ad

ಉರುಲಿಗೆ ಬಿದ್ದ ಕರಡಿಯ ರಕ್ಷಣೆ-Rescue of a trapped bear

 SUDDILIVE || BHADRAVATHI

ಉರುಲಿಗೆ ಬಿದ್ದ ಕರಡಿಯ ರಕ್ಷಣೆ-Rescue of a trapped bear

Bear, Rescue

ಭದ್ರಾವತಿ ಅರಣ್ಯ ಉಪವಿಭಾಗದ ವ್ಯಾಪ್ತಿಯ ಶಾಂತಿನಗರದ ಸಾರಥಿ ಗ್ರಾಮದಲ್ಲಿ ಅಡಿಕೆ ತೋಟದಲ್ಲಿ ಹಾಕಲಾಗಿದ್ದ ಉರುಲಿಗೆ ಕರಡಿಯೊಂದು ಬಿದ್ದಿದ್ದು ಉರುಲಿಗೆ ಬಿದ್ದ ಕರಡಿಯನ್ನ ರಕ್ಷಿಸಲಾಗಿದೆ. 

ಸಾರಥಿ ಗ್ರಾಮದಲ್ಲಿರುವ ಅಡಿಕೆ ತೋಟದಲ್ಲಿ ಉರುಲು ಅಳವಡಿಸಿದ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಅನ್ಯ ಪ್ರಾಣಿಗಳು ತೋಟಕ್ಕೆ ಧಾವಿಸಿ ಬೆಳೆಗಳನ್ನ ಹಾನಿಯಾಗದಂತೆ ಮಾಲೀಕರು ಉರುಳು ಅಳವಡಿಸಿದ್ದರು. ಆದರೆ ಕರಡಿ ಈ ಉರುಲಿಗೆ ಬಿದ್ದಿತ್ತು. 

ಮಾಲೀಕರ ಅದೃಷ್ಟಕ್ಕೆ ಉರುಳಿಗೆ ಸಿಕ್ಕಿಕೊಂಡ ಕರಡಿ ಬದುಕುಳಿದಿತ್ತು. 6 ವರ್ಷದ ಗಂಡು ಕರಡಿ ಈ ಉರುಳಿಗೆ ಬಿದ್ದಿತ್ತು. ಜೀವಂವಾಗಿ ಉರುಳಿಗೆ ಸಿಕ್ಕು ಒದ್ದಾಡುತ್ತಿದ್ದ ಕರಡಿಗೆ ಅರವಳಿಕೆ ನೀಡಿ ಕಾಡಿಗೆ ಬಿಡಲಾಗಿದೆ. 

ಭದ್ರಾಪುರದ ಕಾಡಿನಿಂದ ಬಂದಿದ್ದ ಕರಡಿಯನ್ನ ಮತ್ತೆ ಅದೇ ಕಾಡಿಗೆ ವಾಪಾಸ್ ಬಿಡಲಾಗಿದೆ. ಲಯನ್ ಸಫಾರಿ ವೈದ್ಯ ಡಾ.ಮುರುಳಿಯವರ ಯಶಸ್ವಿ ಕಾರ್ಯಾಚರಣೆಯಿಮದ ಕರಡಿಯನ್ನ‌ ಸುರಕ್ಷಿತವಾಗಿ ಕಾಡಿಗೆ ಕಳುಹಿಸಲಾಗಿದೆ. 

Rescue of a trapped bear

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close