ಲೋಕಾಯುಕ್ತರ ರಗಡ್ ದಾಳಿಗೆ ಕೋಟಿಗಟ್ಟಲೆ ಆಸ್ತಿ ಜಪ್ತಿ-Lokayukta raids, property worth crores seized

 SUDDILIVE || SHIVAMOGGA

ಲೋಕಾಯುಕ್ತರ ರಗಡ್ ದಾಳಿಗೆ ಕೋಟಿಗಟ್ಟಲೆ ಆಸ್ತಿ ಜಪ್ತಿ-Lokayukta raids, property worth crores seized

Lokayukta, raids


ಆದಾಯಕ್ಕಿಂತಲು ಹೆಚ್ಚಿಗೆ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆ, ಲೋಕಾಯುಕ್ತ ಪೊಲೀಸರು ಶಿವಮೊಗ್ಗ ಮೆಡಿಕಲ್‌ ಕಾಲೇಜು ಎಫ್‌.ಡಿ.ಎ ಲಕ್ಷ್ಮೀಪತಿ.ಸಿ.ಎನ್‌ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಐದು ಕಡೆ ದಾಳಿ ನಡೆಸಿ ಒಟ್ಟು ₹2.49 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ತನಿಖೆಯನ್ನ ಲೋಕಾಯುಕ್ತರು ಮುಂದುವರೆಸಿದ್ದಾರೆ. 

ಲಕ್ಷ್ಮೀಪತಿ ಬಳಿ 3 ಮನೆಗಳು, 3 ಎಕರೆ 20 ಗುಂಟೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ ₹1,63,80,000 ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ದಾಳಿ ಸಂದರ್ಭ ₹12,01,720 ನಗದು, ₹ 23,29,880 ಮೌಲ್ಯದ ಆಭರಣ, ₹ 23.04 ಲಕ್ಷ ಮೌಲ್ಯದ ವಾಹನಗಳು, ₹27,47,881 ಮೌಲ್ಯದ ಗೃಯೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಒಟ್ಟು ₹2,49,63,481 ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಇವತ್ತು ರಾಜ್ಯಾದ್ಯಂತ 10 ಅಧಿಕಾರಿಗಳಿಗೆ ಸಂಬಂಧಿಸಿದ 47 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಒಟ್ಟು ₹35,31,77,227 ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Lokayukta raids, property worth crores seized

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close