ಮುಂದಿನ ಚುನಾವಣೆಯಲ್ಲಿ ಪುತ್ರ ಗಣೇಶನಿಗೆ ಆಶೀರ್ವದಿಸುವಂತೆ ಶಾಸಕ ಸಂಗಮೆಶ್ ಬಹಿರಂಗ ಮನವಿ-MLA Sangamesh publicly appeals for blessings for his son Ganesh in the next election

 SUDDILIVE || SHIVAMOGGA

ಮುಂದಿನ ಚುನಾವಣೆಯಲ್ಲಿ ಪುತ್ರ ಗಣೇಶನಿಗೆ ಆಶೀರ್ವದಿಸುವಂತೆ ಶಾಸಕ ಸಂಗಮೆಶ್ ಬಹಿರಂಗ ಮನವಿ-MLA Sangamesh publicly appeals for blessings for his son Ganesh in the next election

Mla, Sangmesh


ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಕೆ. ಸಂಗಮೇಶ್ ಅವರು ಮುಂದಿನ ಚುನಾವಣೆಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಚುನಾವಣ ರಾಜಕೀಯದಿಂದ ಹಿಂದೆಸರಿಯುವ ಘೋಷಣೆ ಮಾಡಿದ್ದಾರೆ. 

ಮುಂದಿನ ಚುನಾವಣೆಯಲ್ಲಿ ನಾನು ನನ್ನ ಸಹೋದರ ಕುಟುಂಬದವರು ಪುತ್ರ ಗಣೇಶ್ ಅವರನ್ನ ಚುನಾವಣೆ ಕಣಕ್ಕೆ ಇಳಿಸಲು ತೀರ್ಮಾನಿಸಿದ್ದೇವೆ.  ಅವರಿಗೆ ತಾವು  ಆಶೀರ್ವಾದ ಮಾಡುವ ಮೂಲಕ ಕ್ಷೇತ್ರದ ಜನತೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಇದೇ ನನ್ನ ಕೊನೆಯ ಚುನಾವಣೆ. ಇಷ್ಟು ವರ್ಷ ನೀವು ನಿಮ್ಮ ಸಹೋದರ ಎಂದು ತಿಳಿದು ನನಗೆ ಆಶೀರ್ವಾದ ಮಾಡಿದಂತೆ, ಮುಂದಿನ ಚುನಾವಣೆಯಲ್ಲಿ ನನ್ನ ಮಗ ಗಣೇಶ್ ಅವರಿಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಇರಲಿ ಎಂದರು.


ಶಾಸಕ ಸಂಗಮೇಶ್ ಅವರ ಪುತ್ರ ಗಣೇಶ್ ಅವರು ಪ್ರಸ್ತುತ ಭದ್ರಾವತಿ ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಯನ್ನ‌ ಶಾಸಕರು ಹಲವುಬಾರಿ ಹೇಳಿದ್ದಾರೆ. ನಿನ್ನೆ ಬಹಿರಂಗವಾಗಿ ಹೇಳಿರುವ ಹೇಳಿಕೆ ವೀಡಿಯೋವನ್ನ ಬಿಎಸ್ ಗಣೇಶ್ ಸಂಗಮೇಶ್ವರ ಅಭಿಮಾನಿ ಬಳಗದ ಪೇಜ್ ನಲ್ಲಿ ವೈರಲ್ ಮಾಡಲಾಗಿದೆ. 

MLA Sangamesh publicly appeals for blessings for his son Ganesh in the next election

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close