ಅನಧಿಕೃತ ಪಟಾಕಿ ಸಾಗಾಟ, ಲಾರಿ ವಶಕ್ಕೆ

 SUDDILIVE || SHIVAMOGGA

ಅನಧಿಕೃತ ಪಟಾಕಿ ಸಾಗಾಟ, ಲಾರಿ ವಶಕ್ಕೆ-Lorry seized for transporting illegal fireworks

Lorry, seized

ಅನಧಿಕೃತ ಸಾಗಿಸುತ್ತಿದ್ದ ಪಟಾಕಿಗಳನ್ನ ಶಿವಮೊಗ್ಗ ಪೊಲೀಸರು ಪತ್ತೆಹಚ್ಚಿದ್ದಾರೆ. ಸಾರಿಗೆ ಅಧಿಕಾರಿಗಳಿಂದ ಪರವಾನಗಿ ಪಡೆಯದೆ, ಸುರಕ್ಷಿತ ಕ್ರಮ ಕೈಗೊಳ್ಳದೆ ಪಟಾಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹4,15,741 ಮೌಲ್ಯದ ಪಟಾಕಿ ಜಫ್ತಿ ಮಾಡಲಾಗಿದೆ.

ತಮಿಳುನಾಡಿನ ಶಿವಾಕಾಶಿಯಿಂದ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗೋಡೋನ್‌ಗಳಿಗೆ ಪಟಾಕಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಂಜೀವ್‌ ಕುಮಾರ್‌ ನೇತೃತ್ವದಲ್ಲಿ ವಿರೂಪಿನಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದರು. ಸ್ಪೋಟಕ ವಸ್ತುಗಳ ಸಾಗಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಲಾರಿಯಲ್ಲಿ ಅಗ್ನಿ ನಿರೋಧಕ ವಸ್ತುಗಳು ಇಲ್ಲದಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ಚಾಲಕ ಇಬ್ರಾಹಿಂ ಸಾಬ್‌, ಲಾರಿ ಮಾಲೀಕ, ಪಟಾಕಿ ರವಾನಿಸಿದ ಸಂಸ್ಥೆ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು ಮಾಡಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lorry seized for transporting illegal fireworks

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close