ad

ನೆಹರೂ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಎಸ್ಪಿಯವರ ಖಡಕ್ ಸೂಚನೆ-SP issues strict instructions for parking system on Nehru Road

 SUDDILIVE || SHIVAMOGGA

ನೆಹರೂ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಎಸ್ಪಿಯವರ ಖಡಕ್ ಸೂಚನೆ-SP issues strict instructions for parking system on Nehru Road

Sp, parking




ನೆಹರೂ ರಸ್ತೆಯಲ್ಲಿ ಸುಗಮ ಸಂಚಾರದ ವ್ಯವಸ್ಥೆಗೆ ಇಲ್ಲಿನ ವರ್ತಕರ ಸಭೆಯನ್ನ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ನೆಹರೂ ರಸ್ತೆಯಲ್ಲಿರುವ 147 ಅಂಗಡಿಯವರಿಗೆ ಕಸ್ತೂರ ಬಾ ಶಾಲೆಗೆ ಅಂಟಿಕೊಂಡಿರುವ ಕನ್ಸರ್ ವೆನ್ಸಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇದರ ಜೊತೆಗೆ ನೆಹರೂ ರಸ್ತೆಯಲ್ಲಿ ಮಾರ್ಕಿಂಗ್ ಮಾಡಿ ಅದರೊಳಗೆ ಪಾರ್ಕಿಂಗ್ ವ್ಯವಸ್ಥೆ, ಒಂದು ವೇಳೆ ಪಾರ್ಕಿಂಗ್ ಮಾಡುವವರು ಸರಿಯಾಗಿ ಪಾರ್ಕ್ ಮಾಡದೆ ಜಗಳಕ್ಕೆ ಬಿದ್ದರೆ ಸಂಚಾರಿ ಸಹಾಯವಾಣಿ 8277983404 ಸಂಪರ್ಕಿಸಲು ಸೂಚಿಸಲಾಯಿತು. 

ಮೊದಲಿಗೆ ಸಭೆಯಲ್ಲಿ ನೆಹರೂ ರಸ್ತೆಯ ಅಙಗಡಿಯ ಮಾಲೀಕರೊಬ್ಬರು ಮಾತನಾಡಿ, ನೆಹರೂ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಕಸ್ತೂರ ಬಾ ಕಾಲೇಜಿನ ಕಡೆ ಪಾರ್ಕ್ ಮಾಡಿ ಅಲ್ಲಿಂದಲೇ ಹೊರಹೋಗಲು ಅವಕಾಶದ ಬಗ್ಗೆ ತಿಳಿಸಿದರು. 

ಇಲ್ಲಿ 250 ದ್ವಿಚಕ್ರ ವಾಹನ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಬಹುದಾಗಿದೆ. ಇದೇ ವೇಳೆ ಸಾಧನ ಟ್ರೇಡರ್ಸ್ ನ ಮಾಲೀಕರು ಎಸ್ಪಿಯವರಿಗೆ ಕಸ್ತೂರಬಾ ಕಾಲೇಜಿನ ಪಕ್ಕದಲ್ಲಿರುವ ಕನ್ಸರ್ ವೆನ್ಸಿಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಸೇರಿದಂತೆ ಇನ್ನೆರಡು ಕಡೆ ಅವಕಾಶ ಕೋರಿ ಮನವಿ ಮಾಡಿದರು. 

ಡಾ. ಅಶೋಕ್ ಪೈ, ಡಾ. ನಂದಕಿಶೋರ್ ನವರು ಪಾರ್ಕಿಂಗ್ ಲಾಟ್ ಬಂದ್ ಮಾಡಿದ್ದಾರೆ. ಇಲ್ಲಿಗೆ ಬರುವ ರೋಗಿಗಳು ಮತ್ತು ಸಂಬಂಧಿಕರು ಬಂದು ಸಾರ್ವಲೈನ್ ರಸ್ತೆಯ ಮನೆಗಳ ಮುಂದೆ ತಮ್ಮ ವಾಹನ ನಿಲ್ಲಿಸುತ್ತಾರೆ. ಆಭರಣದವರು ಪಾರ್ಕಿಂಗ್ ಲಾಟ್  ಮಾಡಿದ್ದಾರೆ. ಅವರು ನಿಯಂತ್ರಿಸುತ್ತಾರೆ ಇವರುಗಳು ಏಕೆ ನಿಯಂತ್ರಿಸಲ್ಲ ಎಂದು  ದೂರಿದರು.

