SUDDILIVE || SHIVAMOGGA
ಎಫ್ ಪಿ ಆರ್ ಬಗ್ಗೆ ಸಿಎಂ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದ ಭಂಡಾರಿ-Bhandari says no information about CM writing letter regarding FPR
ಬಿಜೆಪಿರವರು ಯಾವತ್ತು ರಾಷ್ಟ್ರ ಗೀತೆ, ಸಂವಿಧಾನವನ್ನು ಒಪ್ಪಿಯೇ ಇಲ್ಲ. ಇವರಿಗೆ ಜನಗಣಮನ, ವಂದೇ ಮಾತರಂ ಬಗ್ಗೆ ಇವರಿಗೆ ಗೂತ್ತಿಲ್ಲ.ಇವರೇನು ಸ್ವಾತಂತ್ರಕ್ಕೆ ಹೋರಾಟ ಮಾಡಿದವರೇನು ಎಂದು ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಭಂಡಾರಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ನ ಲಕ್ಷಾಂತರ ಜನ ಬಲಿದಾನ ಮಾಡಿದ್ದಾರೆ. ಬಿಜೆಪಿರವರು ಹಿಂದಿನಿಂದಲೂ ಸಹ ಸಂವಿಧಾನವನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಒಬ್ಬರು ಸ್ವಾತಂತ್ರ್ಯಕ್ಕೆ ಹೋರಾಡಿದವರಿಲ್ಲ ಎಂದು ದೂರಿದರು.
ಅಧಿಕಾರ ಬಯಸೋದು ತಪ್ಪಲ್ಲ. ಅದೇರೀತಿ ಡಿಕೆಶಿ ಸಿಎಂ ಸ್ಥಾನ ಬೇಕು ಎಂಬುದು ಸರಿಯಲ್ಲ. ಆದರೆ ಪಕ್ಷದ ಅನೇಕ ಕಾರ್ಯಕರ್ತರಿಗೆ ಶೇ 50 ರಷ್ಟು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನಿಗಮ ಮಂಡಳಿ ಸ್ಥಾನ ಮಾನ ನೀಡಲಾಗುವುದು. ಯಾರಿಗೆ ಯಾವುದನ್ನು ನೀಡಬೇಕೆಂದು ಪಕ್ಷದ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ನಮ್ಮ ಪಕ್ಷದಲ್ಲಿ ನವೆಂಬರ್ ಕ್ರಾಂತಿ ಎಂದು ಸುಮ್ಮನೆ ಹೇಳಲಾಗುತ್ತಿದೆ. ಯಾವುದೇ ಕ್ರಾಂತಿ ಇಲ್ಲ.ನಮ್ಮ ಪಕ್ಷದಲ್ಲಿ ಯಾರು ಸಿಎಂ ಆಗಬೇಕೆಂದು ಪಕ್ಷದ ಹೈ ಕಮಾಂಡ್ ತೀಮಾನ ಮಾಡುತ್ತದೆ ಎಂದರು.
ನಮ್ಮ ಪಕ್ಷದ ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಬಿಜೆಪಿರವರು, ಅವರ ಪಕ್ಷ ಅಧಿಕಾರ ಇದ್ದಾಗ ಮೂರು ಜನ ಸಿಎಂ ಆಗಿಲ್ವಾ ಎಂದು ಪ್ರಶ್ನೆ ಮಾಡಿದರು ಎಂದರು. ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಎಫ್.ಪಿ.ಆರ್ ನಿಗದಿ ಪಡಿಸಿದನ್ನ ಆಕ್ಷೇಪಿಸಿ ನಿನ್ನೆ ಸಿಎಂ ಪತ್ರ ಬರೆದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾಹಿತಿ ಇಲ್ಲ ಎಂದು ಹೇಳಿದರು.
Bhandari says no information about CM writing letter regarding FPR
