ಕಾರಾಗೃಹದ ಎಸ್.ಡಿ.ಎನೇ ಗಾಂಜಾ ಪೆಡ್ಲರ್!The prison SDA is a marijuana smuggler!

SUDDILIVE || SHIVAMOGGA

ಕಾರಾಗೃಹದ ಎಸ್.ಡಿ.ಎನೇ ಗಾಂಜಾ ಪೆಡ್ಲರ್!The prison SDA is a marijuana smuggler!     

SDA, Marijuana

ಶಿವಮೊಗ್ಗದ ಕಾರಾಗೃಹದಲ್ಲಿ ಗಾಂಜಾ ಪತ್ತೆಯಾಗುತ್ತಿದ್ದರೂ ಇಷ್ಟು ದಿನ ಒಂದು ಪೀಸು ಗಾಂಜಾ ಪತ್ತೆಯಾಗುತ್ತಿರಲಿಲ್ಲ‌ ಪ್ರತಿಭಾರಿ ಪೊಲೀಸ್ ದಾಳಿ ನಡೆದಾಗ ಗಾಂಜಾದ ಪೀಸು ಸಿಗದೆ ಖೈದಿಗಳು ಪರಾಗುತ್ತಿದ್ದರು. ಈ ಬಾರಿ KSFSI ಪೊಲೀಸರ ಖಡಕ್ ದಾಳಿಗೆ ಕಾರಾಗೃಹದ ಎಸ್ ಡಿಎ ಬಳಿಯೇ ಗಾಂಜಾ ಪತ್ತೆಯಾಗಿದೆ. 

ದಿನಾಂಕ: 20/11/2025 ರಂದು ಬೆಳಗ್ಗೆ 10:20 ಗಂಟೆಯ ಸಮಯದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆ.ಎಸ್.ಐ.ಎಸ್.ಎಫ್ ಇನ್ಸ್ ಪೆಕ್ಟರ್ ಆದ ಜಗದೀಶ್ ರವರ ನೇತೃತ್ವದಲ್ಲಿ ಅಧಿಕಾರಿಯಾದ ಪ್ರೊ. ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಕಪ್ಪೇರ ಬಸವರಾಜ್ ರವರು ಕೇಂದ್ರ ಕಾರಾಗೃಹದಲ್ಲಿ ಎಸ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾತ್ವಿಕ್,  25 ವರ್ಷ ರವರು ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಅವರನ್ನು ತಪಾಸಣೆ ಮಾಡಿದ್ದು ಅವರು ತಮ್ಮ ಒಳ ಉಡುಪಿನಲ್ಲಿ ಗಮ್ ಟೇಪಿನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡು ಬಂದಿರುವುದನ್ನು ಪತ್ತೆಹಚ್ಚಿರುತ್ತಾರೆ.


ಈ ಬಗ್ಗೆ ಡಾ. ರಂಗನಾಥ್ ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹರವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 694/2025 ಕಲಂ 42 ಅಮೆಂಡಮೆಂಟ್ ಆಫ್ ಕರ್ನಾಟಕ ಪ್ರಿಸನ್ ಆಕ್ಟ್-2022 ಹಾಗೂ ಕಲಂ 20(b)(II)(A) NDPS Act-1985 ರಿತ್ಯಾ ಪ್ರಕರಣ ದಾಖಲಾಗಿರುತ್ತದೆ. 

ಸದರಿ ಪ್ರಕರಣದಲ್ಲಿ 170 ಗ್ರಾಂ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡು ಆರೋಪಿ ಸಾತ್ವಿಕ್ ನನ್ನು ದಸ್ತಗಿರಿ ಮಾಡಲಾಗಿರುತ್ತದೆ.

The prison SDA is a marijuana smuggler

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close