20 ನಿಮಿಷ ಕ್ಕೂ ಹೆಚ್ಚು ಪಾರ್ಕಿಂಗ್ ಮಾಡಿದರೆ ಅವರಿಗೆ ಫೋಟೊ ಹಾಕಿ ದಂಡ ಹಾಕುವ ವ್ಯವಸ್ಥೆ ಆಗಬೇಕು. ರೈಮಾಂಡ್ ಶೋ ರೂಮ್ ಮಾಲೀಕ ಜಗದೀಶ್ ನೆಹರೂ ರಸ್ತೆಯ ಗಿಡಗಳು ಟ್ರಿಮ್ ಮಾಡಿ, ದ್ವಿಚಕ್ರವಾಹನವನ್ನ ಅಡ್ಡವಾಗಿ ನಿಲ್ಲಿಸಿ ಅವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಅಂಗಡಿಯ ಮುಂದೆ ಕ್ಯಾಮೆರಾ ಅಳವಡಿಸು ಅವಕಾಶ ಮಾಡಬೇಕು. ಧನ ಲಕ್ಷ್ಮಿ ಮಾಲೀಕ ಗಿರೀಶ್ ಮಾತನಾಡಿ, 11 ಗಂಟೆಯ ಮೇಲೆ ಪಾರ್ಕಿಂಗ್ ಸಿಗಲ್ಲ. ಟೈಗರ್ ಇದ್ದಾಗ ಜನ ಹೆದರುತ್ತಿದ್ದರು. 147 ಅಂಗಡಿ ಇವೆ. ನಾಲ್ಕೈದು ಅಂಗಡಿಯವರು ಕಾರುತರುತ್ತಾರೆ ಉಳಿದವರು ದ್ವಿಚಕ್ರವಾಹನ ತರುತ್ತಿದ್ದೇವೆ ಎಂದರು. 

ಸಿಟಿ ಬಸ್ ಸರಿಯಾದ ಸ್ಟಾಪ್ ನಲ್ಲಿಯೇ ನಿಲ್ಲಿಸಬೇಕು. ಗೂಡ್ಸ್ ವಾಹನಗಳು ಬಂದು ಡೆಲಿವೆರಿ ಕೊಡಲು ಸಮಯ ನಿಗದಿಸಬೇಕು ಎಂದು ಒತ್ತಾಯಿಸಲಾಯಿತು. ಕಸ್ತೂರ ಬಾ ಕನ್ಸವೆನ್ಸಿಯಲ್ಲಿ ಗಾಂಜಾ, ತೃತೀಯ ಲಿಂಗಿಯರ ಹಾವಳಿ ನಡೆದಿದೆ. ಪೊಲೀಸರು ಇಲಾಖೆಯವರು ಸಾರ್ವಜನಿಕರೊಂದಿಗೆ ಸರಿಯಾದ ವರ್ತನೆ ನಡೆಸಲು ಎಸ್ಪಿಗೆ ಮನವಿ ಮಾಡಲಾಯಿತು. 

ಎಸ್ಪಿ ಮಿಥಿನ್ ಕುನಾರ್ ಮಾತನಾಡಿ, ಬೆಳಿಗ್ಗೆಯಿಂದ ಸಂಜೆಯ ವರೆಗೆ ವಾಹನಗಳ ಚಲನವಲನಗಳನ್ನ ಗಮನಿಸಬೇಕು. ಪಾರ್ಕ್ ಎಕ್ಸ್ ಟೆನ್ಷನ್ ನಲ್ಲಿ ಇರುವ ಆಸ್ಪತ್ರೆಗಳಿಗೆ 21 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಫ್ರೀ ಪರ್ಕಿಂಗ್ ಇದೆ. ಸಿಸಿ ಟಿವಿ ಕ್ಯಾಮೆರಾವನ್ನ ಪಾಲಿಕೆ ಯಿಂದ ಹಾಕಲಾಗಿದೆ. ನಿರ್ವಾಹಣೆಯನ್ನ ನಾಳೆ ಆಸ್ಪತ್ರೆಯವರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಇನ್ನೊಂದು ಮೂರು ದಿನಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಲಾಗುವುದು. ಅಂಗಡಿ ಮುಂದೆ ಯಾವುದೇ ಫುಟ್ ಬೋರ್ಡ್ ಹಾಕುವಂತಿಲ್ಲ. ಮೊದಲು ಎಲ್ಲಾ ಅಂಗಡಿಗೆ  ವಾರ್ನಿಂಗ್ ಕೊಡಲಾಗುತ್ತದೆ. ನೆಹರೂ ರಸ್ತೆಯಲ್ಲಿ ಅಂಗಡಿಯಲ್ಲಿನ ಮಾಲೀಕರು ಸಿಬ್ಬಂದಿಗಳ ವಾಹನ ಸೇರಿದರೆ 450 ವಾಹನಗಳಾಗುತ್ತದೆ. ಎಲ್ಲಿ ಕನ್ಸರ್ ವೆನ್ಸಿ ಗುರುತಿಸಿ ಕೊಡಲಾಗಿದೆಯೋ ಅಲ್ಲಿ ಪಾರ್ಕ್ ಮಾಡಿ. ಆ ಕನ್ಸರ್ ವೆನ್ಸಿಯಲ್ಲಿ ಸಿಸಿ ಟಿವಿ, ಲೈಟ್ ಹಾಕಿಕೊಡಲಾಗುವುದು. ವಾಕ್ ಮಾಡಿದರೆ ಆರೋಗ್ಯ ಸರಿಯಿತ್ತದೆ. ಅದನ್ನ ಮಾಡಿ ಎಂದು ಎಸ್ಪಿ ಹೇಳಿದರು. 

