ದೌರ್ಜನ್ಯದ ಮುಂದೆ ಮಹಿಳೆ ಕುಬ್ಜಳಾಗಿದ್ದಾಳೆ, ಕಾನೂನು ವೀಕ್ ಆಗ್ತಿವೆ-Women are dwarfed by violence, laws are being weakened

 SUDDILIVE || SHIVAMOGGA

ದೌರ್ಜನ್ಯದ ಮುಂದೆ ಮಹಿಳೆ ಕುಬ್ಜಳಾಗಿದ್ದಾಳೆ, ಕಾನೂನು ವೀಕ್ ಆಗ್ತಿವೆ-Women are dwarfed by violence, laws are being weakened

Woman, dwarfed


ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮಹಿಳ ಆಯೊಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರ ನೇತೃತ್ವದಲ್ಲಿ ನಡೆದ ಪೋಶ್ ಕಮಿಟಿ ಸಭೆಯಲ್ಲಿ ನೂರಾರು ಮಹಿಳೆಯರು ಬಂದು ಕಣ್ಣೀರು ಇಟ್ಟುಕೊಂಡು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡಿದ್ದಾರೆ. ಬಹುತೇಕ ಪ್ರಕರಣಗಳು ಪೊಲೀಸ್ ಇಲಾಖೆಗೆ ಸೇರಿದ ಪ್ರಕರಣಗಳಾಗಿವೆ. 

ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೋ ಸಿಗಲ್ವೋ ಗೊತ್ತಿಲ್ಲ. ಪರಿಹಾರ ಸಿಗುವ ಭರವಸೆಯನ್ನ ಮಾತ್ರ ಅಧ್ಯಕ್ಷರು ಕೊಟ್ಟಿರುವುದು ನೆಮ್ಮದಿಯನ್ನ ತಂದಿರ ಬಹುದು. ಆದರೆ ಇಲ್ಲಿನ ಬಹುತೇಕ ಮಹಿಳೆಯರು ಜಿಲ್ಲಾಡಳಿತದ ಕಚೇರಿಗಳನ್ನ ಹತ್ತಿ ಇಳಿದವರೆ. ಇವರೆಲ್ಲಾ ನಾಗಲಕ್ಷ್ಮಿ ಚೌಧರಿ ಬಳಿ ಬಂದು ಕೈಹಿಡಿದು ಅಳುತ್ತಾ ಬಂದು ಇಂದು ನೋವು ತೋಡಿಕೊಂಡಿದ್ದಾರೆ.

ಚಂದ್ರಮ್ಮ ಎಂಬ ಮಹಿಳೆ ಬಂದು ತಮ್ಮ‌ಮಕ್ಕಳೇ ಹೊಡೆದು ಹಿಂಸೆ ಕೊಡುತ್ತಿರುವ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ಮಹಿಳೆ ಮತ್ತು ಕಲ್ಯಾಣ ಇಲಾಖೆಯಲ್ಲಿ ಸಾಂತ್ವಾನ ಕೇಂದ್ರದಲ್ಲಿರುವ ಮಹಿಳೆಯೆ ಅಧ್ಯಕ್ಷೆಯ ಮುಂದೆ ಬಂದು ಸಂತ್ರಸ್ತರಾಗಿದ್ದಾರೆ. ಮಹಿಳೆಯೊಬ್ಬರು ಆನ್ ಲೈನ್ ವಂಚನೆಗೆ ಒಳಗಾಗಿ

54 ಲಕ್ಷ ರೂ. ಕಳೆದುಕೊಂಡು ಬಡವರಾಗಿದ್ದೇವೆ ಹಣಕೊಡಿಸಿ ಎಂದು ಹೇಳಿಕೊಂಡಿದ್ದಾರೆ, ಮಹಿಳಾ ಪೇದೆಯ ಪತಿಯಿಂದಲೇ ದೌರ್ಜನ್ಯವಾಗಿರುವುದು ಬೆಳಕಿಗೆ ಬಂದಿದೆ. ಮಹಿಳ ಮತ್ತು ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುವ ಸಂತ್ರೆಸ್ತೆಗೆ ಪರಿಹಾರ ಸಿಕ್ಕಿಲ್ಲ ಅವರು ಬಂದು ನೋವು ತೋಡಿಕೊಂಡಿದ್ದಾರೆ. ಇವರಿಗೆ  ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಲಾಯಿತು. ಹೀಗೆ ಕಮಿಟಿ ಸಭೆಯಲ್ಲಿ ಮುಂದೆ ಮಹಿಳೆಯರ ನೂರಾರು ಪ್ರಕರಣಗಳು ಬಂದಿದೆ.

