ಬಜಾರ್ ನ ಬೀದಿಬದಿ ವ್ಯಾಪಾರಿಗಳಿಗೆ ಎರಡು ದಿನ ಗಡುವು-Two-day deadline for street vendors in the bazaar

 SUDDILIVE || SHIVAMOGGA

ಬಜಾರ್ ನ ಬೀದಿಬದಿ ವ್ಯಾಪಾರಿಗಳಿಗೆ ಎರಡು ದಿನ ಗಡುವು-Two-day deadline for street vendors in the bazaar

Street, vendor

ಶಿವಮೊಗ್ಗದ ಸಂಚಾರಿ ವೃತ್ತ ಕಚೇರಿಯಲ್ಲಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಗಾಂಧಿಬಜಾರ್ ಫುಟ್ ಪಾತ್‌ ವ್ಯಾಪಾರಿಗಳ ಜೊತೆ ಮಹತ್ವದ ಸಭೆ ನಡೆದಿದೆ ಎರಡು ದಿನಗಳ ಒಳಗೆ ರಸ್ತೆ ಒತ್ತುವರಿ ತೆರವಿಗೆ ಸಿಪಿಐ ಗಡುವು ಸೂಚಿಸಿದ್ದಾರೆ. 

ಗಾಂಧಿ ಬಜಾರ್ ಮಸೀದಿ ಪಕ್ಕದ ಎಂಕೆಕೆ ರಸ್ತೆಯಲ್ಲಿ ಹೋಗುವ ಜಾಗವು ರಸ್ತೆ ಒತ್ತುವರಿಯಾಗಿತ್ತು‌. ಈ ಮೊದಲು ಒತ್ತುವರಿಗೆ ಸೂಚನೆ ನೀಡಿದರು ಸಾಲು ಸಾಲು ಹಬ್ಬಗಳ ಹಿನ್ನಲೆಯಲ್ಲಿ ಈ ಕಾರ್ಯಚರಣೆ ಆರಂಭಗೊಂಡು ತಣ್ಣಗಾಗಿತ್ತು. 

ಸರಿಯಾದ ಸಮಯದಲ್ಲಿ ಮತ್ತೆ ಈ ಕಾರ್ಯಾಚರಣೆ ಆರಂಭವಾಗಿದೆ. ಈ ರಸ್ತೆಯ ಒಳಗೆ ಬರುವ ತರಕಾರಿ ಮಾರುಕಟ್ಟೆ ಮತ್ತು ಇಲ್ಲಿ ಗುರುತಿಸಿ ಮಾರ್ಕ್ ಮಾಡಲಾದ ಗೆರೆಯ ಒಳಗೆ ತರಕಾರಿಯವರು ಮಾರಾಟಕ್ಕೆ ಅವಕಾಶ ಮಾಡುವುದರಿಂದ ಒತ್ತುವರಿ ತೆರವಿಗೆ ಎರಡು ದಿನಗಳ ವರೆಗೆ ಗಡುವು ಸಹ ನೀಡಲಾಗಿದೆ. 

ಮತ್ತೆ ಕಾರ್ಯಾಚರಣೆ ನಡೆಯಲಿದೆ ಶಿವಪ್ಪ ನಾಯಕನ ವೃತ್ತದಿಂದ ವೀರಶೈವ ಕಲ್ಯಾಣ ಮಂದಿರದ ರಸ್ತೆ

ಗಾಂಧಿ ಬಜಾರ್, ವೀರಶೈವ ಕಲ್ಯಾಣ ಮಂದಿರದ ರಸ್ತೆಯಲ್ಲಿ ಈ ಹಿಂದೆ ಕಾರ್ಯಾಚರಣೆ ನಡೆದರೂ ಹಬ್ಬದ ಕಾರಣದಿಂದ ಇಲ್ಲಿ ವ್ಯಾಪಾರಸ್ಥರು ಮತ್ತೆ ರಸ್ತೆ ಒತ್ತುವರಿ ಮಾಡಿ ವ್ಯಾಪಾರಕ್ಕೆ ಇಳಿದಿದ್ದಾರೆ. ಇಲ್ಲೂ ಸಹ ಒತ್ತುವರಿ ತೆರವಾಗಬೇಕಿದೆ.‌ ರಸ್ತೆ ಸಂಚಾರ ಸುಗಮವಾಗವೇಕಿದೆ. 

ರೈಲ್ವೆ ನಿಲ್ದಾಣದಲ್ಲಿ ಸುಗಮವಾಗಿ ನಡೆಯುತ್ತಿದೆ ಪ್ರೀಪೇಯ್ಡ್ ಆಟೋ

ಶಿವಮೊಗ್ಗದಲ್ಲಿ ಗಗನ ಕುಸುಮವಾಗಿದ್ದ ರೈಲ್ವೆ ಪ್ರೀಪೇಯ್ಡ್ ಆಟೋ ಈಗ ಸಲೀಸಾಗಿದೆ. ಇನ್ನೂ ಟ್ರಯಲ್ ಆಗಿ ನಡೆಯುತ್ತಿರುವ ಟ್ರಯಲ್ ಪ್ರೀಪೇಯ್ಡ್ ಆಟೋದ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ದೇವರಾಜ್ ಈ ಪ್ರೀಪೇಯ್ಡ್ ಆಟೋ ಇನ್ನೊಂದಿಷ್ಟು ದಿನ ನಡೆಯಲಿದೆ. ತದನಂತರ ಬಸ್ ನಿಲ್ದಾಣದಲ್ಲಿ ಆರಂಭವಾಗಲಿದೆ ಎಂದಿದ್ದಾರೆ. 

ಆಟೋದವರ ಲಾಭಿಯಿಂದಾಗಿ ಹಾಗೂ ದೇವರಾಜ್ ಅವರು ಸಿಪಿಐ ಆಗಿ ಬರುವ ತನಕ ಪ್ರೀಪೇಯ್ಡ್ ಆಟೋ ಮತ್ತು ಕಡ್ಡಾಯ ಮೀಟರ್ ನೆನೆಗುದಿಗೆ ಬಿದ್ದಿತ್ತು. ಆದರೆ ಹಬ್ಬದ ವೇಳೆ ರೈಲ್ವೆ ನಿಲ್ದಾಣದ ಬಳಿ ಪ್ರೀಪೇಯ್ಡ್ ಆಟೋ ಸುಗಮವಾಗಿ ನಡೆದಿದೆ. ರೈಲ್ವೆ ನಿಕ್ದಾಣದಲ್ಲಿ ಪೊಲೀಸರ ಖಡಕ್ ಅನೌನ್ಸ್ ಮೆಂಟ್ ಆಟೋ ಹತ್ತಲು ಶಿಸ್ತು ಬದ್ದ ಸಾಲುಗಳು ಸುಗಮವಾಗಿ ನಡೆಯುತ್ತಿದೆ. 

Two-day deadline for street vendors in the bazaar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close