SUDDILIVE || THIRTHAHALLI
ಪತ್ನಿಗೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದವನಿಗೆ 10 ವರ್ಷ ಶಿಕ್ಷೆ-Man sentenced to 10 years for trying to kill wife by pouring petrol on her
ಪತ್ನಿ ಕೆಲಸಕ್ಕೆ ಹೋಗಲಿಲ್ಲವೆಂದು ಆರೋಪಿಸಿ ಪೆಟ್ರೋಲ್ ಹಾಕಿ ಸುಡಲು ಯತ್ನಿಸಿದ್ದ ಪತಿಗೆ ನ್ಯಾಯಾಲಯವು 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 15,000/- ರೂ ದಂಡವಿಧಿಸಿ ತೀರ್ಪುನೀಡಿದೆ.
ಮೂವಳ್ಳಿ ಗ್ರಾಮ ತೀರ್ಥಹಳ್ಳಿಯ ವಾಸಿ ಶ್ರೀಮತಿ ಸುಧಾ ರವರಿಗೆ ಆಕೆಯ ಪತಿ ಆಲ್ಬರ್ಟ್ ನು ಆಕೆಯು ಕೆಲಸಕ್ಕೆ ಹೋಗಿಲ್ಲವೆಂದು ಪೆಟ್ರೋಲ್ ಹಾಕಿ ಸುಟ್ಟು ಸಾಯಿಸಲು ಪ್ರಯತ್ನಿಸಿದ್ದು, ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ, ಆಗಿನ ತನಿಖಾಧಿಕಾರಿಗಳಾದ ಶಿವಾನಂದ ಧರಣ್ಯನವರ್ ಪಿಎಸ್ಐ ರವರು ತನಿಖೆ ಕೈಗೊಂಡು, ಆರೋಪಿ ವಿರುದ್ಧ ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಮಮತ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಆರೋಪಿ ಆಲ್ಬರ್ಟ್, 45 ವರ್ಷ, ಮೂವಳ್ಳಿ ಗ್ರಾಮ ತೀರ್ಥಹಳ್ಳಿ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲಾರವರು ಆರೋಪಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 15,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
Man sentenced to 10 years for trying to kill wife by pouring petrol on her
