ಜಂಗಲ್ ರೆಸಾರ್ಟ್ ಗೆ ಹೋಗುವಾಗ ಪ್ರವಾಸಿಗರು ಜಸ್ಟ್ ಮಿಸ್!Tourists just miss out on going to the jungle resort!

 SUDDILIVE || SHIVAMOGGA

ಜಂಗಲ್ ರೆಸಾರ್ಟ್ ಗೆ ಹೋಗುವಾಗ ಪ್ರವಾಸಿಗರು ಜಸ್ಟ್ ಮಿಸ್!Tourists just miss out on going to the jungle resort!   

Tourist, jungleresort


ಶಿವಮೊಗ್ಗದ ಭದ್ರಾವತಿಯ ಬಿಆರ್ ಪಿಯ ಭದ್ರ ಡ್ಯಾಂನಿಂದ ಜಂಗಲ್ ರೆಸಾರ್ಟ್ ಗೆ ಹೋಗುವ ದಾರಿಯಲ್ಲೇ ಕಾಡಾನೆಯೊಂದು  ಪ್ರತ್ಯಕ್ಷವಾಗಿದೆ. ರಸ್ತೆಯ ಮೇಲೆ ನಡೆದುಕೊಂಡು ಬಂದ ಕಾಡಾನೆಯಿಂದ ಪ್ರವಾಸಿಗರು ಜಸ್ಟ್ ಮಿಸ್ ಆಗಿದ್ದಾರೆ. 

ಬಿಆರ್ ಪಿ ಶಿವಮೊಗ್ಗ ಜಿಲ್ಲೆಯಾಗಿದ್ದರೆ. ಜಂಗಲ್ ರೆಸಾರ್ಟ್ ಚಿಕ್ಕಮಗಳೂರು ಜಿಲ್ಲೆಗೆ ಸೇರಲಿದೆ. ಆದರೆ ಡ್ಯಾಂನಿಂದ ಕೊಂಚ ದೂರದಲ್ಲೇ ಇರುವ ರಸ್ತೆಯ ಮೇಲೆ ನಡೆದುಕೊಂಡು ಬಂದ ಕಾಡಾನೆ ಪ್ರವಾಸಿಗರನ್ನ ದಾಳಿ ಮಾಡಿದೆ. ದಾಳಿಯಲ್ಲಿ ಕೊಂಚ ದೂರ ಪ್ರವಾಸಿಗರನ್ನ ಅಟ್ಟಾಡಿಸಿಕೊಂಡು ಬಂದಿದೆ.


ಕಾಡಾನೆ ದಾಳಿಗೆ ಇಂದು ಜಿಲ್ಲ ಉಸ್ತುವರಿ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರಂಚ್ ಮತ್ತು ಸೋಲಾರ್ ಬೇಲಿಗೆ ಒತ್ತಾಯಿಸಲಾಗಿದೆ. ಆನೆ ಸ್ಕ್ವಾಡ್ ನ್ನ ರಚಿಸಲು ಸೂಚಿಸಲಾಗಿದೆ. ಆದರೆ ಇಂದು ಬೆಳಿಗ್ಗೆ ಕಾಡಾನೆ ಪ್ರವಾಸಿಗರನ್ನ ಅಟ್ಟಿಸಿಕೊಂಡು ಬಂದಿದೆ.

ಜಲಾಶಯದಿಂದ ಜಂಗಲ್ ರೆಸಾರ್ಡ್ ಗೆ ಹೋಗುತ್ತಿದ್ದ ಪ್ರವಾಸಿಗರ ಎದೆಯನ್ನೇ ಕಾಡಾನೆ‌ ಝಲ್ ಎನಿಸಿದೆ. ಘೀಳಿಟ್ಟಿದೆ. ಒಂದು ವೇಳೆ ಕಾಡಾನೆ ದಾಳಿಗೆ ಪ್ರವಾಸಿಗರಿಗೆ ತೊಂದರೆ ಆಗಿದ್ದರೆ ಜಂಗಲ್ ರೆಸಾರ್ಟ್ ಗೆ ಪ್ರವಾಸಿಗರು ಬರುತ್ತಾರಾ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಿದೆ. 

Tourists just miss out on going to the jungle resort! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close