ಸಿಎಂ ಬದಲಾವಣೆ ಸಾರ್ವಜನಿಕರ ಚರ್ಚೆ ಆಗಬಾರದಿತ್ತು-ಸಂಸದ ಬೇಸರ-CM change should not have been a public debate - MP upset

 SUDDILIVE || SHIVAMOGGA

ಸಿಎಂ ಬದಲಾವಣೆ ಸಾರ್ವಜನಿಕರ ಚರ್ಚೆ ಆಗಬಾರದಿತ್ತು-ಸಂಸದ ಬೇಸರ-CM change should not have been a public debate - MP upset

CM, change


ಸಿಎಂ ಬದಲಾವಣೆ ರಾಜಕಾರಣ ರಾಜ್ಯದಲ್ಲಿ ಜೋರಾಗಿದೆ. ಸಂಕ್ರಾಂತಿಯ ನಂತರ ಬದಲಾಗುವ ನಿರೀಕ್ಷೆಯಿದೆ ಎಂದು ಶಿವಮೊಗ್ಗದ ಸಂಸದರು ಹೇಳಿದ್ದಾರೆ.  

ಮಾಧ್ಮಗಳ ಜೊತೆ ಮಾತನಾಡಿದ ಅವರು, ಸಿಎಂ ಬದಲಾವಣೆಯ ಕುರಿತು ನಾನು ಸಹ ಪತ್ರಿಕೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಹಾಗಾಗಿ ಬದಲಾವಣೆ ಏನಿದ್ದರೂ ಸಂಕ್ರಾಂತಿಯ ನಂತರ ಇರಬಹುದು ಎಂಬ ನಿರೀಕ್ಷೆಯಿದೆ ಎಂದರು. 

ಸಾರ್ವಜನಿಕರಿಗೆ ಸಂದೇಶ ಕೊಡಬೇಕಿದೆ. ಸಿಎಂ ಬದಲಾವಣೆಯ ಚರ್ಚೆಯಲ್ಲಿ ರಾಜ್ಯದ ಅಭಿವೃದ್ಧಿ ಹಿಂದೆ ಉಳಿದಿದೆ. ಮೆಕ್ಕೆ ಜೋಳ. ಭತ್ತದ ಖರೀದಿ ಕೇಂದ್ರ,ಆರಂಭವಾಗಿಲ್ಲ. ಏನೇ ಬದಲಾವಣೆ ಮಾಡಿದರು ನಾಲ್ಕು ಗೋಡೆ ಮಧ್ಯ ನಡೆಯಬೇಕಾಗಿದ್ದು ಸಾರ್ವಜನಿಕ ಚರ್ಚೆ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದರು. 

ನಗರದಲ್ಲಿ ಗಾಂಜಾ ಹೆಚ್ಚಳವಾಗಿದೆ. ಶಿವಮೊಗ್ಗ ಜೈಲಿನಲ್ಲಿ ಗಾಂಜಾ ಪತ್ತೆಯಾಗಿದೆ. ರಾಜ್ಯದ ಗೃಹಸಚಿವರು ಗಾಂಜಾ ತಡೆಯಲು ವಿಫಲರಾಗಿದ್ದಾರೆ.  ಪರಪ್ಪನ ಅಗ್ರಹಾರದಲ್ಲೇ ಗಾಂಜಾ ಪತ್ತೆಯಾಗಿದೆ. ಇದರ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವೆ. ಬಿಗಿಯಾದ ಕ್ರಮ ಆಗಬೇಕಿದೆ ಎಂದರು. 

ಗೃಹ ಸಚಿವರು ಸಹಜವಾಗಿ ತನಿಖೆ ಮಾಡ್ತೀನಿ ಎನ್ನುತ್ತಾರೆ. ನೀಡೋಣ ಎಂದ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ವಿಜೇಂದ್ರರ ಬದಲಾವಣೆಯಾಗಲಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜೇಂದ್ರ ಮುಂದು ವರೆಯುತ್ತಾರೆ. ಅದರಲ್ಲಿ ಯಾವುದೆ ಗೊಂದಲವಿಲ್ಲ ಎಂದು ಸ್ಪಷ್ಡಪಡಿಸಿದರು.

CM change should not have been a public debate - MP upset

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close