ನ.25 ರಂದು ವಿದ್ಯುತ್ ವ್ಯತ್ಯಯ -Power outage on Nov. 25

 SUDDILIVE || SHIVAMOGGA

 ನ.25 ರಂದು ವಿದ್ಯುತ್ ವ್ಯತ್ಯಯ -Power outage on Nov. 25

Power, Outage

ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-1ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ನ.25 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಕೆಲವೊಂದು ಕಡೆ ಸಂಜೆಯ ವರೆಗೆ ವ್ಯತ್ಯಯವಾದರೆ, ಕೆಲ ಭಾಗದಲ್ಲಿ ಮಧ್ಯಾಹ್ನದ ವರೆಗೆ ವ್ಯತ್ಯಯವಾಗಲಿದೆ. 

ಬೆ. 10.00 ರಿಂದ ಸಂಜೆ 6.00ರವರೆಗೆ ಮೆಹಬೂಬ್ ನಗರ, ವಾದಿ ಎ ಹುದಾ, ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು, ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್, ಕ್ರಷರ್ ರಸ್ತೆ, ಮಳಲಿಕೊಪ್ಪ, ಇಂದಿರಾನಗರ, ಎಕೆಎಸ್ ಲೇಔಟ್, ಪಟೇಲ್ ಕಾಂಪೌಂಡ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 


ಕುವೆಂಪು ರಸ್ತೆ ಸುತ್ತಮುತ್ತ ವ್ಯತ್ಯಯ

 

ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-1ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ನ.25 ಮತ್ತು 26 ರಂದು ಬೆ. 10.00 ರಿಂದ ಮಧ್ಯಾಹ 2.00ರವರೆಗೆ ಕುವೆಂಪು ರಸ್ತೆ, ಜಿಲ್ಲಾ ಪಂಚಾಯಿತಿ ಎದುರು, ನಂಜಪ್ಪ ಆಸ್ಪತ್ರೆ, ರಾಘವೇಂದ್ರ ಮಠ ರಸ್ತೆ, ದೈವಜ್ಞ ಸರ್ಕಲ್, ಶಿವಮೂರ್ತಿ ಸರ್ಕಲ್, ಮ್ಯಾಕ್ಸ್ ಆಸ್ಪತ್ರೆ, ಅಚ್ಯುತ್‌ರಾವ್ ಲೇಔಟ್, ವೆಂಕಟೇಶನಗರ, ಗಾಂಧಿನಗರ, ಜಯನಗರ, ಸವಳಂಗ ಮುಖ್ಯರಸ್ತೆ, ಚನ್ನಪ್ಪ ಲೇಔಟ್, ಮೆಟ್ರೋ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

Power outage on Nov. 25

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close