ಭಗವದ್ಗೀತೆ ಸರ್ವಸ್ಪರ್ಷಿಯಾಗಲಿ-ಸೋಂದ ಸ್ವರ್ಣವಲ್ಲಿ ಶ್ರೀಗಳು-May the Bhagavad Gita reach everyone - Swarnavalli sonda sri

 SHIVAMOGGA || SHIVAMOGGA

ಭಗವದ್ಗೀತೆ ಸರ್ವಸ್ಪರ್ಷಿಯಾಗಲಿ-ಸೋಂದ ಸ್ವರ್ಣವಲ್ಲಿ ಶ್ರೀಗಳು-May the Bhagavad Gita reach everyone - Swarnavalli Sonda Sri

Bhagavadgitha, sonda

ಮಾನಸಿಕ ಖಿನ್ನತೆ ಮತ್ತು  ಒತ್ತಡದಿಂದ ಅನಾರೋಗ್ಯಗಳು ಹೆಚ್ಚಾಗಿದೆ. ಇದನ್ನ ನಿವಾರಿಸಲು ಭಗವದ್ಗೀತ ಔಷಧವಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಗಳು ತಿಳಿಸಿದರು.

ನಗರದ ಫ್ರೀಡಂ ಪಾರ್ಕ್ ನಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಶಿರಸಿಯ ಸರ್ವೇಜೇಂದ್ರ ಸರಸ್ವತಿ ಪ್ರತಿಷ್ಠಾನ, ಶಿವಮೊಗ್ಗದ ಸ್ವರ್ಣರಶ್ಮೀ ಟ್ರಸ್ಟ್ ವತಿಯಿಂದ ಭಗವದ್ಗೀತ ಅಭಿಯಾನ 2025 ರ ರಾಜ್ಯಮಟ್ಟದ ಮಹಾಸಮರ್ಪಣೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆಯಿಂದ ಅಪರಾಧ ನಿಯಂತ್ರಣ ಕಾರ್ಯಕ್ರಮ ನಡೆದಿದೆ. ಕಮ್ಯೂನಲ್ ಹಾರ್ಮನಿ ನಿಯಂತ್ರಣವೂ ಸಹ ಭಗವದ್ಗೀತ ಸಹಕರವಾಗಲಿದೆ. ಇಂದಿನ ದಿನಗಳಲ್ಲಿ ವೈದ್ಯರೂ ಸಹ ಭಯೋತ್ಪಾದಕತೆಗೆ ಸೆಳೆಯುತ್ತಿದ್ದಾರೆ. ಇದರ ನಿವಾರಣೆ ಭಗವದ್ಗೀತೆ ಪಠಣದಲ್ಲಿದೆ.  ನಾಲ್ಕು ಉದ್ದೇಶದಲ್ಲಿ ಅಭಿಯಾನ ನಡೆದಿದೆ ಎಂದರು. 

2700 ಶ್ಲೋಕ ಕೇಂದ್ರಗಳು ರಾಜ್ಯದಲ್ಲಿದ್ದರೆ 180 ಕೇಂದ್ರ ಶಿವಮೊಗ್ಗದಲ್ಲಿದೆ. 60 ಸಾವಿರ ಜನ ಭಗವದ್ಗೀತೆ ಪಠಿಸಿದ್ದಾರೆ. ದೀಪ ಹಚ್ಚುವುದರಿಂದ ಅಗ್ನಿಅವಘಡ ಸಂಬವಿಸಿಲ್ಲ. ಪಟಾಕಿಯಿಂದ ಸಂಭವಿಸುತ್ತದೆ. ಜ್ಞಾನದ ನಿವಾರಣೆಗೆ ದೀಪ ಹಚ್ಚಬೇಕು. ಸ್ಪೋಟಿಸುವ ನಿವಾರಣೆ ಜ್ಞಾನಾರ್ಜನೆಯ ಮೂಲಕ ನಡೆಯಬೇಕಿದೆ ಎಂದರು. 

ಜ್ಞಾನವನ್ನ ಭಕ್ತಿ ಮತ್ತು ಯೋಗದಿಂದ ನಿರ್ವಹಿಸಬೇಕು. 18 ನೇ ವರ್ಷದ ಅಭಿಯಾನದಲ್ಲಿ ಖೈದಿಗಳಿಗೂ ಭಗವದ್ಗೀತೆಯ ಪಾಠವನ್ನ ನೀಡಲಾಗಿದೆ. ಭಗವದ್ಗೀತೆ ಸರ್ವಸ್ಪರ್ಶಿಯಾಗಲಿ ಎಂದು ಸ್ವಾಮೀಜಿ ಆಶಿಸಿದರು. 

ಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಉದ್ಘಾಟಿಸಿದರು, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ ವೈ, ಮಾಜಿ ಡಿಸಿಎಂ ಈಶ್ವರಪ್ಪ, ಹರಿಹರಪುರದ ಶ್ರೀಗಳಾ್ ಸಚ್ಚದಾನಂದ ಶ್ರೀಗಳು, ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿಯ ನಾದಮಯಾನಂದನಾಥ ಮಹಾಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. 

May the Bhagavad Gita reach everyone - Swarnavalli Sonda Sri

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close