ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಓರ್ವ ಶಿಕ್ಷಕಿ ಅಸ್ವಸ್ಥ-Protest enters second day, one teacher falls ill

SUDDILIVE || SHIVAMOGGA

ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಓರ್ವ ಶಿಕ್ಷಕಿ ಅಸ್ವಸ್ಥ-Protest enters second day, one teacher falls ill

Protest, teacher


ಕನ್ನಡ ಶಿಕ್ಷಕರಿಗೆ ಸವಲತ್ತು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆ 2ನೇ ದಿವಸಕ್ಕೆ ಕಾಲಿಟ್ಟಿದ್ದು, ಎರಡನೇ ದಿನವೂ ಸಹ ಮತ್ತೋರ್ವ ಶಿಕ್ಷಕಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಸ್ಥಳಕ್ಕೆ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಎಸ್ ಮಧು ಬಂಗಾರಪ್ಪ ನವರು ಬರಬೇಕೆಂದು ಘೋಷಣೆ ಪ್ರಬಲವಾಗಿ ಕೂಗಲಾಗಿದೆ. ಸ್ಥಳಕ್ಕೆ  ಶಿವಮೊಗ್ಗ ನಗರ ಬಿಜೆಪಿ ಪಕ್ಷದ ಶಾಸಕರಾದ ಎಸ್ .ಎನ್. ಚನ್ನಬಸಪ್ಪನವರು ಬೆಂಬಲ ಸೂಚಿಸಿ ಮಾತಾನಾಡಿದ್ದಾರೆ. 

Protest, teacher

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಕಟ್ಟೆಯ ಮೇಲ್ಬಾಗದಲ್ಲಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದು ಯಾವುದೇ ಶಾಮಿಯಾನ ವ್ಯವಸ್ಥೆ ಮಾಡಿಕೊಳ್ಲದ ಹಿನ್ನಲೆಯಲ್ಲಿ ಬಿಸಿಲಲ್ಲೆ ಪ್ರತಿಭಟನೆ ಮುಂದಿನವರಿದಿದ್ದರಿಂದ ಶಿಕ್ಷಕರು ಅಸ್ವಸ್ಥರಾಗುತ್ತಿರುವುದಾಗಿ ತಿಳಿದು ಬಂದಿದೆ. 

ನಿನ್ನೆಯ ದಿವಸ ರಾತ್ರಿ ಎರಡು ಜನ ಶಿಕ್ಷಕರು ಗದಗ ಮತ್ತು ಕಲ್ಬುರ್ಗಿಯ  ನಾಗಯ್ಯ ಮುಂಡರಗಿ ಮತ್ತು ಶಿವಮೂರ್ತಿ ಎಂಬುವರು ಅಸ್ವಸ್ಥರಾಗಿ ಮೆಗ್ಗಾನ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗಾವಿಯ ಪದ್ಮಜಾ ಪಾಟೀಲ್ ಅಸ್ವಸ್ಥರಾಗಿದ್ದಾರೆ. ಪ್ರತಿಭಟನಾಕಾರರು ನ್ಯಾಯ ಸಿಗದಿದ್ದರೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದಾರೆ.

Protest enters second day, one teacher falls ill

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close