ad

ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ, ಬಿತ್ತು ದಂಡ- Rude behavior towards passengers, fine imposed

 SUDDILIVE || SHIVAMOGGA

ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ, ಬಿತ್ತು ದಂಡ- Rude behavior towards passengers, fine imposed    

Rude, Behaviour


ಪ್ರೀಪೇಯ್ಡ್ ಗಿಂತ ಅಧಿಕ ಹಣ ಪಡೆದ‌ ಆಟೋ ಚಾಲಕನಿಗೆ ಟ್ರಾಫಿಕ್ ಪೊಲೀಸರು ದಙಡ ವಿಧಿಸಿ ಪ್ರಯಾಣಿಕರಿಂದ ಅಧಿಕವಾಗಿ ಪಡೆದ ಹಣವನ್ನ ಹಿಂದಿರುಗಿಸಿದ್ದಾರೆ. ಇದರಿಂದ ರೈಲ್ವೆ ಪ್ರೀಪೇಯ್ಡ್ ಆಟೋ ದುರ್ಬಳಕೆ ಮಾಡಿಕೊಳ್ಳುವವರಿಗೆ ಖಡಕ್ ಸಂದೇಶ ರವಾನಿಸಲಾಗಿದೆ. 

ಇಂದು ರೈಲ್ವೆ ನಿಲ್ದಾಣದ ಆಟೋ ಪ್ರೀಪೇಯ್ಡ್   ಟಿಕೇಟ್ ದರಕ್ಕಿಂತ ಹೆಚ್ಚುವರಿಯಾಗಿ ₹ 15 ರೂಪಾಯಿಗಳನ್ನು ಹೆಚ್ಚಿಗೆ ಪಡೆದು ಮತ್ತು ಪ್ರಯಾಣಿಕರ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ  ಆಟೋ ಚಾಲಕನನ್ನು ಠಾಣೆಗೆ ಕರೆಸಲಾಗಿತ್ತು.  

ಹೆಚ್ಚುವರಿಯಾಗಿ ಪಡೆದ 15 ರೂಪಾಯಿ ಹಣವನ್ನು ಪ್ರಯಾಣಿಕರಿಗೆ  ವಾಪಸ್ಸು ಕೊಡಿಸಿ ಆಟೋ ಚಾಲಕನಿಗೆ ಐ.ಎಂ.ವಿ ಕಾಯ್ದೆ ಪ್ರಕಾರ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಮಾಡದಂತೆ ಸೂಕ್ತ ತಿಳುವಳಿಕೆ ಹಾಗೂ ಪ್ರಯಾಣಿಕರ ಜೊತೆಯಲ್ಲಿ ಸೌಜನ್ಯದಿಂದ  ವರ್ತಿಸುವಂತೆ ಪೊಲೀಸರು ಸೂಚಿಸಿದ್ದಾರೆ. 

Rude behavior towards passengers, fine imposed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close