ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು-Students block road pothole

 SUDDILIVE || SHIVAMOGGA

ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು-Students block road pothole   

Student, patholes


ಶಿವಮೊಗ್ಗದಲ್ಲಿ ಕೆಲ ರಸ್ತೆಗಳು ಯಮಸ್ವರೂಪಿಯಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಕೆಲ ರಸ್ತೆಗುಂಡಿಗಳೇ ಮೃತ್ಯ ಕೂಪಗಳಂತಾಗುತ್ತಿವೆ. ಗಮನಿಸಬೇಕಾದ್ದ ಇಲಾಖೆಗಳು ಗಮನಿಸದೆ ಇರುವ ಪರಿಣಾಮ ಸಂಬಂಧ ಪಟ್ಟ ಇಲಾಖೆಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ಮಾದರಿಯಾಗುತ್ತಿದ್ದಾರೆ. 

ಕೆಲ ಮಾಧ್ಯಮಗಳ ಪ್ರಕಾರ ಸರ್ಕಾರದ ಬಳಿ ಹಣವಿಲ್ಲದ ಕಾರಣ ಅಭಿವೃಧ್ಧಿ ಕಾಮಗಾರಿಗಳು ನೆನಗುದಿಗೆ ಬೀಳುತ್ತಿವೆ ಎಂಬ ಮಾಹಿತಿ ಹೊರಬೀಳುತ್ತಿವೆ. ರಸ್ತೆ, ಚರಂಡಿ, ಯುಜಿಡಿಗಳ ನಿರ್ವಾಹಣೆಗೆ ಕನಿಷ್ಠಪಕ್ಷನಾದರೂ ಸರ್ಕಾರ ಹಣ ಬಿಡುಗಡೆ ಮಾಡಬೇಕಾಗಿತ್ತು. ಕೆಲ ಇಲಾಖೆಗಳ ಅಧಿಕಾರಿಗಳು ಹರಳೆಣ್ಣೆ ಹಾಕಿಕೊಂಡಿರುವ ಪರಿಣಾಮ ಈ ರಸ್ತೆ ನಮಗೆ ಬರೊಲ್ಲ, ಹೈವೆ ಪ್ರಾಧಿಕಾರಿಗಳಿಗೆ ಎಂಬ ಸಬೂಬು ಹೇಳುತ್ತಿದ್ದಾರೆ. ಈ ಸಾಲಿಗೆ  ವಿದ್ಯಾನಗರದ ರಸ್ತೆಗಳು ಸೇರಿವೆ. 


ಆದರೆ ಇಂದು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸಿಮೆಂಟು, ಗಾರೆ, ಜಲ್ಲಿ ಹಿಡಿದು ಎದುರಿನ ಮುಖ್ಯ ರಸ್ತೆಗಳ ಗುಂಡಿ ಮುಚ್ಚಿರುವುದು ಸಂಬಂಧ ಪಟ್ಟ ಇಲಾಖೆಗಳೆ ನಾಚುವಂತೆ ಮಾಡಿದ್ದಾರೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಸಾರ್ವಜನಿಕರು ತಮ್ಮ ಮನೆ ಎದುರಿನ ರಸ್ತೆಗಳ ಗುಂಡಿಗಳನ್ನ ಮುಚ್ಚುವ ಜವಬ್ದಾರಿ ನಿಮ್ಮದೆ ಎಂದು ಆದೇಶ ಹೊರಡಿಸಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?

Students block road pothole

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close