ರಸ್ತೆ ಅಪಘಾತದಲ್ಲಿ ಓರ್ವ‌ ಮಹೇಶ ಸಾವು,‌ಮತ್ತೋರ್ವ ಮಹೇಶನಿಗೆ ಗಾಯ- One Mahesh dies, another injured in road accident

 SUDDILIVE || BHADRAVATHI

ರಸ್ತೆ ಅಪಘಾತದಲ್ಲಿ ಓರ್ವ‌ ಮಹೇಶ ಸಾವು,‌ಮತ್ತೋರ್ವ ಮಹೇಶನಿಗೆ ಗಾಯ- One Mahesh dies, another injured in road accident    

Mahesh, accident

ಭದ್ರಾವತಿಯ ಜಂಕ್ಷನ್ ಬಳಿ ಬೈಕ್ ಒಂದು ಸ್ಕಿಡ್ ಆದ ಪರಿಣಾಮ ಸ್ಥಳದಲ್ಲಿಯೇ ಯುವಕನೋರ್ವ ಸಾವುಕಂಡಿರುವ ಘಟನೆ ವರದಿಯಾಗಿದೆ. ಹಿಂಬದಿ ಸವಾರನಿಗೆ ಗಾಯಗಳಾಗಿದ್ದು ಪವಾಡ ಸದೃಶದಂತೆ ಪಾರಾಗಿದ್ದಾನೆ. 

ಕುವೆಂಪು ವಿಶ್ವ ವಿದ್ಯಾನಿಲಯದ ಕಡೆಯಿಂದ ಮಹೇಶ ಮತ್ತೋರ್ವ ಮಹೇಶ ನನ್ನ ಬೈಕ್ವನಲ್ಲಿ ಕೂರಿಸಿಕೊಂಡು ಮರಾಠಿ ಕ್ಯಾಂಪ್ ನಲ್ಲಿರುವ ಮನೆಗೆ ತೆರಳುವಾಗ ಜಂಕನ್ ಬಳಿ ಬೈಕ್ ಸ್ಕಿಡ್ ಆಗಿದೆ. ಬೈಕ್ ಚಾಲನೆ ಮಾಡುತ್ತಿದ್ದ ಮಹೇಶನಿಗೆ (25) ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಮೆಗ್ಗಾನ್ ಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತನಾಗಿದ್ದಾನೆ. 

ಹಿಂಬದಿಯ ಸವಾರನಾಗಿದ್ದ ಮತ್ತೋರ್ವ ಮಹೇಶನಿಗೆ ತರಚಿದ ಗಾಯಗಳಾಗಿವೆ. ಮೆಗ್ಗಾನ್ ನಲ್ಲಿ ಚಿಜಿತ್ಅಎ ಪಡೆಯುತ್ತಿದ್ದಾನೆ. ಮೃತ ಮಹೇಶ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಮತ್ತೋರ್ವ ಮಹೇಶ ಕೃಷಿ ಕಾರ್ಮಿಕನಾಗಿದ್ದಾನೆ. ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 

One Mahesh dies, another injured in road accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close