ಬಿಹೆಚ್ ರಸ್ತೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಸಾಗುವ ಬಸ್ ಮಾರ್ಗ ಬದಲಿ, ಬೆಸ್ತು ಬಿದ್ದ ಪ್ರಯಾಣಿಕರು! Bus route from BH Road to Alkola Circle has been changed, passengers stranded!

SUDDILIVE || SHIVAMOGGA

ಬಿಹೆಚ್ ರಸ್ತೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಸಾಗುವ ಬಸ್ ಮಾರ್ಗ ಬದಲಿ, ಬೆಸ್ತು ಬಿದ್ದ ಪ್ರಯಾಣಿಕರು! Bus route from BH Road to Alkola Circle has been changed, passengers stranded!     

Bus, route



ಖಾಸಗಿ ಬಸ್ ನಿಲ್ದಾಣದಿಂದ ಬಿಹೆಚ್ ರಸ್ತೆಯಲ್ಲಿ ಸಾಗಿ ಆಲ್ಕೊಳ ವೃತ್ತದಲ್ಲಿ ಖಾಸಗಿ ಬಸ್‌ಗಳು ಸಾಗರ, ಜೋಗಫಾಲ್ಸ್‌, ಹೊಸನಗರ, ಶಿಕಾರಿಪುರ, ಹೊನ್ನಾಳಿ, ನ್ಯಾಮತಿ, ಸೊರಬ ಮೊದಲಾದ ಊರುಗಳಿಗೆ ತೆರಳುತ್ತಿದ್ದವು. ಆದರೆ ಬುಧವಾರ ಮಧ್ಯಾಹ್ನದ ವೇಳೆಗೆ ಸಂಚಾರಿ ಪೊಲೀಸರು ಬಸ್ ಮಾರ್ಗವನ್ನೇ ದಿಢೀರ್ ಎಂದು ಬದಲಾಯಿಸಿದ್ದರು. ಇದರಿಂದ ಪ್ರತಿನಿತ್ಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೇಸ್ತು ಬಿದ್ದರು. ಜೊತೆಗೆ ಪೊಲೀಸರು ಕ್ರಮಕ್ಕೆ ಹಿಡಿಶಾಪವನ್ನೂ ಹಾಕಿದರು.
ಈ ಮಾರ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ, ಪ್ರವಾಸಿ ಮಂದಿರ, ಆಯನೂರು ಗೇಟ್ ಹಾಗೂ ಎಪಿಎಂಸಿ ಬಳಿ ನೂರಾರು ಪ್ರಯಾಣಿಕರು ಬಸ್‌ಗಳಿಗೆ ತೆರಳುತ್ತಾರೆ. ವಯೋವೃದ್ಧರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಬಸ್‌ಗಳಿಗೆ ಕಾದು ಕುಳಿತು ತೆರಳುತ್ತಿದ್ದರು. ಆದರೆ ಪೊಲೀಸರ ಪ್ರಯೋಗದಿಂದ ನೂರಾರು ಜನರು ಆಟೋಗಳಿಗೆ ಹಣ ತೆತ್ತು ಬಸ್ ಬರುವಲ್ಲಿಗೆ ತೆರಳಿದರು.
ಗುರುವಾರ ಬೆಳಿಗ್ಗೆ ಆಲ್ಕೊಳ ವೃತ್ತದಿಂದ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳನ್ನು ಗೋಪಾಳ ರಸ್ತೆ ಮೂಲಕ ಸಾಗುವಂತೆ ಮಾಡಿದ ಪೊಲೀಸರು ಪ್ರಯಾಣಿಕರಿಗೆ ಮತ್ತಷ್ಟು ತೊಂದರೆ ಆಗುವಂತೆ ಮಾಡಿದರು. ಹಿಂದೆಯೂ ಹಲವು ಬಾರಿ ಇಂತಹ ಪ್ರಯೋಗ ನಡೆಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪುನಃ ಅದೇ ಪ್ರಯೋಗವನ್ನು ಸಂಚಾರಿ ಪೊಲೀಸರು ಯಾವುದೇ ಪೂರ್ವ ಮಾಹಿತಿ ನೀಡದೇ ಕೈಗೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

Bus route from BH Road to Alkola Circle has been changed, passengers stranded!


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close