ನೂತನ ಹಂಪ್ಸ್ ಗಳಿಗೆ ಬಣ್ಣ ರೆಡಿ!The paint for the new humps is ready!

 SUDDILIVE || SHIVAMOGGA

ನೂತನ ಹಂಪ್ಸ್ ಗಳಿಗೆ ಬಣ್ಣ ರೆಡಿ!The paint for the new humps is ready

Humps, paint


ರೈಲ್ವೆ ನಿಲ್ದಾಣದಿಂದ ಉಷಾ ನರ್ಸಿಂಗ್ ಹೋಂ ಕಡೆಗೆ ಹೋಗುವ ರಸ್ತೆಯಲ್ಲಿ ಊತನವಾಗಿ ನಿರ್ಮಿಸಲಾಗಿದ್ದ ಹಂಪ್ ಗಳು ದ್ವಿಚಕ್ರ ವಾಹನ ಸವಾರರ ಅರಿವಿಗೆ ಬಾರದೆ ಅಪಘಾತ ಉಂಟಾಗುತ್ತಿದ್ದ ಬೆನ್ನಲ್ಲೇ ಪೊಲೀಸ ಇಲಾಖೆ ಎಚ್ಚತ್ತುಕೊಂಡಿದೆ. 

ಕರವೇ ಸಿಂಹ ಸೇನೆ ನಿನ್ನೆ ರಾತ್ರಿ ಈ ಹಂಪ್ ಗಳನ್ನ ಹಾರಿಸಿ ಗಾಯಗೊಂಡಿದ್ದ ದ್ವಿಚಕ್ರವಾಹನ ಸವಾರನನ್ನ ಉಪಚರಿಸಿದ್ದು, ಇದರ ಬೆನ್ನಲ್ಲೇ ಸುದ್ದಿಲೈವ್ ಗೆ ದೃಶ್ಯ ಸಮೇತ ಮಾಹಿತಿ ನೀಡಿದ್ದರು. ಸುದ್ದಿಲೈವ್ ಈ ಮಾಹಿತಿಯನ್ನ ಪ್ರಕಟಿಸಿತ್ತು. ಇದರ ಜೊತೆ ಪೊಲೀಸ್ ಇಲಾಖೆ ಸಹ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದೆ. 

ಈ ರಸ್ತೆಯಲ್ಲಿ ದಿಡೀರ್ ಎಂದು ಹಂಪ್ ಗಳನ್ನ ನಿರ್ಮಿಸಿ ರಿಫ್ಲೇಕ್ಟರ್ ಗಳನ್ನ‌ಅಥವಾ ಬಣ್ಣ, ರೇಡಿಯಂ ಸ್ಟಿಕ್ಕರ್ ಇಲ್ಲದೆ ಮುಂಜಾಗೃತ ಕ್ರಮ ಕೈಗೊಳ್ಳದೆ ಇರುವುದರಿಂದ ಐದು ಅಪಘಾತಗಳು ಸಂಭವಿಸಿತ್ತು. ನಿನ್ನೆ ರಾತ್ರಿ ರಿಫ್ಲೆಕ್ಟರ್ ಇಲ್ಲದೆ ಹೊಟೆಲ್ ಕಾರ್ಮಿಕನೊರ್ವ ಬಿದ್ದು ಗಾಯಗೊಂಡಿದ್ದ. ಸಂಘನೆಯ ಕಾರ್ಯಕರ್ತರು ಸಹ ರಾತ್ರಿ 12 ಗಂಟೆಯ ವರೆಗೆ ಪೊಲೀಸ್ ಡ್ಯೂಟಿ ಮಾಡಿದ್ವಿಚಕ್ರವಾಹನ ಸವಾರರನ್ನ ಎಚ್ಚರಿಸುವ ಕೆಲಸ ಮಾಡಿದ್ದರು. 

ಇದೀಗ ಪೊಲೀಸ್ ಇಲಾಖೆ  ಉಷಾ ಮತ್ತು ರೈಲ್ವೆ ನಿಲ್ದಾಣದ ಮಾರ್ಗದಲ್ಲಿರುವ ನೂತನ ಹಂಪ್ಸ್ ಗಳಿಗೆ ಪೈಟಿಂಗ್ ಮಾಡಿ ಹಂಪ್ಸ್ ಗಳನ್ನ ದ್ವಿಚಕ್ರವಾಹನ ಸವಾರರುಗುರುತಿಸುವಂತೆ ಮಾಡಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

The paint for the new humps is ready

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close