ಸುದ್ದಿಲೈವ್ ಇಂಪ್ಯಾಕ್ಟ್, 40 ರೂ. ಅಧಿಕಹಣಕ್ಕೆ ಬಿತ್ತು 2000 ರೂ.ದಂಡ- SUDDILIVE Impact, Rs. 40. Fined Rs. 2000 for overpayment

 SUDDILIVE || SHIVAMOGGA

ಸುದ್ದಿಲೈವ್ ಇಂಪ್ಯಾಕ್ಟ್, 40 ರೂ. ಅಧಿಕಹಣಕ್ಕೆ ಬಿತ್ತು 2000 ರೂ.ದಂಡ- SUDDILIVE Impact, Rs. 40. Fined Rs. 2000 for overpayment 

SUDDILIVE, IMPACT

ಶಿವಮೊಗ್ಗದ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ನೈರುತ್ಯ ರೈಲ್ವೆ ಇಲಾಖೆ ಗುತ್ತಿಗೆದಾರನಿಗೆ ದಂಡ ವಿಧಿಸಿದೆ.‌ 40 ರೂ. ಅಧಿಕ ಹಣ ಪಡೆದ ಗುತ್ತಿಗೆದಾರನಿಗೆ ಇಲಾಖೆಯು 2000 ರೂ. ಹಣ ದಂಡ ಪೀಕಿಸಿದೆ. ಇದು ಸುದ್ದಿಲೈವ್ ನ ಬಿಗ್ ಇಂಪ್ಯಾಕ್ಟ್ ಸುದ್ದಿಯಾಗಿದೆ. 

ಶಿವಮೊಗ್ಗ ರೈಲ್ವೆ ಪಾರ್ಕಿಂಗ್ ನಲ್ಲಿ ಪ್ರಯಾಣಿಕರಿಂದ ಅಧಿಕ ಹಣ ಲೂಟಿ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಗಂಭೀರವಾಗಿ ಆರೋಪಿಸಿದ್ದು, ಈ ಕುರಿತು ಮಾಹಿತಿ ಹುಡುಕಲು ಹೋದಾಗ ಪಾರ್ಕಿಂಗ್ ನಲ್ಲಿ ಅಧಿಕ ಹಣ ಪಡೆದಿರುವುದು ಬೆಳಕಿಗೆ ಬಂದಿತ್ತು.

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿರುವ ಪಾರ್ಕಿಂಗ್ ಇತ್ತೀಚೆಗೆ ಟೆಂಡರ್ ನಡೆದಿದೆ. ಹಳೆಯ ಟೆಂಡರ್ ದಾರ 14 ಲಕ್ಷ ರೂ ವರ್ಷಕ್ಕೆ ಕಟ್ಟುತ್ತಿದ್ದ. ಈ ಬಾರಿಯ ಟೆಂಡರ್ ಬೆಂಗಳೂರಿನ ಮಾರುತಿ ಎಂಟರ್ ಪ್ರೈಸಸ್ ನವರಿಗೆ ಪ್ರತಿ ವರ್ಷಕ್ಕೆ 37 ಲಕ್ಷಕ್ಕೆ  ಹಿಡಿದಿದ್ದಾರೆ.  ನ.03 ರಂದು ಈ ಟೆಂಡರ್ ಮಾರುತಿ ಎಂಟರ್ ಪ್ರೈಸಸ್ ಗೆ ಅಲಟ್ ಮಾಡಲಾಗಿದೆ. ಆದರೆ ಶಿವಮೊಗ್ಗ ಕಾರು ಪಾರ್ಕಿಂಗ್ ನಲ್ಲಿ ಶಿವಮೊಗ್ಗದ ಗ್ರಾಹಕರೊಬ್ಬರು ನ.4 ಕ್ಕೆ ಬಂದು ಪಾರ್ಕ ಮಾಡಿದವರಿಗೆ 40 ರೂ 24 ಗಂಟೆಗೆ ಚಾರ್ಚ್ ಮಾಡಿ ಟೆಂಡರ್ ಅಮೌಂಟ್ ಗಿಂತ ಹೆಚ್ಚಿಗೆ ಪಡೆದಿರುವುದು ಬೆಳಕಿಗೆ ಬಂದಿತ್ತು.