ಮಾರ್ಕಿಂಗ್ ಆಫ್ ದ ರೋಡ್ ನ್ನ ಗೋಪಿ ವೃತ್ತದ ವರೆಗೆ  ಮಾರ್ಕ್ ಮಾಡಲಾಗುತ್ತದೆ. ಅಂಗಡಿಯ ಮುಂದೆ ಮಾರ್ಕ್ ಮಾಡಿ. ಅಂಗಡಿಯ ಮುಂದೆ ಸಿಸಿ ಟಿವಿ ಅಳವಡಿಸಿ. ರಸ್ತೆ ಕಾಣುವಂತೆ ಸಿಸಿಟಿವಿ ಹಾಕಿಸಿಕೊಳ್ಳಿ. ಟೈಗರ್ ಇಲ್ಲ. 15 ವರ್ಷದ ನಂತರ ಆ ವಾಹನ ಸಗಕ್ರಾಪ್ ಆಗಲಿದೆ. ಇದನ್ನ ಹೊಸ ವೆಹಿಕಲ್ ಮಾಡುವವರೆಗೆ ಸಮಯ ಹಿಡಿಯಲಿದೆ. ಯಾರು ಅಡ್ಡ ನಿಲ್ಲಿಸುತ್ತಾರೆ. ಅಲ್ಲಿ ಟೋಲ್ ಫ್ರೀ 8277983404 ಗೆ ಕರೆ ಮಾಡಿ. ಈ ನಂಬರ್ ಗೆ ಫೊಟೊ ತೆಗೆದು ಫೊಟೊ ಹಾಕಿ ಎಂದರು. 

ದೂರು ದಲ್ಲಿ ವೀಲ್ ಲಾಕ್ ಮಾಡಲಾಗುವುದು. ಬಹಮಹಡಿ ಕಟ್ಟಡದಲ್ಲೂ ಪಾರ್ಕಗ್ ಮಾಡಲಾಗುತ್ತದೆ.  ಎರಡು ಕನ್ಸರ್ ವೆನ್ಸಿ  ಗುರುತಿಸಲಾಗುತ್ತದೆ. ಮಗಯೂಚಲ್ ಅಂಡರ್ ಸ್ಟ್ಯಾಂಡಿಂಗ್ ನಿಂದ ಸಂಚಾರಿ ಸಮಸ್ಯೆ ಬಗೆಹರಿಸಲಾಗುವುದು. 

ಬಸವೇಶ್ವರ ಸಂಘದ ಅಧ್ಯಕ್ಷ ಸಂತೋಷ್ ಬಳ್ಳೇಕೆರೆ, ಅಶ್ವಥ್ ನಾರಾಯಣ ಶೆಟ್ರು, ರಂಗನಾಥ್, ಸರ್ಕಲ್ ಇನ್ ಸ್ಪೆಕ್ಟರ್ ದೇವರಾಜ್, ಪಾಲಿಕೆಯ ಎಇಇ ಜ್ಯೋತಿ, ಪುಷ್ಪವತಿ ಉಪಸ್ಥಿತಿತರಿದ್ದರು.

SP issues strict instructions for parking system on Nehru Road

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close