ಗಾಂಜಾ ಜೊತೆ ಡ್ರಗ್ಸ್ ಪತ್ತೆ- Drugs found along with marijuana in shivamogga

 SUDDILIVE || SHIVAMOGGA

ಗಾಂಜಾ ಜೊತೆ ಡ್ರಗ್ಸ್ ಪತ್ತೆ- Drugs found along with marijuana in shivamogga


Drugs, ganja


ಶಿವಮೊಗ್ಗದ ಲಕ್ಷ್ಮೀಪುರ ಮತ್ತು ಶ್ರೀರಾಮ್ ಪುರದ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುವಾಗ ಡ್ರಗ್ಸ್ ಸಹ ಪತ್ತೆಯಾಗಿದೆ. ಈ ಡ್ರಗ್ಸ್ ಗ್ರಾಂಗೆ 10 ಸಾವಿರ ರೂ ಎಂಬುದಾಗಿ ತಿಳಿದುಬಂದಿದೆ.

ಸ್ಕಾರ್ಪಿಯೋ ಕಾರಿನಲ್ಲಿ ಬಂದ ಇಬ್ಬರು ಯುವಕರು ಈ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇರೆಗೆ ತುಂಗ ನಗರ ಪಿಎಸ್ಐ ರಘುವೀರ್ ಅವರು ಮೇಲಾಧಿಕಾರಿಗಳ ಅನುಮತಿ ಮೇರೆಗೆ, ಕ್ರೈಂ ಪೊಲೀಸ್ ಕಿರಣ್ ಮೋರೆ, ಅರುಣ್ ಕುಮಾರ್, ನಾಗಪ್ಪ ಅಡಿವೆಪ್ಪ, ರಂಗನಾಥ್, ಸಂತೋಷ್, ಲೋಕೇಶ್ ರವನ್ನ ಒಳಗೊಂಡ ತಂಡವನ್ನ ರಚಿಸಿಕೊಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ರಸ್ತೆ ಬದಿ ನಿಲ್ಲಿಸಿಕೊಂಡು ಗಾಂಜಾದ ಜೊತೆ ಕೆಂಪು ಮಿಶ್ರಿತ ವಸ್ತುವನ್ನ‌ಮಾರಾಟ ಮಾಡುತ್ತಿರುವುದು ತಿಳಿದುಬಂದಿದ್ದು ಪೊಲೀಸರು ಸ್ಕಾರ್ಪಿಯೋ ವಾಹನವನ್ನ‌ಸೀಜ್ ಮಾಡಿದ್ದಾರೆ. ಪ್ರಕರಣದಲ್ಲಿ ಓಡಿಹೋಗಲು ಯತ್ನಿಸಿದ್ದ ಇಬ್ಬರನ್ನ ಬಂಧಿಸಿದ್ದಾರೆ. ಟಿಪ್ಪುನಗರದ ನಿವಾಸಿ ಶಾಹೀದ್ (37) ಮತ್ತು ಸೂಳೆಬೈಲಿನ ನಿವಾಸಿ ಜಾಫರ್(23) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ 1.420 ಕೆಜಿ ಗಾಂಜಾ ಮತ್ತು 100 ಗ್ರಾಂಗೂ ಅಧಿಕ ಕೆಂಪು ಮಿಶ್ರಿತ ಡ್ರಗ್ಸ್ ಪತ್ತೆಯಾಗಿದೆ. ಗಾಂಜಾ ಹಾವಳಿಯ ಮಧ್ಯೆ ಈ ಡ್ರಗ್ಸ್ ಪತ್ತೆಯಾಗುತ್ತಿರುವುದು ಈ ವರ್ಷದ ಮೊದಲ ಪ್ರಕರಣವಾಗಿದೆ. ಶಿವಮೊಗ್ಗದಲ್ಲಿ ಗಾಂಜಾ ಪತ್ತೆಯ ನಡುವೆ ಡ್ರಗ್ಸ್ ಸಹ ಪತ್ತೆಯಾಗುತ್ತಿರುವುದು ನಶೆಯ ದಿಕ್ಕನ್ನೇ ಬದಲಿಸುತ್ತಿದೆಯಾ ಎಂಬ ಅನುಮಾನಕ್ಕೆ ಈ ಪ್ರಕರಣ ದಾಖಲಾಗುತ್ತಿದೆ. 

Drugs found along with marijuana  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close