ad

ಕುಮಾರ ಸ್ವಾಮಿ, ಕಬ್ಬುಬೆಳೆಗಾರರ ಪ್ರತಿಭಟನೆ ಹಾಗೂ ಸಿಎಂ ಬದಲಾವಣೆ ಕುರಿತು ಸಚಿವ ಚಲುವರಾಯ ಸ್ವಾಮಿ ಹೇಳಿದ್ದೇನು?Minister Chaluvaraiya Swamy say about Kumaraswamy, the sugarcane farmers' protest and the change of CM

 SUDDILIVE || SHIVAMOGGA

ಕುಮಾರ ಸ್ವಾಮಿ, ಕಬ್ಬುಬೆಳೆಗಾರರ ಪ್ರತಿಭಟನೆ ಹಾಗೂ ಸಿಎಂ ಬದಲಾವಣೆ ಕುರಿತು ಸಚಿವ ಚಲುವರಾಯ ಸ್ವಾಮಿ ಹೇಳಿದ್ದೇನು? What did Minister Chaluvaraiya Swamy say about Kumaraswamy, the sugarcane farmers' protest and the change of CM?

Chaluvaraiyaswamy, minister


ಕೇಂದ್ರ ಸಚಿವ ಕುಮಾರ ಸ್ವಾಮಿ ವಿರುದ್ಧ, ಕಬ್ಬುಬೆಳೆಗಾರರ ಪ್ರತಿಭಟನೆ ಕುರಿತು ಹಾಗೂ ಸಿಎಂ‌ಬದಲಾವಣೆ ಕುರಿತು ಸಮಗ್ರವಾಗಿ ಶಿವಮೊಗ್ಗದಲ್ಲಿ ಕೃಷಿ ಸಚಿವ ಚಲುವರಾಯ ಸ್ವಾಮಿ ಮಾತನಾಡಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿ, ಕೇಂದ್ರ ಸಚಿವ ಕುಮರಸ್ವಾಮಿ ಅವರು ಮುಂದಿನ ರಾಜ್ಯ ಸರ್ಕಾರ ನಮ್ಮದೆ ಎಂದು ಹೇಳುತ್ತಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕುಮಾರ ಸ್ವಾಮಿ ಅವರು ಹೇಳೋದೆಲ್ಲ ನಡೆಯಲ್ಲ. ಅವರು 2023 ರಲ್ಲಿ ಏಕಾಂಗಿಯಾಗಿ ಜೆಡಿಎಸ್ ಅಧಿಕಾರಕ್ಕೆ ಬಾರದಿದ್ದರೆ ಪಕ್ಷ ವಿಸರ್ಜಿಸುವುದಾಗಿ ಹೇಳಿದ್ದರು. ಮಾಡುದ್ರಾ? 

ಆ ಪಕ್ಷ ಯಾವ ಚುನಾವಣೆಯಲ್ಲೂ 55 ರ ಮೇಲೆ ಸ್ಥಾನ ಗೆಲ್ಲಲಿಲ್ಲ. ಅವರ ಹೇಳಿಕೆಯನ್ನ ನೀವು ನಂಬ್ತೀರ ಎಂದರೆ ನಗಬೇಕೋ ಬಿಡಬೇಕೋಗೊತ್ತಿಲ್ಲ ಎಂದು ದೂರಿದರು. ರಾಜಣ್ಣನವರು ಮತ್ತೆ ಸಚಿವ ಸ್ಥಾನಕ್ಕೆ ಬರುತ್ತಾರಾ ಎಂಬ ಶಂಕೆ ಹುಟ್ಟಲಾರಂಭಿಸಿದೆ ಅವರ ಮನೆಯಲ್ಲಿ ಭೋಜನಕೂಟ ನಡೆಯಲಿದೆ ಎಂದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು. ಅದು ಸಿಎಂ ಮತ್ತು ಪಕ್ಷದ ಹೈಕಮಾಂಡ್ ಗೆ  ಬಿಟ್ಟ ವಿಷಯವಾಗಿದೆ ಎಂದರು. 

ಬೆಳಗಾವಿಯ ಕರ್ಲಾಪುರದಲ್ಲಿ ಕಬ್ಬುಬೆಳಗಾರರ ಬೆಳೆನಿಗದಿಗಾಗಿ ಪ್ರತೊಭಟನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಐದು ಮಂತ್ರಿಗಳು ಮತ್ತು ರಾಜ್ಯ ಸಚಿವರು ಕುಳುತು ಬಗೆಹರಿಸಬೇಕು. ಇದಮ್ನ‌ಬಿಟ್ಟು ಸುಳ್ಳು ಹೇಳಿಕೊಂಡು ಕೇಂದ್ರ ಸಚಿವರು ಮತ್ತು ಎಂಪಿಗಳು ಓಡಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ದೂರಿದ್ದಾರೆ. 

