ಹಬ್ಬದ ಹೋರಿ ಓಡುವ ಭರದಲ್ಲಿ ಕೆರೆಗೆ ಬಿದ್ದು ಸಾವು-Death after falling into lake during festival bull run

 SUDDILIVE || SHIRALKOPPA

ಹಬ್ಬದ ಹೋರಿ ಓಡುವ ಭರದಲ್ಲಿ ಕೆರೆಗೆ ಬಿದ್ದು ಸಾವು-Death after falling into lake during festival bull run      

Bull, run

ಹೋರಿ ಬೆದರಿಸುವ ಹಬ್ಬದ ವೇಳೆ ಹೋರಿಯೊಂದು ಓಡುವ ಭರದಲ್ಲಿ ಕೆರೆಗೆ ಹಾರಿ ಮೃತಪಟ್ಟಿದೆ. ಶಿಕಾರಿಪುರ ತಾಲೂಕು ಹುಲಗಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಬ್ಬದಲ್ಲಿ ಘಟನೆ ಸಂಭವಿಸಿದೆ.

ಹುಲಗಿನಕೊಪ್ಪದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಹಬ್ಬದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಹೋರಿಗಳು ಪಾಲ್ಗೊಂಡಿದ್ದವು. ಹೋರಿಗಳಿಗೆ ಕೊಬ್ಬರಿ ಹಾಗೂ ಬಲೂನ್‌ಗಳನ್ನು ಕಟ್ಟಿ ಅಖಾಡಕ್ಕೆ ಬಿಡಲಾಗುತ್ತಿತ್ತು. ಈ ವೇಳೆ ನಾಗರಾಜ್‌ ಜಂಬೂರು ಎಂಬುವರ ಮುಗಳಿಕೊಪ್ಪದ ಮುತ್ತು ಎಂಬ ಹೆಸರಿನ ಹೋರಿ ಹುಲಗಿನಕಟ್ಟೆ ಕೆರೆಗೆ ಹಾರಿದೆ. ಕೂಡಲೆ ಕೆರೆಗೆ ಇಳಿದು ಹೋರಿಯನ್ನು ದಡಕ್ಕೆ ಎಳೆದು ತರಲಾಯಿತು.

ದಡಕ್ಕೆ ತರುವಷ್ಟರಲ್ಲಿ ಹೋರಿ ಕೊನೆಯುಸಿರೆಳೆದಿತ್ತು. ಹೋರಿ ಮಾಲೀಕರು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಬೇಲಿ ಹಾಕಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಹೋರಿ ಸಾವಿನ ಘಟನೆಯು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

Death after falling into lake during festival bull run

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close