ad

ಪ್ರಮಾಣಿಕತೆ ಮೆರೆದ ಇಡ್ಲಿಗಾಡಿಯ ಮಾಲೀಕ- Owner of Certified Idligadi

SUDDILIVE || SHIVAMOGGA

ಪ್ರಮಾಣಿಕತೆ ಮೆರೆದ ಇಡ್ಲಿಗಾಡಿಯ ಮಾಲೀಕ- Owner of Certified Idligadi  

Idligadi, certified

1 ಲಕ್ಷ ರೂವಿರುವ ಹಣದ ಕವರ್ ನ್ನ ಇಡ್ಲಿಗಾಡಿಯ ಮಾಲೀಕರು ಅದರ ನಿಜವಾದ ವಾರಸುದಾರರಿಗೆ ಹಿಂತುರುಗಿಸಿ ಪ್ರಮಾಣಿಕತೆಯನ್ನ ಮೆರೆದಿದ್ದಾರೆ. ಇದಕ್ಕೆ ವೇದಿಕೆಯಾದುದ್ದು ತುಂಗನಗರ ಠಾಣೆಯ ಪಿಐ ಗುರುರಾಜ್ ಕೆ.ಟಿ

ಏನದು ಸ್ಟೋರಿ?

ದಿನಾಂಕ‌ 4/11/25 ರಂದು ರಾತ್ರಿ 9:00 PM ಗೆ ಆನವಟ್ಟಿಯಿಂದ ಪ್ರಯಾಣ ಬೆಳೆಸಿದ ಮದುಕೇಶವ್ ಎಂಬುವರು ಶಿವಮೊಗ್ಗ ಕ್ಕೆ ಬಂದ ಇಳಿದಿರುತ್ತಾರೆ.  ಆಲ್ಕೊಳ ಸರ್ಕಲ್ ಹತ್ತಿರ ಇಡ್ಲಿ‌ಗಾಡಿ ಯಲ್ಲಿ ಇಡ್ಲಿ ತಿನ್ನಲು ಹೋಗಿದ್ದು ನಂತರ ಇಡ್ಲಿ ತಿಂದು ತಮ್ಮ ಬಳಿ ಇದ್ದ ಪ್ಲಾಸ್ಟಿಕ್ ಕವರ್ ಅನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ. 

ತಿರುಮೂರ್ತಿ

ನಂತರ ಇಡ್ಲಿ ಗಾಡಿಯ ಮಾಲಿಕರಾದ ತಿರುಮೂರ್ತಿ ರವರು ಗ್ರಾಹಕರು ಬಿಟ್ಟು ಹೋದ ಕವರ್ ಅನ್ನು ನೋಡಿದ್ದು ಅದರಲ್ಲಿ 1 ಲಕ್ಷ ರೂಪಾಯಿ ಹಣವಿದ್ದನ್ನ ಗಮನಿಸಿ ಪ್ರಾಮಾಣಿಕತೆ ಯಿಂದ ತುಂಗಾನಗರ ಪೋಲಿಸ್ ಠಾಣೆಗೆ ಬೀದಿ ಬದಿ ವ್ಯಾಪಾರಿ ಸಂಘದ ಅದ್ಯಕ್ಷ ರಾದ ಮಣಿ ರವರೊಂದಿಗೆ ಬಂದು ಹಣವನ್ನು ಮದುಕೇಶ್ವರ ಅವರಿಗೆ ತುಂಗಾನಗರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಕೆ.ಟಿ.ಗುರುರಾಜ ರ ಸಮಕ್ಷಮದಲ್ಲಿ ಹಿಂತಿರುಗಿಸಿದ್ದಾರೆ.

ಮದುಕೇಶವ್ ರವರು ಅವರ  ಸ್ನೇಹಿತರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಚಿಕಿತ್ಸೆಗೆ ಆಸ್ಪತ್ರೆಗೆ ಹಣ ಕಟ್ಟಲು 1ಲಕ್ಷ ಹಣ ತಂದಿದ್ದಾಗಿ ತಿಳಿಸಿರುತ್ತಾರೆ.ಇಡ್ಲಿ ಗಾಡಿಯ ಮಾಲಿಕರಾದ ತಿರುಮೂರ್ತಿ ರವರ ಪ್ರಾಮಾಣಿಕತೆ ಯನ್ನು ಪೋಲಿಸ್ ಅದೀಕ್ಷಕರು ಶ್ಲಾಘಿಸಿರುತ್ತಾರೆ.

Owner of Certified Idligadi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close