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರದ ಜವಬ್ದಾರಿಯಿದೆ. ಸಚಿವರು ರೈತರ ಜೊತೆ ಮಾತನಾಡಿದ್ದಾರೆ. ಸಿಎಂ ಸಹ ರೈತರ ಜೊತೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಎಲ್ಲಾ ದಾಖಲಾತಿಗಳನ್ನ‌ ಕೇಂದ್ರಕ್ಕೆ ರವಾನಿಸಲಾಗಿದೆ ಎಂಎಸ್ಪಿ ಮತ್ತು ಎಫ್ಪಿಎಆರ್ ನ್ನ ಕೇಂದ್ರ ನಿಗದಿ ಪಡಿಸಬೇಕಿದೆ. 

ಮಾಹಾರಾಷ್ಟ್ರದಲ್ಪಿ ಬೆಳೆಹಾನಿಗೆ ಹೆಚ್ಚಿನ ದರ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿಲ್ಲ. ತಾರತಮ್ಯ ಮಾಡಲಾಗಿದೆ. ರಾಜ್ಯದ 27 ಜನ ಎಂಪಿಗಳು, 19 ಕೇಂದ್ರ ಸಚಿವರು ಇದರ ಬಗ್ಗೆ ಮಾತನಾಡಬೇಕು. ರೈತರ ಪರ ಇರುವ ರಾಜ್ಯ ಸರ್ಕಾರ ಬೆಳೆಹಾನಿ ಮಳೆಹಾನಿಗೆ ಸಮಗ್ರವಾಗಿ ಹಣ ನೀಡಲಾಗಿದೆ ಎಂದು ಹೇಳಿದ ಅವರು, ಕಬ್ಬು ಬೆಳೆಗಾರರ ಶಾಶ್ವತ ಪರಿಹಾರವನ್ನ ಕೇಂದ್ರ ಸರ್ಕಾರ ಮಾಡಬೇಕು. ಅವರು ಮಾಡಿದಾಗ ನಮಗೆ ಮಾದರಿಯಾಗಿ ಮಾಡಲು ಅನಿಕೂಲವಾಗಲಿದೆ ಎಂದರು. 

ತಾತ್ಕಾಲಿಕವಾಗಿ ಪರಿಹರಿಸಿದರೆ ಅದು ಸಮಾಧಾನವಾಗಲ್ಲ. ಶಾಶ್ವತವಾಗಿ ಕೇಂದ್ರವೇ ಎಫಾರ್ ಪಿ ದರ ನಿಗದಿ ವೇಳೆ ನಡೆಯಬೇಕು. ಸಿಎಂ ದು ಉತ್ತಮ ನಿರ್ಣಯ ತೆಗೆದುಕೊಳ್ಳಿದ್ದಾರೆ. ಅರಣ್ಯ ಪದವಿ ವಿದ್ಯಾರ್ಥಿಗಳು ಅರಣ್ಯ ಸರ್ಕಾರಿ ಹುದ್ದೆಗೆ ಅವರನ್ನೇ ತೆಗೆದುಕೊಳ್ಳುವಂತೆ ಅವರು ಪ್ರತಿಭಟಿಸುತ್ತಿದ್ದಾರೆ. ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಿದ್ದಾರೆ ಎಂದು ಭರವಸೆ ಮೂಡಿಸಿದರು. 

ಯಾವ ಕ್ರಾಂತಿಯೂ ನಡೆಯೊಲ್ಲ. ಏನೇ ಬದಲಾವಣೆ ಮತ್ತು ಸಚಿವ ಸ್ಥಾನ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದ್ದಾರೆ. ಕಾಂಗ್ರೆಸ್ ವರಿಷ್ಠರಿಂದ ಬಲಿಷ್ಠವಾಗಿದೆ. ನಮ್ಮ ಸಿಎಂ ಮತ್ತು ಡಿಸಿಎಂ ವರಿಷ್ಠರ ಹೇಳಿಕೆಯನ್ನ ನಡೆಸುತ್ತಿದ್ದಾರೆ. ನವೆಂಬರ್ ಕ್ರಾಂತಿಯೂ ಇಲ್ಲ ಏನೂ ಇಲ್ಲ. ಆದರೆ ಏನು ನಡೆಯುತ್ತೆ ಎಂಬುದನ್ನ ಚರ್ಚೆ ಮಾಡಲಾಗದು ಎಂಬುದನ್ನ ಹೇಳುವ ಮೂಲಕ ಸಿಎಂ ಬದಲಾವಣೆ ಕುರಿತು ಕುತೂಹಲ ಮೂಡಿಸಿದ್ದಾರೆ. 

Minister Chaluvaraiya Swamy say about Kumaraswamy, the sugarcane farmers' protest and the change of CM

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close