ಆಟೋದಲ್ಲಿ ಬಂದ ಬಾಳೆಗೊನೆಯಲ್ಲೂ ಗಾಂಜಾ ಪತ್ತೆ- Marijuana found in banana brought in by auto

SUDDILIVE || SHIVAMOGGA

ಆಟೋದಲ್ಲಿ ಬಂದ ಬಾಳೆಗೊನೆಯಲ್ಲೂ ಗಾಂಜಾ ಪತ್ತೆ- Marijuana found in banana brought in by auto   

Banana, Marijuana

ಕಾರಾಗೃಹದ ಸುತ್ತಮತ್ತಲು ಗಾಂಜಾ ಹೊಗೆ ಆಡುತ್ತಿದೆ. ಜೈಇನ ದ್ವಿತೀಯ ದರ್ಜೆಯ ಸಿಬ್ಬಂದಿಯೇ ಗಾಂಜಾ ಸ್ಮಗ್ಲರ್ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ  ಆಟೋದಲ್ಲಿ ಬಂದ ಬಾಳೆಗೊನೆಯಲ್ಲಿಯೂ ಗಾಂಜಾ ಸಾಗಿಸುವ ಕೆಲಸ ಪತ್ತೆಯಾಗಿದೆ. 

ದಿನಾಂಕ:19/11/2025 ರಂದು ಮದ್ಯಾಹ್ನ 02:15 ಗಂಟೆ ಸಮಯಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಟೋದಲ್ಲಿ 05 ಬಾಳೆಗೊನೆಗಳನ್ನು ಆಟೋ ಚಾಲಕನು ಕಾರಾಗೃಹದ ಮುಂಭಾಗಕ್ಕೆ ತಂದು ಕ್ಯಾಂಟೀನ್ ರವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ಗೇಟಿನ ಹತ್ತಿರ ಇಟ್ಟು ತೆರಳಿರುತ್ತಾನೆ. 

ಕಾರಾಗೃಹದ ಮುಖ್ಯಧಾರದ ಉಸ್ತುವಾರಿಯಲ್ಲಿದ ಕೆ.ಎಸ್.ಐ.ಎಸ್.ಎಫ್ ಇನ್ಸ್ ಪೆಕ್ಟರ್ ಆದ ಜಗದೀಶ್ ರವರ ನೇತೃತ್ವದಲ್ಲಿ ಅಧಿಕಾರಿಗಳಾದ ಪ್ರೋ. ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಪ್ರವೀಣ ಮತ್ತು ನಿರೂಪಬಾಯಿ ರವರು ಸದರಿ ಬಾಳೆಗೊನೆಗಳನ್ನು ಚೆಕ್ ಮಾಡಿದಾಗ ಬಾಳೆಗೊನೆಯ ದಿಂಡನ್ನು ಕೊರೆದು ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್ ನಲ್ಲಿ ಸುತ್ತಿ ಇಟ್ಟಿರುವುದನ್ನು ಪತ್ತೆ ಹಚ್ಚಿರುತ್ತಾರೆ.

ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಶಿವಮೊಗ್ಗದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ರಂಗನಾಥ್ ರವರ ದೂರಿನ ಮೇರೆಗೆ ಮೊಕದ್ದಮೆ ಸಂಖ್ಯೆ 694/2025 ಕಲಂ 42 ಅಮೆಂಡಮೆಂಟ್ ಆಫ್ ಕರ್ನಾಟಕ ಪ್ರಿಸನ್ ಆಕ್ಟ್ &  20(b) (II) (A) NDPS ಆಕ್ಟ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ 123 ಗ್ರಾಂ ಗಾಂಜಾ ಮತ್ತು ಒಟ್ಟು 40 ಸಿಗರೇಟ್ ಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ. ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರೆದಿರುತ್ತದೆ.

Marijuana found in banana leaves brought in by auto 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close