಿಕರಿಗೆ ಇಂಧನದ ಮೇಲೆ ಒಂದು ರೂ ಸೆಸ್ ಹಾಕಲು ಮುಂದಾಗುತ್ತಿದೆ. 

ಕಾರ್ಮಿಕರ ಕಲ್ಯಾಣದ ನೆಪದಲ್ಲಿ ತಮ್ಮ ಕಲ್ಯಾಣದ ಬಗ್ಗೆ ಸಚಿವರು ಕಾಣುತ್ತಿರುವ ಭಾವನೆಯಾಗುತ್ತಿದೆ. ರಾಜ್ಯದ ರಸ್ತೆಗಳಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಪ್ರತಿಭಟನಯ ಪರಿಣಾಮ 3000 ಕೋಟಿ ರೂ ಹಣ ಗುಂಡಿಮುಚ್ಚಲು ಮುಂದಾಗಿರುವ ಬಗ್ಗೆ ಕೇಳಿ ಬರುತ್ತಿದೆ. ರೈತರ ಬಗ್ಗೆ, ಬಡವರ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು ಎಂದರು. 

ವಿಜೇಂದ್ರ ಕಬ್ವು ಬೆಳೆಗಾರರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು ಫೋಸ್ ಕೊಟ್ಟರು ಎಂಬ ಹೇಳಿಕೆ ಸರ್ಕಾರದ ಸಚಿವರು ಹೇಳಿದ್ದಾರೆ. ಮೋಜು ಮಾಡಲು ನಾನು ಹೋಗಿರಲಿಲ್ಲ. ಸಕ್ಕರೆ ಸವೊವರು ಮತ್ತು ಜಿಲ್ಲ ಉಸ್ತುವಾರಿ ಸವಿವರು ಪ್ರತಿಭಟನೆಗೆ ಹೋಗಿಲ್ಲ. ಅವರು ಹೋಗದೆ ಇದ್ದಾಗ ನಾವು ಹೋಗಿ ಬಗೆಹರಿಸಿದ್ದೇವೆ ಎಂದಾವರುಕಬ್ಬಿನ ಬೆಳೆ ವಿಚಾರದಲ್ಲಿ ಮಾತ್ರ ಕೇಂದ್ರ ಪಾಲು ಎಂದು ಹೇಳುತ್ತಿಲ್ಲ. ಅತಿವೃಷ್ಠಿ ಆದಾಗಲೂ ಇದೇ ಹೇಳಿದ್ದಾರೆ. 135 ಸ್ಥಾನ ಬಂದ ಕಾಂಗ್ರೆಸ್ ಏನು ಮಾಡುತ್ತದೆ ಎಂದು ಪ್ರಶ್ನಿಸಿದರು. 

ನೆರೆ ಬಂದಾಗ ರಾಯಚೂರು ಬೀದರ್ ಕಡೆ ಬಂದಾಗ  ಉಸ್ತುವಾರಿ ಸಚಿವರು ಹೋಗಿಲ್ಲ. ಎಕ್ಸಿಟ್ ಪೋಲ್ ನಿಜವಾಗಲಿದೆ ಎನ್ ಡಿಎ ಸರ್ಕಾರ ರಚಿಸಲಿದೆ. ಬಿಹಾರ ಚುನಾವಣೆ ಫಲಿತಾಂಶದ ನಂತರ ಸಿಎಂ ಬದಲಾವಣೆವಿಚಾರ ಕುರಿತು ಸಿಎಲ್ ಪಿ ತೀರ್ಮಾನವೆಂದು ಒಬ್ಬಬ್ಬರು ಕಾಂಗ್ರೆಸ್ ನಾಯಕರು ಒಂದು ಹೇಳಿಕೆ ನೀಡುತ್ತಿದ್ದಾರೆ. ಕಾದು ನೋಡಬೇಕೆಂದು ತಿಳಿಸಿದರು. 

Rahul has not responded to the car blast issue yet - Vijendra is upset

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close