Suddilice, Impact

ಶಿವಮೊಗ್ಗದ ರೈಲ್ವೆ ನಿಲ್ದಾಣದ ಕಮರ್ಷಿಯಲ್ ಅಧಿಕಾರಿಗೆ ವಿಚಾರಿಸಿದಾಗ ಪಾರ್ಕಿಂಗ್ ಪಡೆದ ಗುತ್ತಿಗೆದಾರ  10 ರೂ. ಅಧಿಕ ಚಾರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದ ಮ.ಸ ಷರೀಪ್ ಎಂಬುವರು ನ.4 ರಂದು ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ಕಾರನ್ನ ತಂದು ಪಾರ್ಕ್ ಮಾಡಿ ನ.7 ನೇ ತಾರೀಕು ವಾಪಾಸ್ ಬಂದಿದ್ದರು.

ಒಟ್ಟು ರೈಲ್ವೆ ನಿಲ್ದಾಣದ ಪಾರ್ಕ್ ನಲ್ಲಿ 3 ದಿನ 10 ನಿಮಿಷ ಪಾರ್ಕ್ ಮಾಡಿದ್ದಕ್ಕೆ ಜಿಎಸ್ ಟಿ ಮತ್ತು ಇತರೆ ಎಲ್ಲಾ ಚಾರ್ಜ್ ಸೇರಿಸಿ 160 ರೂ. ಹಾಕಿದ್ದಾರೆ. 10 ನಿಮಿಷ ತಡವಾಗಿ ಬಂದಿದ್ದಾರೆ ಕಡಿಮೆ ಮಾಡಿ ಎಂದು ಷರೀಫ್ ಕೇಳಿಕೊಂಡರು ಪಾರ್ಕ್ ನವರು ಕೇಳದೆ 4 ದಿನಗಳ ಲೆಕ್ಕದಂತೆ 160 ಚಾರ್ಜ್ ಮಾಡಿದ್ದಾನೆ. 160 ರೂಗೆ ಪ್ರತಿದಿನ 33.84 ರೂ. 18% ಜಿಎಸ್ ಟಿ ಹಾಕಿ 160 ರೂ. ಪಡೆದು ಕಳುಹಿಸಿದ್ದಾನೆ. 

ಇದರ ಬೆನ್ನುಹತ್ತಿದ ಸುದ್ದಿಲೈವ್ ಟೆಂಡರ್ ದಾರ  ಪ್ರತಿದಿನ ನಿಗದಿತ ಟೆಂಡರ್ ಗಿಂತ ಕಾರು ಪಾರ್ಕಿಂಗ್ ಗೆ 10 ರೂ ಹೆಚ್ಚಿನ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಕಮರ್ಷಿಯಲ್ ಅಧಿಕಾರಿಗಳನ್ನ ವಿಚಾರಿಸಿದಾಗ ಕಾರಿಗೆ ಪ್ರತಿದಿನ 30 ರೂ. ಮತ್ತು ದ್ವಿಚಕ್ರ ವಾಹನಕ್ಕೆ 20 ರೂ. ಹಣ ನಿಗದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಟೆಂಡರ್ ದಾರ ನಿಗದಿತ ಹಣಕ್ಕಿಂತ ಹೆಚ್ಚಿನ ಹಣಪಡೆದು ಗ್ರಾಹಕರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. 

ಈ ಕುರಿತು ಎಚ್ಚೆತ್ತುಕೊಂಡ ಮೈಸೂರು ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗ ತಪಾಸಣೆ ನಡೆಸಿ 40 ರೂ. ಅಧಿಕ ಹಣ ಪಡೆದ ಗುತ್ತಿಗೆದಾರನಿಗೆ 2000 ರೂ. ಹಣ ಪೀಕಿಸಿದ್ದಾರೆ.   

SUDDILIVE Impact, Rs. 40. Fined Rs. 2000 for overpayment 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close