ಇನ್ನೂ ಹೊರಗಡೆ ಅದೆಷ್ಟೋ ಮಹಿಳೆಯರು ಕಾಲಿಲ್ಲದೆ, ಸಣ್ಣ ಮಗುವನ್ನ ಹೊತ್ತುಕೊಂಡು ಬಂದು ಆಯೋಗದ ಅಧ್ಯಕ್ಷೆಯನ್ನ ಭೇಟಿ ಮಾಡಲು ಬಂದಿದ್ದರು. ಈ ಮಹಿಳೆಯರ ದೂರುಗಳು ಅಧ್ಯಕ್ಷೆಯರ ಮುಂದೆ ಬಂದು ಕಣ್ಣಿರಿಟ್ಟಿದ್ದಾರೆ. ಈ ಕಣ್ಣೀರನ್ನ ವರೆಸುವಲ್ಲಿ ಜಿಲ್ಲಾಡಳಿತದ ವೈಫಲ್ಯಗಳು ಎತ್ತು ತೋರುತ್ತಿದ್ದವು. ಈ ದೂರುಗಳಲ್ಲಿ ಬಹುತೇಕ ಪೊಲೀಸ್ ಇಲಾಖೆಯವರದ್ದೇ ಆಗಿದ್ದಾವೆ. 

ಸಮಸ್ಯೆಗಳಿಗೆ ಪರಿಹಾರಕ್ಕೆ ಜಿಲ್ಲಾಡಳಿತ ಸ್ಪಂಧಿಸುವಲ್ಲಿ ವಿಫಲವಾಗಿರುವುದರ ಜೊತೆಗೆ ಸೂಕ್ಷಮತೆಯನ್ನೇ ಕಳೆದುಕೊಂಡು ಬಿಟ್ಟವಾ ಎಂಬ ಅನುಮಾನವೂ ಹೆಚ್ಚಿದೆ. ಕಾನೂನು ಸೇವಾ ಪ್ರಾಧಿಕಾರದ ನ್ಯಾಯಮೂರ್ತಿಗಳು ಮಹಿಳ ರಕ್ಷಣೆಗೆ ಕಾನೂನುಗಳು, ಅವುಗಳ ಬಗ್ಗೆ ಅರಿವನ್ನೂ ಮಾಡಲಾಗುತ್ತಿದೆ ಎಂಬುದನ್ನ ಸಭೆಗೆ ಹೇಳಿದ್ದಾರೆ. ಆದರೆ ಈ ಕಾನೂನುಗಳು ಮತ್ತು ಸೌಕರ್ಯಗಳು ಮಹಿಳೆಯರಿಗೆ ಸಿಗುತ್ತಿಲ್ಲವೆಂಬುದೂ ಸಹ ಅಷ್ಟೆ ಸತ್ಯ. ಹಾಗಾಗಿ ಬಹುತೇಕರು ಈ ರೀತಿಯ ಪ್ರಕರಣಗಳಲ್ಲಿ ಜನಪ್ರತಿನಿಧಿಗಳನ್ನೇ ಏಕೆ ಹುಡುಕಿಕೊಂಡು ಹೋಗಿ ಸಮಸ್ಯೆಗಳನ್ನ ಬಗೆಹರಿಸಿಕೊಳ್ತಾರೆ. ಇನ್ನು ಕೆಲವು ಪ್ರಕರಣ ನೋವಿನಲ್ಲೇ ಕಳೆದುಹೋಗುತ್ತವೆ.  ಹೀಗಾಗಿ ಜನಪ್ರತಿನಿಧಿ ಹಿರೋ ಆಗ್ತಿದ್ದಾರೆ ವಿನಃ ಕಾನೂನುಗಳು ವೀಕ್ ಆಗ್ತಿವೆ. 

ಕಾನೂನುಗಳು ಯುದ್ದಕಾಂಡದಲ್ಲಿ ರವಿಚಂದ್ರನ್ ಹಾಡಿದ ರೀತಿಯಲ್ಲಿ' ಸರ್ಕಾರದ ರೂಲ್ಸು ಗಳು ಲೈಟೇ ಇಲ್ಲದ ಕಂಬಗಳು' ಎಂಬಂತಾಗಿದೆ. ಸಂತ್ರಸ್ತ ಮಹಿಳೆಯರನ್ನ ತಲುಪುವಲ್ಲಿ ವಿಫಲವಾಗಿದೆ. ದೌರ್ಜನ್ಯದ ಮುಂದೆ ಮಹಿಳೆ ಕುಬ್ಜಳಾಗುತ್ತಿದ್ದಾಳೆ. 

Women are dwarfed by violence, laws are being weakened

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close