SUDDILIVE || SHIVAMOGGA
ಗ್ರೀಸ್ ವಿವಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಪ್ರಸನ್ನಕುಮಾರ್ ನೇಮಕ-Prasanna Kumar appointed as visiting professor at the University of Greece
ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ ಸಿ ಪ್ರಸನ್ನಕುಮಾರ ಇವರನ್ನು ಗ್ರೀಸ್ ಅಥೆನ್ಸ್ ನಲ್ಲಿ ಇರುವ ವೆಸ್ಟ್ ಅಟ್ಟಿಕಾ ವಿಶ್ವವಿದ್ಯಾಯಲಕ್ಕೆ
(University of West Attica, Athens, Greece) ಸಂದರ್ಶಕ ಪ್ರಾಧ್ಯಾಪಕರಾಗಿ ಆಹ್ವಾನಿಸಲಾಗಿದೆ. ನವೆಂಬರ್ 2025ರ 2 ಮತ್ತು 3ನೇ ವಾರದಲ್ಲಿ ನಿಗದಿಯಾಗಿರುವ ಈ ಭೇಟಿಯಲ್ಲಿ ವಿಶ್ವವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಭೇಟಿ ನೀಡಿ “Numerical simulation, Mathematical and Computer Modelling for Nonlinear Fluid Mechanics Problems" ಎಂಬ ವಿಷಯದ ಸಂಶೋಧನೆಗಳು ಮತ್ತು ಈ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ.
ಎರಡು ದಿನ ಈ ಭೇಟಿಯಲ್ಲಿ ವಿಶ್ವವಿದ್ಯಾಲಯಗಳ ನಡುವಿನ ಶೈಕ್ಷಣಿಕ ವಿನಿಮಯಕ್ಕೆ ಉತ್ತೇಜನವನ್ನು ನೀಡಲಿದ್ದು,
ವೆಸ್ಟ್ ಅಟ್ಟಿಕಾ ವಿಶ್ವವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಐಯೋನಿಸ್ ಇ. ಸಾರಿಸ್ ಅವರ ಮತ್ತು ಅವರ ಸಂಶೋಧನಾ ತಂಡದೊಂದಿಗೆ ಉನ್ನತ ಮಟ್ಟದ ಚರ್ಚೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಹಾಗೂ ಮೇಲಿನ ವಿಷಯದ ಕುರಿತು ಸಂಶೋಧನಾ ಯೋಜನೆಯನ್ನು ಪೂರ್ಣಗೊಳಿಸುವುದರಲ್ಲಿ ಮಾರ್ಗದರ್ಶನವನ್ನು ಮಾಡಲಿದ್ದಾರೆ.
ಈ ಆಹ್ವಾನವು ಡಾ. ಬಿ ಸಿ ಪ್ರಸನ್ನಕುಮಾರರವರ ವೈಯಕ್ತಿಕ ಸಾಧನೆಗಳನ್ನು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುದಾಯದ ಹೆಚ್ಚುತ್ತಿರುವ ಜಾಗತಿಕ ಪ್ರೊಫೈಲ್ ಅನ್ನು ಸಹ ಬಿಂಬಿಸಲಿದ್ದು, ಇವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ ಡಿ ಕುಂಬಾರ್‌ರವರು. ವಿವಿಯ ಕುಲಸಚಿವರುಗಳು ತಮ್ಮ ತಂಡದೊಂದಿಗೆ ಡಾ. ಬಿ ಸಿ ಪ್ರಸನ್ನಕುಮಾರ ಇವರಿಗೆ ಈ ಪ್ರತಿಷ್ಠಿತ ಅವಕಾಶ ದೊರಕಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Prasanna Kumar appointed as visiting professor at the University of Greece
