SUDDILIVE || SHIVAMOGGA
ಮಧು vs ಆರಗ ಜಟಾಪಟಿ-Madhu vs Aaraga Jatapati
ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ vs ಹಾಲಿ ಶಿಕ್ಷಣ ಸಚಿವ ಜಟಾಪಟಿ ನಡೆದಿದೆ. ನನ್ನ ಅನುಭವಕ್ಕೆ ಆರಗ ಜ್ಞಾನೇಂದ್ರ ಬಚ್ಚ ಎಂದು ಸಚಿವ ಮಧುಬಂಗಾರಪ್ಪ ಹೇಳಿರುವುದು ಗಮನ ಸೆಳೆದಿದೆ.
ರಾಜ್ಯದಲ್ಲಿ 420 ಎಂದರೇ ಅದು ಆರಗ ಜ್ಞಾನೇಂದ್ರ ಎಂದು ಮಧುಬಂಗಾರಪ್ಪ ತಿಳಿಸಿದರು. ನಿನ್ನ ತೀರ್ಥಹಳ್ಳಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಜಟಾಪಟಿ ನಡೆದಿದೆ. ಶಿಷ್ಠಾಚಾರ ವಿಚಾರದಲ್ಲಿ ಇಬ್ಬರ ನಡಯವೆ ವಾಗ್ವಾದ ನಡೆದಿದೆ. ಮಧ್ಯಾಹ ಕಾಂಗ್ರೇಸ್ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರಗೆ ಬಚ್ಚ, 420 ಎಂದು ಮಧುಬಂಗಾರಪ್ಪ ಆರ್ಭಟಿಸಿದ್ದಾರೆ.
ಗ್ಯಾರೆಂಟಿ ವಿಚಾರವಾಗಿ ಆರಗ 420 ಎಂದ ಸಚಿವ ಮಧು ಬಂಗಾರಪ್ಪ ಸಂಜೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಇಲ್ಲೋಬ್ಬ ಇದ್ದಾನೆ ಉಸ್ತುವಾರಿ ಸಚಿವ ಒಂದು ಟೀಚರ್ ಕೊಡುವ ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ.
ನಾನೂ ನೇರವಾಗಿ ಉತ್ತರ ಕಡುವವನು.ಅವರು ವಯಸ್ಸಿನಲ್ಲಿ ದೊಡ್ಡವರೇ ಇರಬಹುದು. ಆದರೆ ನನಗಿಂತ ಅನುಭವದಲ್ಲಿ ಬಚ್ಚಾನೇ ಅವರು. ನಾನೂ ಬಂಗಾರಪ್ಪ ತರ ಮುಖ ಮೂತಿ ನೋಡುವುದಿಲ್ಲ ತಿರುಗಿಸಿಕೊಡುವವನು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಧುಬಂಗಾರಪ್ಪ ಮಾತಿಗೆ ಮಾತಿನಲ್ಲೇ ತಿವಿದ ಆರಗ ಜ್ಞಾನೇಂದ್ರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಪರೋಕ್ಷವಾಗಿ ಮಧುಬಂಗಾರಪ್ಪಗೆ ಟಾಂಟ್ ನೀಡಿದ ಆರಗ
ನಾನೂ ಯಾರ ಬಗ್ಗೆನೂ ದೂರುವುದಿಲ್ಲ. ನಾನೂ 5ಬಾರಿ ಗೆದ್ದು 5ಬಾರಿ ಸೋತಿದ್ದೇನೆ. ನನಗೆ ಒಂದು ಮೆಚ್ಯುರಿಟಿ ಲೆವೆಲ್ ಬಂದಿದೆ. ನಾವು ಬಹಳ ಮೇಲ್ಮಟ್ಟದಲ್ಲಿ ಇರಬೇಕಾಗುತ್ತದೆ. ಯಾರಾದರೂ ರಾಜಕೀಯ ಕನ್ನಡಕದಲ್ಲಿ ನೋಡಿದರೇ ಹಾಗೆ ಕಾಣಬಹುದೇನೋ.. ಸಾರ್ವಜನಿಕ ಜೀವನವನ್ನು ನಾನೂ ಬಹಳ ಗಂಭೀರವಾಗಿ ತೆಗೆದು ಕೊಂಡಿದ್ದೇನೆ.
ನಮಗೆ ಕೊಡುವು ಮರ್ಯಾದೆ ಕೊಟ್ಟು ತೆಗೆದುಕೊಳ್ಳಬೇಕು. ನಾನೂ ಮಂತ್ರಿಯಾದವು ಅವರಿಗೆ ಸ್ವಾಗತ ಮಾಡಿದ್ದೇನೆ. ಜನರ ಕೆಲಸವನ್ನು ಒಟ್ಟಾಗಿ ಮಾಡಬೇಕು ಎಂದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Madhu vs Aaraga Jatapati
